India Vs Hong Kong T20 Asia Cup Highlights: ಕೊಹ್ಲಿ- ಸೂರ್ಯ ಸಿಡಿಲಬ್ಬರದ ಅರ್ಧಶತಕ; ಭಾರತಕ್ಕೆ 40 ರನ್ ಜಯ
India vs Hong Kong Asia Cup 2022: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪಂದ್ಯಾವಳಿಯ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಹಾಂಕಾಂಗ್ ತಂಡವನ್ನು 40 ರನ್‌ಗಳಿಂದ ಸೋಲಿಸಿತು
ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪಂದ್ಯಾವಳಿಯ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಹಾಂಕಾಂಗ್ ತಂಡವನ್ನು 40 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಟೀಂ ಇಂಡಿಯಾ ಸೂಪರ್ ಫೋರ್ ಸುತ್ತಿಗೆ ಲಗ್ಗೆ ಇಟ್ಟಿದೆ. ಭಾರತ ಮತ್ತೊಮ್ಮೆ ತನ್ನ ಗೆಲುವಿನ ಪಯಣವನ್ನು ದುಬೈನಲ್ಲಿಯೇ ಮುಂದುವರೆಸಿದೆ. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಇನ್ನಿಂಗ್ಸ್ ನಂತರ ಟೀಂ ಇಂಡಿಯಾ ಬೌಲರ್‌ಗಳ ನೆರವಿನಿಂದ ಎರಡನೇ ಸುತ್ತಿಗೆ ಕಾಲಿಟ್ಟಿದೆ.
LIVE NEWS & UPDATES
-
ಭಾರತಕ್ಕೆ ಜಯ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪಂದ್ಯಾವಳಿಯ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಹಾಂಕಾಂಗ್ ತಂಡವನ್ನು 40 ರನ್‌ಗಳಿಂದ ಸೋಲಿಸಿತು
-
ಅವೇಶ್ ದುಬಾರಿ ಓವರ್
ಅವೇಶ್ ಖಾನ್ ತುಂಬಾ ದುಬಾರಿಯಾಗಿದ್ದಾರೆ. 19ನೇ ಓವರ್‌ನಲ್ಲಿ 21 ರನ್‌ಗಳನ್ನು ಬಿಟ್ಟುಕೊಟ್ಟರು. ಸ್ಕಾಟ್ ಮತ್ತು ಜೀಶಾನ್ ಓವರ್‌ನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು.
-
ವಿಕೆಟ್
ಭಾರತ ದೊಡ್ಡ ಗೆಲುವಿನ ಹೊಸ್ತಿಲಲ್ಲಿದೆ. 18ನೇ ಓವರ್‌ನ ಮೊದಲ ಎಸೆತದಲ್ಲಿ ಭುವಿ ಎಸೆತದಲ್ಲಿ ರವಿ ಬಿಷ್ಣೋಯ್ ಕಿಂಚಿತ್ ಶಾ ಕ್ಯಾಚ್ ಹಿಡಿದರು. ಬಿಷ್ಣೋಯ್ ಲಾಂಗ್ ಆಫ್‌ನಿಂದ ಓಡಿ ಬಂದು ಅದ್ಭುತ ಕ್ಯಾಚ್ ಪಡೆದರು. ಶಾ 28 ಎಸೆತಗಳಲ್ಲಿ 30 ರನ್ ಗಳಿಸಿದರು
ವಿರಾಟ್ ಕೊಹ್ಲಿ ಬೌಲಿಂಗ್
ವಿರಾಟ್ ಕೊಹ್ಲಿ ಕೂಡ ಒಂದು ಓವರ್ ಬೌಲ್ ಮಾಡಿದರು. ಅವರು ತಮ್ಮ ಓವರ್‌ನಲ್ಲಿ 6 ರನ್‌ಗಳನ್ನು ಬಿಟ್ಟುಕೊಟ್ಟರು.
