ಗಬ್ಬಾ ಮೈದಾನದಲ್ಲಿ ಪಂತ್ ಬಾರಿಸಿದ ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆಯೇ ಲಕ್ಷ್ಮಣ್ ಅತ್ತುಬಿಟ್ಟರು!
ಆಸ್ಟ್ರೇಲಿಯಾ, ಗಬ್ಬಾ ಮೈದಾನದಲ್ಲಿ 32 ವರ್ಷಗಳಿಂದ ಅಜೇಯ ದಾಖಲೆಯನ್ನು ಹೊಂದಿತ್ತು. ಆದರೆ ಭಾರತ ಅತಿಥೇಯರನ್ನು ಸೋಲಿಸಿದ್ದು ಅಸಾಮಾನ್ಯ ಸಾಧನೆ ಎಂದು ಹೈದರಾಬಾದಿನ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಬ್ರಿಸ್ಬೇನ್ ಗಬ್ಬಾ ಮೈದಾನದಲ್ಲಿ ಕಳೆದ ತಿಂಗಳು ಭಾರತ ಸಾಧಿಸಿದ ಐತಿಹಾಸಿಕ ಟೆಸ್ಟ್ ಮತ್ತು ಸರಣಿ ಗೆಲುವನ್ನು ಯಾವ ಭಾರತೀಯ ತಾನೆ ಮರೆತಾನು? ಭಾರತೀಯರು ಬಿಡಿ, ಹಲವಾರು ವಿದೇಶಿ ಕ್ರಿಕೆಟ್ ಆಟಗಾರರು ಸಹ ಟೀಮ್ ಇಂಡಿಯಾದ ಗೆಲುವನ್ನು ಮುಕ್ತವಾಗಿ ಕೊಂಡಾಡಿದರು. ಭಾರತದ ಉತ್ಕೃಷ್ಟ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಹೈದರಾಬಾದಿನ ವಿವಿಎಸ್ ಲಕ್ಷ್ಮಣ್ ಭಾರತ ಗಬ್ಬಾದಲ್ಲಿ ಗೆದ್ದ ನಂತರ ಭಾವೋದ್ವೇಗಕ್ಕೊಳಗಾಗಿ ಗಳಗಳನೆ ಅತ್ತಬಿಟ್ಟರಂತೆ. ರಾಷ್ಟ್ರೀಯ ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಲಕ್ಷಣ್ ತಾವು ಅತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾ, ಗಬ್ಬಾ ಮೈದಾನದಲ್ಲಿ 32 ವರ್ಷಗಳಿಂದ ಅಜೇಯ ದಾಖಲೆಯನ್ನು ಹೊಂದಿತ್ತು. ಆದರೆ ಭಾರತ ಅತಿಥೇಯರನ್ನು ಸೋಲಿಸಿದ್ದು ಅಸಾಮಾನ್ಯ ಸಾಧನೆ, ಗೆಲುವಿಗೆ ಸಾಮೂಹಿಕ ಪ್ರಯತ್ನ ನೆರವಾಯಿತಾದರೂ, ಅಜಿಂಕ್ಯಾ ರಹಾನೆಯವರ ನಾಯಕತ್ವ, ರಿಷಭ್ ಪಂತ್ಮ ಶುಭ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರಾ ಅವರ ಬ್ಯಾಟಿಂಗ್ ಅಪ್ರತಿಮವಾಗಿದ್ದವು ಎಂದು ಲಕ್ಷ್ಮಣ್ ಸಂದರ್ಶನದಲ್ಲಿ ಹೇಳಿದರು.
