Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ

| Updated By: Vinay Bhat

Updated on: Jul 22, 2021 | 9:55 AM

ದುರ್ಹಾಮ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕಿಂಗ್ ಕೊಹ್ಲಿ ಮನಮೋಹಕ ಹೊಡೆತಗಳ ಮೂಲಕ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.

Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ
Virat Kohli
Follow us on

ಆಗಸ್ಟ್‌ 4ರಂದು ಇಂಗ್ಲೆಂಡ್ (England) ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಟೀಮ್ ಇಂಡಿಯಾ (Team India) ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಒಂದುಕಡೆ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಭಾರತ ತಂಡ ಕೌಂಟಿ ಸೆಲೆಕ್ಟ್ XI ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದರೆ, ಇತ್ತ ವಿರಾಟ್ ಕೊಹ್ಲಿ (Virat Kohli) ಒಬ್ಬರೆ  ನೆಟ್​ನಲ್ಲಿ ಭರ್ಜರಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದಾರೆ. ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡುತ್ತಿರುವ ಚೆಸ್ಟರ್​-ಲೀ ಸ್ಟ್ರೀಟ್ ಮೈದಾನದಲ್ಲೇ ಊಟದ ವಿರಾಮದ ವೇಳೆ ಕೊಹ್ಲಿ ಬ್ಯಾಟ್ ಹಿಡಿದು ಗ್ರೌಂಡ್​ನಲ್ಲಿ ಬೆವರಿಳಿಸಿದರು.

ದುರ್ಹಾಮ್ ಕ್ರಿಕೆಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕಿಂಗ್ ಕೊಹ್ಲಿ ಮನಮೋಹಕ ಹೊಡೆತಗಳ ಮೂಲಕ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಬಿಸಿಸಿಐ ಕೂಡ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಭವ ಎಂದು ಕ್ಯಾಪ್ಶನ್ ನೀಡಿ ವಿಡಿಯೋ ಶೇರ್ ಮಾಡಿಕೊಂಡಿದೆ.

 

ಸದ್ಯ ಸಾಗುತ್ತಿರುವ ಕೌಂಟಿ ಸೆಲೆಕ್ಟ್ XI ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿಲ್ಲ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಆಡುತ್ತಿದೆ. ಅಜಿಂಕ್ಯಾ ರಹಾನೆ ಕೂಡ ಅಭ್ಯಾಸ ಪಂದ್ಯದಲ್ಲಿ ಆಡುತ್ತಿಲ್ಲ.

 

ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾದರು ಮೂರನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರಾ 21 ರನ್ ಗಳಿಸಿದರೆ, ಕೊಹ್ಲಿ ಸ್ಥಾನದಲ್ಲಿ ಆಡಿದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ 24 ರನ್​ಗೆ ಸುಸ್ತಾದರು.

ಭಾರತದ ಸ್ಕೋರ್ 107 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕೆ. ಎಲ್ ರಾಹುಲ್​ರನ್ನು ಜೊತೆಗೂಡಿದ ಆಲ್​ರೌಂಡರ್ ರವೀಂದ್ರ ಜಡೇಜಾ 5 ನೇ ವಿಕೆಟ್​ಗೆ 127 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಸೆಲೆಕ್ಟ್ ಇಲೆವೆನ್ ಬೌಲರ್​ಗಳನ್ನು ಲೀಲಾಜಾಲವಾಗಿ ಎದುರಿಸಿ ಆಡಿದ ಕನ್ನಡಿಗ 150 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ನಿವೃತ್ತರಾದರು.

ರಾಹುಲ್ ಔಟಾದ ನಂತರ ರನ್​ ಗಳಿಕೆಯ ವೇಗವನ್ನು ಹೆಚ್ಚಿಸಿದ ಜಡೇಜಾ ತಮ್ಮ ಅರ್ಧ ಶತಕವನ್ನು ಪೂರೈಸಿದರು. 146 ಎಸೆತಗಳನ್ನಾಡಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 75 ರನ್ ಬಾರಿಸಿ ಔಟಾದರು. ಭಾರತ ಅಂತಿಮವಾಗಿ 311 ರನ್ ಕಲೆಹಾಕಿತು. ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಕೌಂಟಿ ಸೆಲೆಕ್ಟ್ ಇಲೆವೆನ್ ತಂಡ 9 ವಿಕೆಟ್ ನಷ್ಟಕ್ಕೆ 220 ರನ್​ ಗಳಿಸಿದೆ.

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್ (ಗಾಯಗೊಂಡು ಸರಣಿಯಿಂದ ಔಟ್), ಮಾಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಕೆಎಲ್‌ ರಾಹುಲ್ ಮತ್ತು ವೃದ್ಧಿಮಾನ್ ಸಹಾ.

ಕಾಯ್ದಿರಿಸಿದ ಆಟಗಾರರು: ಪ್ರಸಿಧ್ ಕೃಷ್ಣ, ಅಭಿಮನ್ಯು ಈಶ್ವರನ್, ಅರ್ಝಾನ್ ನಾಗವಾಸವಾಲ, ಅವೇಶ್ ಖಾನ್.

‘ಎಬಿ ಡಿವಿಲಿಯರ್ಸ್​ ನನ್ನ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿದರು’: ಹೀಗೆ ಹೇಳಿದ್ದು ಯಾರು ಗೊತ್ತಾ?

IND vs ENG: ಭಾರತ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

(India vs England Virat Kohli In The Nets At Durham Is Pure Bliss)