ಅವೇಶ್ಗೆ ವಿಕೆಟ್
ಅಂತಿಮವಾಗಿ ಅವೇಶ್ ಖಾನ್ ವಿಕೆಟ್ ಪಡೆದರು. 15ನೇ ಓವರ್‌ನ 5ನೇ ಎಸೆತದಲ್ಲಿ ಎಜಾಜ್ ಬೌಲ್ಡ್ ಆದರು. ಎಜಾಜ್ ಕೇವಲ 14 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಟೀಂ ಇಂಡಿಯಾದ ದುಬಾರಿ ಬೌಲರ್
ಅವೇಶ್ ಖಾನ್ ಹಾಂಕಾಂಗ್ ವಿರುದ್ಧ ಇಲ್ಲಿಯವರೆಗೆ ಅತ್ಯಂತ ದುಬಾರಿಯಾಗಿದ್ದಾರೆ. 2 ಓವರ್‌ಗಳಲ್ಲಿ, ಅವೇಶ್ 12 ಎಕಾನಮಿಯಲ್ಲಿ 24 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಇನ್ನೂ ಒಂದೇ ಒಂದು ಯಶಸ್ಸನ್ನು ಪಡೆದಿಲ್ಲ
ಬಾಬರ್ ಔಟ್
12ನೇ ಓವರ್‌ನ ಮೊದಲ ಎಸೆತದಲ್ಲಿ ಜಡೇಜಾ ನರೇ ಬಾಬರ್‌ರನ್ನು ಬೇಟೆಯಾಡಿದರು. ಬಾಬರ್ 35 ಎಸೆತಗಳಲ್ಲಿ 41 ರನ್ ಗಳಿಸಿ, ಅರ್ಧಶತಕ ವಂಚಿತರಾದರು.
10 ಓವರ್‌ಗಳಲ್ಲಿ 65 ರನ್
10 ಓವರ್‌ಗಳಲ್ಲಿ ಹಾಂಕಾಂಗ್ 2 ವಿಕೆಟ್‌ಗೆ 65 ರನ್ ಗಳಿಸಿದೆ. ಬಾಬರ್ ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿ ಉಳಿದಿದ್ದಾರೆ. ಅವರು 31 ಎಸೆತಗಳಲ್ಲಿ 37 ರನ್ ಗಳಿಸಿದ್ದಾರೆ.
ಜಡೇಜಾ- ಚಹಾಲ್ ಬೌಲಿಂಗ್
ಎರಡೂ ತುದಿಗಳಿಂದ ಸ್ಪಿನ್ ಬೌಲಿಂಗ್ ದಾಳಿ ನಡೆಸುತ್ತಿದೆ. ಒಂದು ತುದಿಯಿಂದ ಜಡೇಜಾ ಮತ್ತು ಇನ್ನೊಂದು ತುದಿಯಿಂದ ಯುಜ್ವೇಂದ್ರ ಚಹಾಲ್ ದಾಳಿ ನಡೆಸಿ ರನ್ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.
ಫ್ರೀ ಹಿಟ್‌ನಲ್ಲಿ ಔಟ್
ಅರ್ಷದೀಪ್ ಅವರ ಓವರ್‌ನ ಕೊನೆಯ ಎಸೆತ ನೋ ಬಾಲ್ ಆಗಿದ್ದು, ಹಾಂಕಾಂಗ್ ತಂಡ ಫ್ರೀ ಹಿಟ್‌ನಲ್ಲಿ ಆಘಾತ ಅನುಭವಿಸಿತು. ನಿಜಾಕತ್ ಖಾನ್ ರನ್ ಔಟ್ ಆಗಿದ್ದು, ಜಡೇಜಾ ಎಸೆದ ಸ್ಟ್ರೈಟ್ ಹಿಟ್ ಹಾಂಕಾಂಗ್‌ಗೆ ದೊಡ್ಡ ಹೊಡೆತ ನೀಡಿತು.
ಹಾಂಕಾಂಗ್ ಅರ್ಧಶತಕ
ಆರನೇ ಓವರ್‌ನಲ್ಲಿ ಹಾಂಕಾಂಗ್ 50 ರನ್ ಪೂರೈಸಿತು. ಬಾಬರ್ ಹಯಾತ್ ಮತ್ತು ನಿಜಾಕತ್ ಖಾನ್ ಕ್ರೀಸ್‌ನಲ್ಲಿದ್ದಾರೆ. ಬಾಬರ್ ಭಾರತೀಯ ಬೌಲರ್‌ಗಳ ಮೇಲೆ ತೀವ್ರವಾಗಿ ದಾಳಿ ನಡೆಸುತ್ತಿದ್ದಾರೆ.
