
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೂರನೇ ದಿನದಾಟ ಪ್ರಗತಿಯಲ್ಲಿದೆ. ನ್ಯೂಜಿಲೆಂಡ್ ಓಪನರ್ಗಳು ತಂಡಕ್ಕೆ ಅದಾಗಲೇ ಭರ್ಜರಿ ಆರಂಭ ಒದಗಿಸಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ. ಇದರ ನಡುವೆ 3ನೇ ದಿನದಾಟದ (IND vs NZ 1st test Day 3) ಆರಂಭದಲ್ಲಿ ಕ್ರಿಕೆಟ್ ಪ್ರಿಯರಿಗೆ ಅಚ್ಚರಿಯೊಂದು ಕಾದಿತ್ತು. ಟೀಮ್ ಇಂಡಿಯಾ (Team India) ಪರ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟು ವೃದ್ದಿಮಾನ್ ಸಾಹ (Wriddhiman Saha) ಬದಲು ಕೆಎಸ್ ಭರತ್ (KS Bharat) ಕಣಕ್ಕಿಳಿದರು. ಅಷ್ಟಕ್ಕೂ ಸಾಹ ಬದಲು ಭರತ್ ಆಡಲು ಕಾರಣವೇನು ಎಂಬುದು ಇದೀಗ ತಿಳಿದುಬಂದಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಂಚಿಕೊಂಡಿದೆ. ಸಾಹ ಅವರು ಇಂಜುರಿಯಿಂದ (Wriddhiman Saha Injury) ಬಳಲುತ್ತಿದ್ದಾರಂತೆ.
ಹೌದು, ವೃದ್ದಿಮಾನ್ ಸಾಹ ಅವರ ಕುತ್ತಿಗೆಗೆ ಪೆಟ್ಟಾಗಿದ್ದು ನೋವಿನಿಂದ ಬಳಲುತ್ತಿದ್ದಾರಂತೆ. ಹೀಗಾಗಿ ಇವರನ್ನು ಬಿಸಿಸಿಐ ಮೆಡಿಕಲ್ ತಂಡ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಇವರ ಬದಲು ಕೆಎಸ್ ಭರತ್ ಕೀಪಿಂಗ್ ಗ್ಲೌಸ್ ತೊಟ್ಟು ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿದ್ದಾರೆ ಎಂದು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
2010 ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವೃದ್ದಿಮಾನ್ ಸಾಹ ಈವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರ ಜಾಗಕ್ಕೆ ರಿಷಭ್ ಪಂತ್ ಆಯ್ಕೆಯಾದರು. ಪಂತ್ ಅನೇಕ ಬಾರಿ ಭಾರತಕ್ಕೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ, ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಸಾಹ ಸ್ಥಾನ ಪಡೆದುಕೊಂಡಿದ್ದಾರೆ.
ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕಾದರೆ ಈ ಸರಣಿಯಲ್ಲಿ ಸಾಹ ಅವರಿಂದ ದೊಡ್ಡ ಇನ್ನಿಂಗ್ಸ್ ಬರಲೇಬೇಕಿದೆ. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 1 ರನ್ಗೆ ಔಟ್ ಆಗುವ ಮೂಲಕ ಮತ್ತೆ ಕಳಪೆ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಎರಡನೇ ಟೆಸ್ಟ್ನಲ್ಲಿ ಸಾಹ ಆಡುವುದು ಅನುಮಾನ ಭರತ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.
ಸದ್ಯ ಸಾಗುತ್ತಿರುವ ಕಾನ್ಪುರ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕೇನ್ ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿತ್ತು. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಮೂರನೇ ದಿನದಾಟ ಟೀಮ್ ಇಂಡಿಯಾಕ್ಕೆ ಬಹುಮುಖ್ಯವಾಗಿದ್ದು, ನ್ಯೂಜಿಲೆಂಡ್ ಅನ್ನು ಆದಷ್ಟು ಬೇಗ ಕಟ್ಟಿಹಾಕಬೇಕಿದೆ. ಮೂವರು ಸ್ಪಿನ್ನರ್ಗಳನ್ನು ಒಳಗೊಂಡಿರುವ ಭಾರತ ವಿಕೆಟ್ ಕೀಳುವತ್ತ ಹೆಚ್ಚಿನ ಗಮನ ಹರಿಸಬೇಕಿದೆ.
IND vs NZ 1st Test, Day 3 LIVE Score:
(India vs New Zealand 1st test Day 3 KS Bharat on keeping instead of Wriddhiman Saha here is the reason)