‘ಎಬಿ ಡಿವಿಲಿಯರ್ಸ್​ ನನ್ನ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿದರು’: ಹೀಗೆ ಹೇಳಿದ್ದು ಯಾರು ಗೊತ್ತಾ?

ಎಬಿ ಡಿವಿಲಿಯರ್ಸ್ ಅವರು ನನ್ನ ಕ್ರಿಕೆಟ್ ವೃತ್ತಿ ಜೀವನವನ್ನೇ ಹಾಳು ಮಾಡಿದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಥಮಿ ತ್ಸೊಲೆಕಿಲೆ ಗಂಭೀರ ಆರೋಪ ಮಾಡಿದ್ದಾರೆ.

'ಎಬಿ ಡಿವಿಲಿಯರ್ಸ್​ ನನ್ನ ಕ್ರಿಕೆಟ್ ಜೀವನವನ್ನೇ ಹಾಳು ಮಾಡಿದರು': ಹೀಗೆ ಹೇಳಿದ್ದು ಯಾರು ಗೊತ್ತಾ?
AB De Villiers
Follow us
TV9 Web
| Updated By: Vinay Bhat

Updated on: Jul 22, 2021 | 7:57 AM

ಕ್ರಿಕೆಟ್ ಜಗತ್ತಿನಲ್ಲಿ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​ಮನ್​ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ಗೆ (AB de Villiers) ವಿಶ್ವದಲ್ಲಿ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಈ ಪೈಕಿ ಭಾರತದಲ್ಲೇ ಅತಿ ಹೆಚ್ಚು ಎಂದು ಹೇಳಬಹುದು. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL) ಇವರು ಆರ್​ಸಿಬಿ (RCB) ಪರ ಆಡುತ್ತಿರುವುದರಿಂದ ಬೆಂಗಳೂರಿಗರಿಗೆ ಅಚ್ಚುಮೆಚ್ಚು. ಅದೆಷ್ಟೊ ಯುವ ಆಟಗಾರರಿಗೆ ಸ್ಪೂರ್ತಿ ಆಗಿರುವ ಎಬಿಡಿ ಬಗ್ಗೆ ಮಾಜಿ ಆಟಗಾರ ಗಂಭೀರ ಆರೋಪ ಮಾಡಿದ್ದಾರೆ.

ಎಬಿ ಡಿವಿಲಿಯರ್ಸ್ ಅವರು ನನ್ನ ಕ್ರಿಕೆಟ್ ವೃತ್ತಿ ಜೀವನವನ್ನೇ ಹಾಳು ಮಾಡಿದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಥಮಿ ತ್ಸೊಲೆಕಿಲೆ ಗಂಭೀರ ಆರೋಪ ಮಾಡಿದ್ದಾರೆ. “ನಾನು ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದಲ್ಲಿ ಇರಬೇಕಾದರೆ ಡಿವಿಲಿಯರ್ಸ್ ಅವರು ತಾನು ಮಾತ್ರ ವಿಕೆಟ್‌ ಕೀಪಿಂಗ್‌ ಮಾಡಬೇಕೆಂಬ ಭಾವನೆ ಹೊಂದಿದ್ದರು. ಆದರೆ, ಈ ಸಂದರ್ಭದಲ್ಲಿ ಮಾರ್ಕ್‌ ಬೌಷರ್‌ ತಂಡದಲ್ಲಿದ್ದರು. ಹೀಗಾಗಿ ಆತ ವಿಕೆಟ್‌ ಕೀಪರ್‌ ಮಾಡಲು ಬಯಸುತ್ತಿರಲಿಲ್ಲ. ಬಳಿಕ ನಾನು ತಂಡದಲ್ಲಿ ಇರುವಾಗ ಮಾತ್ರ ಕೀಪಿಂಗ್‌ ಮಾಡಲು ಮುಂದಾಗುತ್ತಿದ್ದರು” ಎಂದು ಅವರು ಹೇಳಿದ್ದಾರೆ.

“ನನಗೆ ತುಂಬಾ ಬೇಸರ ತರಿಸಿದ್ದೇನೆಂದರೆ ನನ್ನ ರೀತಿಯ ಕೆಲವು ಆಟಗಾರರು ತಂಡದಲ್ಲಿದ್ದರು. ಆದರೆ, ಅವರು ಸಮಜಾಯಿಸುತ್ತಿದ್ದರು. ಲಿಂಡಾ ಜೊಂಡಿ ಕೂಡ ನನ್ನ ರೀತಿಯೇ ಕಪ್ಪು ಬಣ್ಣದ ಆಟಗಾರ. ಆದರೆ, ಆತ ನನ್ನ ಬಗ್ಗೆ ಎಂದಿಗೂ ಮಾತನಾಡುತ್ತಿರಲಿಲ್ಲ” ಎಂದು ಥಮಿ ತ್ಸೊಲೆಕಿಲೆ ಹೇಳಿಕೊಂಡಿದ್ದಾರೆ.

2011-14ರ ಅವಧಿಯಲ್ಲಿ ಆಫ್ರಿಕಾದ ಅತ್ಯುತ್ತಮ ವಿಕೆಟ್‌ ಕೀಪರ್‌ಗಳಲ್ಲಿ ಥಮಿ ತ್ಸೊಲೆಕಿಲೆ ಕೂಡ ಪ್ರಮುಖರಾಗಿದ್ದರು. ಇವರನ್ನು ಬ್ಯಾಕ್‌ ಆಫ್‌ ವಿ. ಕೀಪರ್ ಆಗಿ ದ. ಆಫ್ರಿಕಾ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ದುರಾದೃಷ್ಟವಶಾತ್‌ ಈ ಅವಧಿಯಲ್ಲಿ ಆಫ್ರಿಕಾ ಪರ ಒಂದೇ ಒಂದು ಪಂದ್ಯ ಆಡಲು ಅವರಿಂದ ಸಾಧ್ಯವಾಗಲಿಲ್ಲ.

ಮಾರ್ಕ್‌ ಬೌಷರ್‌ ವಿದಾಯದ ಬಳಿಕ ತ್ಸೊಲೆಕಿಲೆ ಅವರು ವಿಕೆಟ್ ಕೀಪರ್‌ ಆಗುವುದು ಖಚಿತ ಎನ್ನಲಾಗುತ್ತಿತ್ತು. ಆದರೆ, ಇದೇಚ ಸಂದರ್ಭ ಎಬಿ ಡಿವಿಲಿಯರ್ಸ್ ಅವರು ದಕ್ಷಿಣ ಆಫ್ರಿಕಾ ತಂಡದ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ಅಲಂಕರಿಸಿದರು. 2004ರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಥಮಿ ತ್ಸೊಲೆಕಿಲೆ, ಇಲ್ಲಿಯವರೆಗೂ ಆಡಿರುವುದು ಕೇವಲ 3 ಟೆಸ್ಟ್‌ ಪಂದ್ಯಗಳು ಮಾತ್ರ.

IND vs ENG: ಉಮೇಶ್ ಯಾದವ್ ಬೆಂಕಿಯ ಚೆಂಡಿಗೆ ಉರುಳಿದ ವಿಕೆಟ್​ಗಳು: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್

ಓಪನರ್ ಹಸೀಬ್ ಹಮೀದ್ ಶತಕ ಬಾರಿಸಿದರೂ ಎರಡನೇ ದಿನದಾಟದಲ್ಲಿ ಭಾರತೀಯ ಬೌಲರ್​ಗಳದ್ದೇ ಮೇಲುಗೈ

(Thami Tsolekie says AB de Villiers Damaged his Cricket career here is viral story)