ಬಾಬರ್ ಬೌಂಡರಿ ಮತ್ತು ಸಿಕ್ಸರ್
5ನೇ ಓವರ್ ಅನ್ನು ಅವೇಶ್ ಖಾನ್ ಎಸೆದರು. ಈ ಓವರ್‌ನಲ್ಲಿ ಬಾಬರ್ ಹಯಾತ್ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಓವರ್‌ನ ಮೂರನೇ ಎಸೆತದಲ್ಲಿ ಬಾಬರ್ ಬೌಲರ್‌ನ ತಲೆಯ ಮೇಲೆ 82 ಮೀಟರ್ ಸಿಕ್ಸರ್ ಬಾರಿಸಿದರು. ಮುಂದಿನ ಬಾಲ್ ಮಿಡ್ ಆಫ್ ಮೇಲೆ ಬೌಂಡರಿ ಬಂತು.
ಅರ್ಷದೀಪ್ಗೆ ವಿಕೆಟ್
ಅರ್ಷದೀಪ್ ಅವರ ಓವರ್‌ನಲ್ಲಿ ಯಾಸಿಮ್ ಎರಡು ಬೌಂಡರಿಗಳನ್ನು ಬಾರಿಸಿದರು, ಆದರೆ ಕೊನೆಯ ಎಸೆತದಲ್ಲಿ ಅವರು ಅವೇಶ್ ಖಾನ್ ಅವರಿಗೆ ಕ್ಯಾಚ್ ನೀಡಿದರು. ಯಾಸಿಮ್ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು.
ಚೇಸ್ ಆರಂಭ
193 ರನ್‌ಗಳ ಗುರಿ ಬೆನ್ನತ್ತಿರುವ ಹಾಂಕಾಂಗ್ ತಂಡ ಮೈದಾನಕ್ಕೆ ಬಂದಿದೆ. ಯಾಸಿಮ್ ಮೊರ್ತಜಾ ಮತ್ತು ನಿಜಾಕತ್ ಖಾನ್ ಕ್ರೀಸ್‌ನಲ್ಲಿದ್ದಾರೆ.
193 ರನ್ ಗುರಿ
ಸೂರ್ಯಕುಮಾರ್ ಯಾದವ್ ಕೊನೆಯ ಓವರ್‌ನಲ್ಲಿ 4 ಸಿಕ್ಸರ್ ಬಾರಿಸಿದರು ಮತ್ತು ಇದರೊಂದಿಗೆ ಭಾರತ ನಿಗದಿತ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಕೊಹ್ಲಿ 59 ಮತ್ತು ಸೂರ್ಯಕುಮಾರ್ 68 ರನ್ ಗಳಿಸಿ ಅಜೇಯರಾಗಿ ಮರಳಿದರು
ಸೂರ್ಯಕುಮಾರ್ ಬಿರುಸಿನ ಅರ್ಧಶತಕ
20ನೇ ಓವರ್‌ನ ಮೊದಲ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ ಇದರೊಂದಿಗೆ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿ ನಂತರ ಸೂರ್ಯಕುಮಾರ್ ಬಿರುಸಿನ ಅರ್ಧಶತಕ ಸಿಡಿಸಿದ್ದಾರೆ
ಕೊಹ್ಲಿ ಅರ್ಧಶತಕ
ಎಹ್ಸಾನ್ ಖಾನ್ ಅವರ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ 2 ರನ್ ಗಳಿಸಿದರು. ಇದರೊಂದಿಗೆ ಅವರು ತಮ್ಮ 101 ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿದರು. ಈ ಇನ್ನಿಂಗ್ಸ್ ಖಂಡಿತವಾಗಿಯೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಕೊಹ್ಲಿ-ಸೂರ್ಯ ಜೊತೆಯಾಟ
ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ 16ನೇ ಓವರ್‌ನಲ್ಲಿ ಇಬ್ಬರೂ ತಲಾ ಒಂದು ಸಿಕ್ಸರ್ ಬಾರಿಸಿದರು. ಆ ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯ ಕೂಡ ಬೌಂಡರಿ ಬಾರಿಸಿದರು. ಎಜಾಜ್ ಓವರ್‌ನಲ್ಲಿ 20 ರನ್ ಬಂತು.
ಸೂರ್ಯ ಬೌಂಡರಿ
ರಾಹುಲ್ ಪೆವಿಲಿಯನ್‌ಗೆ ವಾಪಸಾದ ತಕ್ಷಣ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಬಂದ ತಕ್ಷಣ ಅದ್ಭುತ ಸ್ವೀಪ್ ಮಾಡಿ ಸತತ 2 ಬೌಂಡರಿ ಬಾರಿಸಿದರು.
