ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್‌ನಲ್ಲಿ ಸುರಿದ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ 4.5 ಓವರ್‌ಗಳಲ್ಲಿ 22 ರನ್ ಗಳಿಸಿತು. ಈ ವೇಳೆ ಮಳೆ ತನ್ನ ಆಟವನ್ನು ತೋರಿಸಿದ್ದರಿಂದ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಮರಳಬೇಕಾಯಿತು. ಇದಾದ ಬಳಿಕ ಮತ್ತೆ ಪಂದ್ಯ ಆರಂಭಗೊಂಡು ಭಾರತ 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತ್ತು. ಆದರೆ ಮತ್ತೆ ಮಳೆಯಿಂದಾಗಿ ಪಂದ್ಯವನ್ನು ಎರಡನೇ ಬಾರಿಗೆ ನಿಲ್ಲಿಸಲಾಯಿತು. ಹ್ಯಾಮಿಲ್ಟನ್‌ನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಸುದೀರ್ಘ ಕಾಯುವಿಕೆಯ ನಂತರ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ಮಳೆ ನಿಲ್ಲದ ಕಾರಣ ಅಂಪೈರ್‌ಗಳು ಪಂದ್ಯವನ್ನು ರದ್ದುಪಡಿಸಲು ನಿರ್ಧರಿಸಿದರು. ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಪಂದ್ಯಕ್ಕೆ ಫುಲ್ಸ್ಟಾಪ್ ಇಟ್ಟರು. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜೀವಂತವಾಗಿರಿಸಲು ಭಾರತ ಪ್ರಯತ್ನಿಸಿತ್ತು. ಆದರೆ ಮಳೆ ಇದಕ್ಕೆಲ್ಲ ಅಡ್ಡಿಪಡಿಸಿತು. ಸರಣಿಯಲ್ಲಿ ಟೀಂ ಇಂಡಿಯಾ ಇನ್ನೂ 0-1 ಹಿನ್ನಡೆಯಲ್ಲಿದೆ
ಲಾಕಿ ಫರ್ಗುಸನ್ ಓವರ್‌ನ ಎರಡನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಅದೇ ವೇಳೆಗೆ ಐದನೇ ಎಸೆತವನ್ನು ಫ್ಲಿಕ್ ಮಾಡಿದ ಸೂರ್ಯಕುಮಾರ್ ಬೌಂಡರಿ ಬಾರಿಸಿದರು. ಮಳೆ ಬಿದ್ದ ಕಾರಣ ಕೊನೆಯ ಎಸೆತವನ್ನು ಎಸೆಯಲಾಗಲಿಲ್ಲ
ಮಿಚೆಲ್ ಸ್ಯಾಂಟ್ನರ್ ಎಸೆದ 11 ನೇ ಓವರ್‌ನಲ್ಲಿ ಕೇವಲ ಒಂಬತ್ತು ರನ್ಗಳನ್ನು ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಸೂರ್ಯಕುಮಾರ್ ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಗಿಲ್ ಮತ್ತು ಸೂರ್ಯಕುಮಾರ್ ವೇಗವಾಗಿ ರನ್ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.
ಮೈಕೆಲ್ ಬ್ರೇಸ್ವೆಲ್ 10 ನೇ ಓವರ್‌ನಲ್ಲಿ ಒಂಬತ್ತು ರನ್ಗಳನ್ನು ನೀಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ, ಡೀಪ್ ಎಕ್ಸ್‌ಟ್ರಾ ಕವರ್‌ನಲ್ಲಿ ಗಿಲ್ ಬೌಂಡರಿ ಬಾರಿಸಿದರು. 10 ಓವರ್‌ಗಳ ಆಟ ಮುಗಿದಿದೆ. ಭಾರತಕ್ಕೆ ಇನ್ನು 19 ಓವರ್‌ಗಳು ಮಾತ್ರ ಬಾಕಿ ಉಳಿದಿವೆ
