IND vs ENG: ಉಮೇಶ್ ಯಾದವ್ ಬೆಂಕಿಯ ಚೆಂಡಿಗೆ ಉರುಳಿದ ವಿಕೆಟ್​ಗಳು: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್

| Updated By: Vinay Bhat

Updated on: Jul 22, 2021 | 7:23 AM

ಟೀಮ್ ಇಂಡಿಯಾಕ್ಕೆ ಮೊದಲ ಬ್ರೇಕ್ ನೀಡಿದ್ದು ಉಮೇಶ್ ಯಾದವ್. ಜ್ಯಾಕ್ ಲಿಬ್ಬಿ 12 ರನ್ ಗಳಿಸಿರುವಾಗ ಉಮೇಶ್ ಅವರ ಬೆಂಕಿಯ ಚೆಂಡಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.

IND vs ENG: ಉಮೇಶ್ ಯಾದವ್ ಬೆಂಕಿಯ ಚೆಂಡಿಗೆ ಉರುಳಿದ ವಿಕೆಟ್​ಗಳು: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್
India vs Country XI
Follow us on

ಚೆಸ್ಟರ್​-ಲೀ ಸ್ಟ್ರೀಟ್ ಮೈದಾನದಲ್ಲಿ ಭಾರತ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡಗಳ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಭಾರತ 311 ರನ್​ಗೆ ಆಲೌಟ್ ಆಗಿ ಬೌಲಿಂಗ್ ಆರಂಭಿಸಿದ್ದು, ಬೌಲರ್​ಗಳು ಮಾರಾಕ ದಾಳಿ ಸಂಘಟಿಸುತ್ತಿದ್ದಾರೆ. ನಿನ್ನೆ ಬುಧವಾರ ಎರಡನೇ ದಿನದಾಟದ ಅಂತ್ಯಕ್ಕೆ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡ 9 ವಿಕೆಟ್ ನಷ್ಟಕ್ಕೆ 220 ರನ್​ ಗಳಿಸಿದೆ. ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಜಸ್​ಪ್ರೀತ್ ಬುಮ್ರಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಟೀಮ್ ಇಂಡಿಯಾಕ್ಕೆ ಮೊದಲ ಬ್ರೇಕ್ ನೀಡಿದ್ದು ಉಮೇಶ್ ಯಾದವ್. ಜ್ಯಾಕ್ ಲಿಬ್ಬಿ 12 ರನ್ ಗಳಿಸಿರುವಾಗ ಉಮೇಶ್ ಅವರ ಬೆಂಕಿಯ ಚೆಂಡಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ರಾಬರ್ಟ್ ಯೇಟ್ಸ್ ವಿಕೆಟ್ ಅನ್ನು ಜಸ್​ಪ್ರೀತ್ ಬುಮ್ರಾ ಕಿತ್ತರು. 1 ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್​ರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು. ಈ ವಿಡಿಯೋವನ್ನು ದುರ್ಹಾಮ್ ಕ್ರಿಕೆಟ್ ಹಂಚಿಕೊಂಡಿದೆ.

 

ಬಹುತೇಕ ಒಂದು ತಿಂಗಳ ವಿರಾಮದ ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿಯನ್ನು ಪಡೆದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ತಂಡಕ್ಕಿಂತ ಕೆಲ ಪ್ರಮುಖ ಬದಲಾವಣೆಗಳನ್ನು ಈ ತಂಡದಲ್ಲಿ ಮಾಡಿಕೊಳ್ಳಲಾಗಿದೆ. ಕೊರೊನಾವೈರಸ್‌ಗೆ ತುತ್ತಾಗಿರುವ ರಿಷಭ್ ಪಂತ್ ಅಭ್ಯಾಸ ಪಂದ್ಯದಿಂದ ಅನಿವಾರ್ಯವಾಗಿ ಹೊರಗುಳಿದಿದ್ದು ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ.

 

ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾದರು ಮೂರನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರಾ 21 ರನ್ ಗಳಿಸಿದರೆ, ಕೊಹ್ಲಿ ಸ್ಥಾನದಲ್ಲಿ ಆಡಿದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ 24 ರನ್​ಗೆ ಸುಸ್ತಾದರು.

ಭಾರತದ ಸ್ಕೋರ್ 107 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕೆ. ಎಲ್ ರಾಹುಲ್​ರನ್ನು ಜೊತೆಗೂಡಿದ ಆಲ್​ರೌಂಡರ್ ರವೀಂದ್ರ ಜಡೇಜಾ 5 ನೇ ವಿಕೆಟ್​ಗೆ 127 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಸೆಲೆಕ್ಟ್ ಇಲೆವೆನ್ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿ ಆಡಿದ ಕನ್ನಡಿಗ 150 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ನಿವೃತ್ತರಾದರು.

ರಾಹುಲ್ ಔಟಾದ ನಂತರ ರನ್​ ಗಳಿಕೆಯ ವೇಗವನ್ನು ಹೆಚ್ಚಿಸಿದ ಜಡೇಜಾ ತಮ್ಮ ಅರ್ಧ ಶತಕವನ್ನು ಪೂರೈಸಿದರು. 146 ಎಸೆತಗಳನ್ನಾಡಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 75 ರನ್ ಬಾರಿಸಿ ಔಟಾದರು. ಭಾರತ ಅಂತಿಮವಾಗಿ 311 ರನ್ ಕಲೆಹಾಕಿತು.

ಓಪನರ್ ಹಸೀಬ್ ಹಮೀದ್ ಶತಕ ಬಾರಿಸಿದರೂ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳದ್ದೇ ಮೇಲುಗೈ

ಮ್ಯಾಂಚೆಸ್ಟರ್​ನಲ್ಲಿ ಇನ್ನೊಂದು ಘಟನೆ: ಕ್ರಿಕೆಟ್​ ಸ್ಟೇಡಿಯಂನಲ್ಲಿ ಪ್ರೇಯಸಿಗೆ ಪ್ರಪೋಸ್ ಮಾಡುವುದು ಹೊಸ ಸಂಪ್ರದಾಯವೇ?

(India vs England stumps go flying as Umesh yadav cleans up Libby in practice match against County XI)