ಕೆಎಲ್ ರಾಹುಲ್ ಔಟ್
ಕೆಎಲ್ ರಾಹುಲ್ ಔಟಾಗಿದ್ದಾರೆ. ಗಜನ್‌ಫರ್ ಓವರ್‌ನ ಕೊನೆಯ ಎಸೆತದಲ್ಲಿ ರಾಹುಲ್ ಸ್ಕಾಟ್‌ಗೆ ಕ್ಯಾಚ್ ನೀಡಿದರು. ರಾಹುಲ್ 39 ಎಸೆತಗಳಲ್ಲಿ 36 ರನ್ ಗಳಿಸಿದರು
50 ರನ್‌ಗಳ ಜೊತೆಯಾಟ
ರೋಹಿತ್ ಬೇಗನೆ ಪೆವಿಲಿಯನ್‌ಗೆ ಮರಳಿದ ನಂತರ ರಾಹುಲ್ ಮತ್ತು ಕೊಹ್ಲಿ ನಡುವೆ 50 ರನ್‌ಗಳ ಜೊತೆಯಾಟ. ಆದರೆ, ಇಬ್ಬರ ಜೊತೆಯಾಟದಲ್ಲಿ ಕೊರತೆಯಿದೆ. ಹಾಂಕಾಂಗ್‌ನ ಬೌಲರ್‌ಗಳು ಭಾರತದ ಜೋಡಿಯನ್ನು ಕಟ್ಟಿಹಾಕಿದ್ದಾರೆ. ಕೊಹ್ಲಿ 12.4 ಓವರ್‌ಗಳಲ್ಲಿ ಡೀಪ್ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ 50 ರನ್‌ಗಳನ್ನು ದಾಟಿದರು.
10 ಓವರ್‌ಗಳು ಪೂರ್ಣ
10 ಓವರ್‌ಗಳಲ್ಲಿ ಭಾರತ 1 ವಿಕೆಟ್‌ಗೆ 70 ರನ್ ಗಳಿಸಿದೆ. ರಾಹುಲ್ 30 ಹಾಗೂ ಕೊಹ್ಲಿ 15 ರನ್ ಗಳಿಸಿ ಆಡುತ್ತಿದ್ದಾರೆ. 6 ರಿಂದ 10 ಓವರ್‌ಗಳ ನಡುವೆ ಹಾಂಕಾಂಗ್ ಬೌಲರ್‌ಗಳು ಭಾರತದ ಜೋಡಿಗೆ ತೊಂದರೆ ನೀಡಿದರು. ಇಬ್ಬರಿಗೂ ಬೌಂಡರಿ ಹೊಡೆಯುವುದು ತುಂಬಾ ಕಷ್ಟವಾಗಿತ್ತು. ಕೇವಲ ಒಂದೇ ಒಂದು ಬೌಂಡರಿ ಬಾರಿಸಿದ್ದು ಅದೂ ಕೂಡ ಕೆಎಲ್ ರಾಹುಲ್. ಈ 5 ಓವರ್‌ಗಳಲ್ಲಿ 31 ರನ್‌ಗಳು ಬಂದವು
ರಾಹುಲ್ ಸಿಕ್ಸರ್
ರಾಹುಲ್ 9ನೇ ಓವರ್‌ನ ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್‌ನಲ್ಲಿ 83 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು
50 ರನ್ ಪೂರೈಸಿದ ಭಾರತ
ಭಾರತದ 50 ರನ್‌ಗಳು ಪೂರ್ಣಗೊಂಡಿವೆ. ರೋಹಿತ್ ಶರ್ಮಾ ಬೇಗನೆ ಪೆವಿಲಿಯನ್‌ಗೆ ಮರಳಿದರು. ಅವರ ನಿರ್ಗಮನದ ನಂತರ, ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಿದ್ದಾರೆ ಮತ್ತು ಈಗ ಅವರು ರಾಹುಲ್ ಅವರೊಂದಿಗೆ ದೊಡ್ಡ ಜೊತೆಯಾಟದ ಜವಾಬ್ದಾರಿಯನ್ನು ಹೊಂದಿದ್ದಾರೆ.
ರೋಹಿತ್ ಔಟ್
ಐದನೇ ಓವರ್‌ನಲ್ಲಿ ರೋಹಿತ್ ಶರ್ಮಾ ರೂಪದಲ್ಲಿ ಭಾರತ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಭಾರತ 38 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ ಗಳಿಸಿದರು. ಈ ವೇಳೆ ಅವರು 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.