ಎಂಟನೇ ಓವರ್‌ನಲ್ಲಿ ಮ್ಯಾಟ್ ಮೈನ್ರಿ ಶುಬ್ಮನ್ ಗಿಲ್ ಕೈಯಲ್ಲಿ ಸಿಕ್ಸರ್ ತಿನ್ನಬೇಕಾಯಿತು. ಗಿಲ್ ಬ್ಯಾಕ್‌ಫೂಟ್‌ನಲ್ಲಿ ಹೋಗಿ ಸ್ಕ್ವೇರ್ ಲೆಗ್‌ನಲ್ಲಿ ಪ್ರಬಲ ಸಿಕ್ಸರ್ ಬಾರಿಸಿದರು. ಅದೇ ವೇಳೆಗೆ ಮುಂದಿನ ಓವರ್ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಕಟ್ ಮಾಡಿ ಬೌಂಡರಿ ಬಾರಿಸಿದರು. ಭಾರತದ ಸ್ಕೋರ್ 50 ದಾಟಿದೆ
ಆರನೇ ಓವರ್‌ನ ಮೊದಲ ಎಸೆತದಲ್ಲಿ ಶಿಖರ್ ಧವನ್ ಔಟಾದರು. ಧವನ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿದ್ದರು ಆದರೆ ಅವರು ಮಿಡ್ ಆನ್‌ನಲ್ಲಿ ಫರ್ಗುಸನ್‌ಗೆ ಕ್ಯಾಚ್ ನೀಡಿದರು. ಧವನ್ 10 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು
ಮತ್ತೆ ಆಟ ಆರಂಭವಾಗಿದೆ. ಎರಡೂ ತಂಡಗಳು ತಲಾ 29 ಓವರ್‌ಗಳ ಇನ್ನಿಂಗ್ಸ್ ಆಡಬೇಕಿದೆ
ಹ್ಯಾಮಿಲ್ಟನ್‌ನಲ್ಲಿ ಮಳೆ ನಿಂತಿದೆ. ಇದೀಗ ಪಂದ್ಯಕ್ಕೆ ಮೈದಾನ ಸಿದ್ಧವಾಗುತ್ತಿದೆ. ಮಳೆಯಿಂದಾಗಿ ಔಟ್ ಫೀಲ್ಡ್ ಮೇಲೆ ಪರಿಣಾಮ ಬೀರಿದ್ದು, ಮೈದಾನವನ್ನು ಒಣಗಿಸಲು ಸಾಕಷ್ಟು ಸಮಯ ಹಿಡಿಯಲಿದೆ.
ಹ್ಯಾಮಿಲ್ಟನ್‌ನಲ್ಲಿ ಸುರಿಯುತ್ತಿರುವ ಮಳೆ ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ. ಹೀಗಾಗಿ ಪಂದ್ಯ ನಡೆಯುವುದಿಲ್ಲ ಎಂಬ ಭಾವನೆಯಿಂದ ಅಭಿಮಾನಿಗಳು ಕ್ರೀಡಾಂಗಣದಿಂದ ಮನೆಗೆ ಹಿಂತಿರುಗಲು ಆರಂಭಿಸಿದ್ದಾರೆ.
ಐದನೇ ಓವರ್‌ನ ಕೊನೆಯ ಎಸೆತಕ್ಕೂ ಮುನ್ನವೇ ಮಳೆ ಸುರಿಯಲಾರಂಭಿಸಿತು. ಸಣ್ಣ ಮಳೆಯ ನಡುವೆಯೂ ಪಂದ್ಯ ನಡೆಯುತ್ತಿತ್ತು, ಆದರೆ ಮಳೆ ತೀವ್ರಗೊಂಡ ತಕ್ಷಣ ಆಟಗಾರರಿಗೆ ಮೈದಾನದಿಂದ ಹೊರಹೋಗುವಂತೆ ಹೇಳಲಾಯಿತು.
ಟಿಮ್ ಸೌಥಿ ಮೂರನೇ ಓವರ್‌ನಲ್ಲಿ ಐದು ರನ್ ನೀಡಿದರು. ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಶುಭಮನ್ ಗಿಲ್ ಮತ್ತೊಂದು ಬೌಂಡರಿ ಬಾರಿಸಿದರು.
ಭಾರತದ ಬ್ಯಾಟಿಂಗ್ ಶುರುವಾಗಿದೆ. ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಓಪನಿಂಗ್ ಮಾಡಿದ್ದಾರೆ. ಟಿಮ್ ಸೌಥಿ ನ್ಯೂಜಿಲೆಂಡ್ ಪರ ಮೊದಲ ಓವರ್ ಬೌಲ್ ಮಾಡಿದ್ದಾರೆ. ಈ ಓವರ್‌ನಲ್ಲಿ ಕೇವಲ 2 ರನ್ ಬಂದವು.
ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಟಾಸ್ ಗೆದ್ದ ಕಿವೀಸ್ ನಾಯಕ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಹೂಡಾ ಹಾಗೂ ದೀಪಕ್ ತಂಡಕ್ಕೆ ಎಂಟ್ರಿಕೊಟ್ಟಿದ್ದರೆ ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ತಂಡದಿಂದ ಹೊರಹೋಗಿದ್ದಾರೆ.
ಮಳೆಯಿಂದಾಗಿ ಒದ್ದೆಯಾದ ಔಟ್ ಫೀಲ್ಡ್ ನಿಂದಾಗಿ ಇನ್ನೂ ಟಾಸ್ ನಡೆದಿಲ್ಲ. ಪಿಚ್‌ನಲ್ಲಿ ಕವರ್‌ಗಳಿದ್ದು, ಮೈದಾನ ಸಿಬ್ಬಂದಿ ಮಳೆಯಿಂದ ಆತಂಕಗೊಂಡಿದ್ದಾರೆ.
Published On - 6:39 am, Sun, 27 November 22