IND vs NZ: ಭಾರತ vs ನ್ಯೂಝಿಲೆಂಡ್ 2ನೇ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ?

India vs New Zealand 2nd Test: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡಿದೆ. ಈ ಅದ್ಭುತ ಪ್ರದರ್ಶನದೊಂದಿಗೆ ಕಿವೀಸ್ ಪಡೆ ಭಾರತದಲ್ಲಿ 36 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

IND vs NZ: ಭಾರತ vs ನ್ಯೂಝಿಲೆಂಡ್ 2ನೇ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ?
IND vs NZ
Follow us
|

Updated on:Oct 21, 2024 | 7:23 AM

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಕಿವೀಸ್ ಬಳಗ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 8 ವಿಕೆಟ್​ಗಳಿಂದ ಸೋಲಿಸಿ ನ್ಯೂಝಿಲೆಂಡ್ ಶುಭಾರಂಭ ಮಾಡಿದೆ. ಈ ಮೂಲಕ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕೆ ಸಜ್ಜಾಗಬೇಕಿದ್ದು, ಇದಕ್ಕಾಗಿ ಪುಣೆಗೆ ತೆರಳಲಿದೆ. ಅಂದರೆ ಅಕ್ಟೋಬರ್ 24 ರಿಂದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಶುರುವಾಗಲಿದೆ.

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಮೊದಲ ಮ್ಯಾಚ್​ನಲ್ಲಿ ಸೋತಿರುವ ಭಾರತ ತಂಡವು 2ನೇ ಪಂದ್ಯದಲ್ಲಿ ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಒಂದು ವೇಳೆ ಈ ಪಂದ್ಯದಲ್ಲೂ ನ್ಯೂಝಿಲೆಂಡ್ ಜಯ ಸಾಧಿಸಿದರೆ ಸರಣಿ ಪ್ರವಾಸಿ ತಂಡದ ಪಾಲಾಗಲಿದೆ.

ಅತ್ತ ಟೆಸ್ಟ್ ಇತಿಹಾಸದಲ್ಲೇ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಸರಣಿ ಗೆದ್ದಿಲ್ಲ. ಇದೀಗ 36 ವರ್ಷಗಳ ಬಳಿಕ ಟೀಮ್ ಇಂಡಿಯಾವನ್ನು ತವರಿನಲ್ಲಿ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಎಂಸಿಎ ಮೈದಾನದಲ್ಲೂ ಗೆಲ್ಲುವ ಮೂಲಕ ನ್ಯೂಝಿಲೆಂಡ್ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಆದರೆ ಮೊದಲ ಸೋಲಿನ ತಪ್ಪುಗಳನ್ನು ತಿದ್ದಿಕೊಂಡು ಎರಡನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡುವುದಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಘೋಷಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮೈದಾನದಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಉಭಯ ತಂಡಗಳು:

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ಜೇಕೊಬ್ ಡಫಿ, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ.

ಭಾರತ vs ನ್ಯೂಝಿಲೆಂಡ್ ಮುಂದಿನ ಪಂದ್ಯಗಳ ವೇಳಾಪಟ್ಟಿ:

  • ಎರಡನೇ ಟೆಸ್ಟ್ – 24 ರಿಂದ 28 ಅಕ್ಟೋಬರ್ (ಎಂಸಿಎ ಸ್ಟೇಡಿಯಂ, ಪುಣೆ)
  • ಮೂರನೇ ಟೆಸ್ಟ್ – ನವೆಂಬರ್ 1 ರಿಂದ 5 (ವಾಂಖೆಡೆ ಸ್ಟೇಡಿಯಂ, ಮುಂಬೈ)

Published On - 7:22 am, Mon, 21 October 24

ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
ನನ್ನ ವರ್ಚಸ್ಸು ಹಾಳು ಮಾಡಲು ಯತ್ನ: ಬಿಜೆಪಿ ನಾಯಕರ ಮೇಲೆ ಹೆಚ್​ಡಿಕೆ ಗರಂ
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
BBK11: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
ಹೊಲದಲ್ಲಿ ಕುಮಾರಸ್ವಾಮಿ ಬಾನುವಾರದ ಸ್ಪೆಷಲ್ ಬಾಡೂಟ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