ರಾಹುಲ್ ಸಿಕ್ಸರ್
ಆರನ್ ಅವರ ಅತ್ಯಂತ ದುಬಾರಿ ಓವರ್, ನಾಲ್ಕನೇ ಎಸೆತದಲ್ಲಿ, ರಾಹುಲ್ ಕೌ ಕಾರ್ನರ್ ಮೇಲೆ ಲಾಂಗ್ ಸಿಕ್ಸರ್ ಬಾರಿಸಿದರು. ಚೆಂಡು ಪ್ರೇಕ್ಷಕರ ನಡುವೆ ಬಿದ್ದಿತು.
13ನೇ ಎಸೆತದಲ್ಲಿ ಮೊದಲ ಬೌಂಡರಿ
13ನೇ ಎಸೆತದಲ್ಲಿ ಭಾರತದ ಪಾಳಯದಿಂದ ಮೊದಲ ಬೌಂಡರಿ ಬಂತು. 3ನೇ ಓವರ್‌ನಲ್ಲಿ ರೋಹಿತ್ ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿ ಆರೋನ್ ಅವರನ್ನು ಸ್ವಾಗತಿಸಿದರು.
2ನೇ ಓವರ್‌ನಲ್ಲಿ 1 ರನ್
ಹಾಂಕಾಂಗ್‌ನ ಬೌಲರ್‌ಗಳ ಮುಂದೆ, ಸದ್ಯಕ್ಕೆ, ರಾಹುಲ್ ಮತ್ತು ರೋಹಿತ್ ಸಿಂಗಲ್ಸ್‌ಗಳನ್ನು ಮಾತ್ರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಇಬ್ಬರಿಗೂ 12 ಎಸೆತಗಳಲ್ಲಿ ಒಂದೂ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಎರಡನೇ ಓವರ್‌ನಲ್ಲಿ ಆಯುಷ್ ಶುಕ್ಲಾ ಕೇವಲ ಒಂದು ರನ್ ನೀಡಿದರು.
ಇನ್ನಿಂಗ್ಸ್ ಆರಂಭಿಸಿದ ರಾಹುಲ್
ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಇನ್ನೊಂದು ತುದಿಯಲ್ಲಿ ರೋಹಿತ್ ಶರ್ಮಾ ಇದ್ದಾರೆ. ಹರೂನ್ ಅರ್ಷದ್ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ರಾಹುಲ್‌ಗೆ ಮೊದಲ ಎರಡು ಎಸೆತಗಳಲ್ಲಿ ರಾಹುಲ್‌ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಹಾಂಗ್ ಕಾಂಗ್ ತಂಡ
ನಿಜಾಕತ್ ಖಾನ್ (ನಾಯಕ), ಬಾಬರ್ ಹಯಾತ್, ಯಾಸಿಮ್ ಮೊರ್ತಜಾ, ಕಿಂಚಿತ್ ಶಾ, ಸ್ಕಾಟ್ ಮೆಕೆಂಜಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಐಜಾಜ್ ಖಾನ್, ಜೀಶನ್ ಅಲಿ, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮತ್ತು ಯುಜ್ವೇಂದ್ರ ಚಾಹಲ್
ಟಾಸ್ ಗೆದ್ದ ಹಾಂಕಾಂಗ್
ದುಬೈನಲ್ಲಿಯೇ ನಡೆಯುತ್ತಿರುವ ಈ ಪಂದ್ಯದಲ್ಲಿ ಹಾಂಕಾಂಗ್ ನಾಯಕ ನಿಜಾಕತ್ ಖಾನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಸೂಪರ್ 4ರಲ್ಲಿ ಭಾರತದ ಪ್ರವೇಶ ಖಚಿತ
ಇಂದು ಹಾಂಕಾಂಗ್ ಗೆಲ್ಲುವ ಮೂಲಕ ಟೀಂ ಇಂಡಿಯಾ ಸೂಪರ್ 4 ಪ್ರವೇಶಿಸಲಿದೆ. ‘ಎ’ ಗುಂಪಿನಲ್ಲಿ ಭಾರತ ಹೊರತುಪಡಿಸಿ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳಿವೆ. ಪಾಕಿಸ್ತಾನವನ್ನು ಸೋಲಿಸಿದ ಭಾರತ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ
Published On - Aug 31,2022 6:45 PM