India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇಂದು ಭಾರತ ತಂಡ ಆಯ್ಕೆ: ಸಂಭಾವ್ಯ 15 ಆಟಗಾರರ ಹೆಸರು ಇಲ್ಲಿದೆ

| Updated By: Vinay Bhat

Updated on: Nov 09, 2021 | 12:51 PM

India squad for New Zealand T20Is: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಸಾಕಷ್ಟು ಹೊಸ ಮುಖಗಳಿಗೆ ಬಿಸಿಸಿಐ ಅವಕಾಶ ನೀಡಲಿದೆಯಂತೆ. ಹಾಗಾದ್ರೆ ಟೀಮ್ ಇಂಡಿಯಾದ ಸಂಭಾವ್ಯ 15 ಆಟಗಾರರು ಯಾರು ಎಂಬುದನ್ನು ನೋಡೋಣ.

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇಂದು ಭಾರತ ತಂಡ ಆಯ್ಕೆ: ಸಂಭಾವ್ಯ 15 ಆಟಗಾರರ ಹೆಸರು ಇಲ್ಲಿದೆ
India squad for New Zealand T20Is
Follow us on

ಭಾರತ ಕ್ರಿಕೆಟ್ ತಂಡ (India T20 World cup) ಐಸಿಸಿ ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದಿದ್ದು ತವರಿಗೆ ಹಿಂತಿರುಗಲು ತಯಾರಿ ನಡೆಸುತ್ತಿದೆ. ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇದೇ ನವೆಂಬರ್ 17 ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ (India vs New Zealand) ವಿರುದ್ಧದ ಟಿ20 ಸರಣಿಗೆ 15 ಆಟಗಾರರ ಹೆಸರನ್ನು ಆಯ್ಕೆ ಮಾಡುತ್ತಿದೆ. ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಬಿಸಿಸಿಐ (BCCI) ಆಯ್ಕೆ ಸಮಿತಿ ಮಂಗಳವಾರ ಆಟಗಾರರ ಆಯ್ಕೆ ಪ್ರಕ್ರಿಯೆಗಾಗಿ ಸಭೆ ಕರೆದಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಗೆ ಈಗಾಗಲೇ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಮಾಡಿದೆ. ಹೀಗಾಗಿ ಬಿಸಿಸಿಐ ಇಂದು ಸಂಜೆಯ ವೇಳೆಗೆ 15 ಆಟಗಾರರ ಭಾರತ ತಂಡವನ್ನು (India squad for New Zealand Series) ಸಿದ್ಧ ಪಡಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರಮುಖ ಅನುಭವಿ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರಿಷಭ್ ಪಂತ್, ರವೀಂದ್ರ ಜಡೇಜಾ ಅವರು ಈ ಸರಣಿಯಿಂದ ಹಿಂದೆ ಸರಿಯಲಿದ್ದಾರಂತೆ. ಇವರು ಕಳೆದ ನಾಲ್ಕು ತಿಂಗಳಲ್ಲಿ ಸತತ ಮೂರು ಬಯೋ-ಬಬಲ್ಸ್​ ಕಳೆದಿದ್ದಾರೆ. ಟಿ 20 ವಿಶ್ವಕಪ್ ನಂತರ, ಅವರು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚಿತವಾಗಿ ವಿಶ್ರಾಂತಿ ಪಡೆಯಲಿದ್ದಾರೆ.

ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಕಾರಣ ರೋಹಿತ್ ಶರ್ಮಾ ನೂತನ ನಾಯಕನ ಜವಾಬ್ದಾರಿ ಹೊರಲಿದ್ದು, ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಉಪ ನಾಯಕನ ಪಟ್ಟ ಯಾರಿಗೆ ಎಂಬುದು ಕೂಡ ಇಂದಿನ ಸಭೆಯಲ್ಲಿ ತೀರ್ಮಾನ ಆಗಬಹುದು. ಸದ್ಯ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಸಾಕಷ್ಟು ಹೊಸ ಮುಖಗಳಿಗೆ ಬಿಸಿಸಿಐ ಅವಕಾಶ ನೀಡಲಿದೆಯಂತೆ. ಹಾಗಾದ್ರೆ ಸಂಭಾವ್ಯ 15 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ…

ಕಿವೀಸ್ ವಿರುದ್ಧದ ಟಿ20 ಸರಣಿಗೆ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ಐಪಿಎಲ್ ಮುಗಿದ ಬಳಿಕ ಕೂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ರುತುರಾಜ್ ಗಾಯಕ್ವಾಡ್ ಅವರದ್ದು. ಇವರ ಜೊತೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಕನಾಗಿ ಕಣಕ್ಕಿಳಿದು ಭರವಸೆ ಮೂಡಿರಿಸಿರುವ ವೆಂಕಟೇಶ್ ಅಯ್ಯರ್​ ಕೂಡ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಆಯ್ಕೆ ಆಗುವ ಸಂಭವವಿದೆ ಎನ್ನಲಾಗಿದೆ. ಇವರು ಕೂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಉಳಿದಂತೆ ಆವೇಶ್ ಖಾನ್, ಚೇತನ್ ಸಕರಿಯಾ ಒಂದು ಕಡೆಯಿದ್ದರೆ ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಪೃಥ್ವಿ ಶಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ ಹೆಸರು ಕೂಡ ಕೇಳಿಬರುತ್ತಿದೆ.

ಭಾರತ ಕ್ರಿಕೆಟ್ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ನ.17 ರಂದು ಜೈಪುರದಲ್ಲಿ ಮೊದಲ ಟಿ20 ನಡೆದರೆ, ನ.19 ರಂದು ರಾಂಚಿ ಹಾಗೂ ನ.21 ರಂದು ಕೋಲ್ಕತ್ತಾದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ. ಟೆಸ್ಟ್ ಪಂದ್ಯಗಳು ಕಾನ್ಪುರ (ನ.25-29) ಹಾಗೂ ಮುಂಬೈ (ಡಿ.3-7) ರಂದು ನಡೆಯಲಿದೆ.

15 ಸದಸ್ಯರ ಭಾರತ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ನಾಯಕ), ಪೃಥ್ವಿ ಶಾ, ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಯುಜ್ವೇಂದ್ರ ಚಹಾಲ್, ರಾಹುಲ್ ಚಹಾರ್.

RCB Coach: ಆರ್​ಸಿಬಿ ತಂಡಕ್ಕೆ ಹೊಸ ಹೆಡ್ ಕೋಚ್ ಘೋಷಣೆ: ದೊಡ್ಡ ನಿರ್ಧಾರ ಪ್ರಕಟಿಸಿದ ಬೆಂಗಳೂರು ಫ್ರಾಂಚೈಸಿ

Rishabh Pant: ನಮೀಬಿಯಾ ಬ್ಯಾಟರ್​ನ ಬ್ಯಾಟ್​ಗೆ ಮೆಟ್ಟಿದ ರಿಷಭ್ ಪಂತ್: ತಪ್ಪು ಗೊತ್ತಾಗಿ ತಕ್ಷಣ ಮಾಡಿದ್ದೇನು ನೋಡಿ

(India vs New Zealand India probable 15-member squad for the T20I series against New Zealand)