ತನ್ನಿಡೀ ಕರೀಯರ್ನಲ್ಲಿ ಸಾಧಿಸಲಾಗದ್ದನ್ನು ಬಾರತದ ಯುವಪಡೆ ಗಬ್ಬಾದಲ್ಲಿ ಸಾಧಿಸಿತು ಎಂದ ಲಕ್ಷ್ಮಣ್, ‘ನಾನು ಆಡುತ್ತಿದ್ದ ದಿನಗಳಲ್ಲಿ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಸೋಲಿಸಿ ಸರಣಿ ಗೆಲ್ಲುವುದು ಸಾಧ್ಯವಾಗಿರಲಿಲ್ಲ, ಆದರೆ ರಹಾನೆ ನಾಯಕತ್ವದ ಭಾರತದ ತಂಡ ಅದನ್ನು ಸಾಧಿಸಿತು. ಸರಣಿಯಲ್ಲಿ ಜಾರಿಯಲ್ಲಿದ್ದಾಗ ನಡೆಯುತ್ತಿದ್ದ ಪ್ರತಿಯೊಂದು ವಿದ್ಯಮಾನವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಗಬ್ಬಾ ಮೈದಾನದಲ್ಲಿ ರಿಷಭ್ ಪಂತ್ ಬಾರಿಸಿದ ಚೆಂಡು ಬೌಂಡರಿಗೆರೆಯನ್ನು ದಾಟಿದಾಗ ಉಕ್ಕಿ ಬರುತ್ತಿದ್ದ ಭಾವನೆಗಳನ್ನು ಹತ್ತಿಕ್ಕಲಾಗದೆ ಅತ್ತುಬಿಟ್ಟೆ’ ಅಂತ ಹೇಳಿದರು.
ಇದನ್ನೂ ಓದಿ: ಭಾರತ vs ಇಂಗ್ಲೆಂಡ್ ಮೂರೂ ಆವೃತ್ತಿಗಳ ಕ್ರಿಕೆಟ್ ಕದನದ ಸ್ಥಳ, ವೇಳಾಪಟ್ಟಿ ಇಲ್ಲಿದೆ..
ತನ್ನಿಡೀ ಕರೀಯರ್ನಲ್ಲಿ ಸಾಧಿಸಲಾಗದ್ದನ್ನು ಭಾರತದ ಯುವಪಡೆ ಗಬ್ಬಾದಲ್ಲಿ ಸಾಧಿಸಿತು ಎಂದ ಲಕ್ಷ್ಮಣ್, ‘ನಾನು ಆಡುತ್ತಿದ್ದ ದಿನಗಳಲ್ಲಿ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಸೋಲಿಸಿ ಸರಣಿ ಗೆಲ್ಲುವುದು ಸಾಧ್ಯವಾಗಿರಲಿಲ್ಲ, ಆದರೆ ರಹಾನೆ ನಾಯಕತ್ವದ ಭಾರತದ ತಂಡ ಅದನ್ನು ಸಾಧಿಸಿತು. ಸರಣಿಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿದ್ಯಮಾನವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಗಬ್ಬಾ ಮೈದಾನದಲ್ಲಿ ರಿಷಭ್ ಪಂತ್ ಬಾರಿಸಿದ ಚೆಂಡು ಬೌಂಡರಿಗೆರೆಯನ್ನು ದಾಟಿದಾಗ ಉಕ್ಕಿ ಬರುತ್ತಿದ್ದ ಭಾವನೆಗಳನ್ನು ಹತ್ತಿಕ್ಕಲಾಗದೆ ಅತ್ತುಬಿಟ್ಟೆ’ ಅಂತ ಹೇಳಿದರು.
ಅಡಿಲೇಡ್ ಟೆಸ್ಟ್ ಪಂದ್ಯದ ಕೊನೆಯ ದಿನದಾಟವನ್ನು ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಕೂತು ವೀಕ್ಷಿಸುತ್ತಿದ್ದ ವಿಷಯವನ್ನು ಲಕ್ಷ್ಮಣ್ ಸಂದರ್ಶನದಲ್ಲಿ ಹೇಳಿದರು. ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟ್ ಮಾಡುತ್ತಿದ್ದಾಗ ತಾನು ಆತಂಕಕ್ಕೊಳಗಾಗಿದ್ದೆ ಎಂದು ಲಕ್ಷ್ಮಣ್ ತಮ್ಮ ಟ್ವೀಟ್ನಲ್ಲೂ ಹೇಳಿದ್ದಾರೆ.
‘ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕು ಅಂತ ಅಂದುಕೊಳ್ಳುತ್ತಿದ್ದೆ. ಗಬ್ಬಾ ಮೈದಾನದಲ್ಲಿ ಮತ್ತು ಅದಕ್ಕಿಂತ ಮೊದಲು ಅಸ್ಟ್ರೇಲಿಯಾದಲ್ಲಿ ಏನೆಲ್ಲ ನಡೆಯಿತು ಅಂತ ನನಗೆ ಚೆನ್ನಾಗಿ ಗೊತ್ತಿದೆ. ಎಲ್ಲರೂ ಟೀಮ್ ಇಂಡಿಯಾ ಸಾಮರ್ಥ್ಯವನ್ನು ಅಂಡರ್ಎಸ್ಟಿಮೇಟ್ ಮಾಡಿದ್ದರು ಮತ್ತು ಆಸ್ಟ್ರೇಲಿಯಾ ಸರಣಿಯನ್ನು ಅದಾಗಲೇ ಗೆದ್ದುಬಿಟ್ಟಿದೆ ಎಂದು ಭಾವಿಸಿದ್ದರು, ಎಂದು ಟ್ವೀಟ್ನಲ್ಲಿ ಲಕ್ಷ್ಮಣ್ ಹೇಳಿದ್ದರು.
@ajinkyarahane88 led the side brilliantly, giving a lot of confidence to youngsters and Pujara exhibited his steely resolve once again. Can’t forget the young bowling unit. Fantastic team effort?? #AUSvsIND
— VVS Laxman (@VVSLaxman281) January 19, 2021
ಭಾರತದ ಕ್ರಿಕೆಟ್ ಇತಿಹಾಸಕ್ಕೆ ಸಂಬಂಧಿಸಿದಂತೆ ತಾವು ಎರಡು ಬಾರಿ ಭಾವೋತ್ಕರ್ಷಕ್ಕೆ ಒಳಗಾಗಿ ಅತ್ತಿರುವುದಾಗಿ ಲಕ್ಷ್ಮಣ್ ಹೇಳಿದರು. ಅವರು ಮೊದಲ ಬಾರಿ ಅತ್ತಿದ್ದು 2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಅಂತೆ. ವಿಶ್ವಕಪ್ ಗೆಲ್ಲುವ ಭಾರತೀಯ ತಂಡದ ಭಾಗವಾಗಬೇಕೆನ್ನುವುದು ತನ್ನ ಮಹದಾಸೆಯಾಗಿತ್ತು ಎಂದ ಅವರು ಆ ಆಸೆ ಈಡೇರದೆ ಹೋದರೂ, ವಿಶ್ವಕಪ್ ಗೆದ್ದ ತಂಡದ ಆಟಗಾರರ ಜೊತೆ ಆಡಿದ ಮತ್ತು ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಹೆಮ್ಮೆ ತನಗಿದೆ ಎಂದು ಲಕ್ಷ್ಮಣ್ ಹೇಳಿದರು.
ಎರಡನೇ ಬಾರಿ ಅತ್ತಿದ್ದು ಮೊನ್ನೆ ಭಾರತ ಅಡಿಲೇಡ್ ಮೈದಾನದಲ್ಲಿ ಗೆಲುವು ಸಾಧಿಸಿದಾಗ ಎಂದು ಲಕ್ಷ್ಮಣ್ ಹೇಳಿಕೊಂಡಿದ್ದಾರೆ. ಭಾರತದ ಯುವ ತಂಡ ತನ್ನ ಕಣ್ಣುಗಳಲ್ಲಿ ನೀರು ಬರುವಂತೆ ಮಾಡಿದ್ದು ಹೆಮ್ಮೆಯ ಸಂಗತಿ, ಭಾರತದ ಈ ಗೆಲುವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅಂತ ವೆರಿವೆರಿ ಸ್ಪೆಷಲ್ ಎಂದು ಲಕ್ಷ್ಮಣ್ ಹೇಳಿದರು.
India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!
Published On - 7:02 pm, Wed, 3 February 21