Rishabh Pant: ನಮೀಬಿಯಾ ಬ್ಯಾಟರ್ನ ಬ್ಯಾಟ್ಗೆ ಮೆಟ್ಟಿದ ರಿಷಭ್ ಪಂತ್: ತಪ್ಪು ಗೊತ್ತಾಗಿ ತಕ್ಷಣ ಮಾಡಿದ್ದೇನು ನೋಡಿ
Rishabh Pant respects bat, IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವೊಂದನ್ನು ರಿಷಭ್ ಪಂತ್ ಮಾಡಿದ್ದಾರೆ. ರನೌಟ್ ಮಾಡುವ ಭರದಲ್ಲಿ ಡೈವ್ ಹೊಡೆದಿದ್ದ ಎದುರಾಳಿಯ ಬ್ಯಾರ್ನ ಬ್ಯಾಟ್ ಮೇಲೆ ಅರಿವಿಲ್ಲದೆ ಪಂತ್ ಮೆಟ್ಟಿದ್ದಾರೆ. ಆಗ ಅವು ಏನು ಮಾಡಿದರು ನೋಡಿ.
ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಿಂದ ಭಾರತ ಕ್ರಿಕೆಟ್ ತಂಡ (Team India) ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದರೂ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಕೊನೇ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಫ್ಯಾನ್ಸ್ಗೆ ಸಾಕಷ್ಟು ಮನರಂಜನೆ ನೀಡಿತು. ಟ್ರೋಫಿ ಗೆದ್ದಿಲ್ಲ ಎಂಬುದೊಂದು ಬಿಟ್ಟರೆ ಅನೇಕ ವಿಚಾರಗಳಿಂದ ವಿರಾಟ್ ಕೊಹ್ಲಿ (Virat Kohli) ಪಡೆ ಭಾರತೀಯ ಕ್ರಿಕೆಟ್ ಪ್ರಿಯರು ಹೆಮ್ಮೆ ಪಡುವಂತೆ ಮಾಡಿದೆ. ಮೊನ್ನೆಯಷ್ಟೆ ಸ್ಕಾಟ್ಲೆಂಡ್ (India vs Scotland) ವಿರುದ್ಧ ಗೆದ್ದ ಬಳಿಕ ಅವರ ಡ್ರೆಸ್ಸಿಂಗ್ ರೂಮ್ಗೆ (Dressing Room) ತೆರಳಿ ಎದುರಾಳಿ ನಾಯಕನ ಆಸೆಯನ್ನು ಕೊಹ್ಲಿ ಈಡೇರಿಸಿದ್ದರು. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ನಮೀಬಿಯಾ (India vs Namibia) ವಿರುದ್ಧದ ಪಂದ್ಯದಲ್ಲೂ ಭಾರತೀಯರು ಹೆಮ್ಮೆ ಪಡುವಂತಹ ಕೆಲಸವೊಂದನ್ನು ರಿಷಭ್ ಪಂತ್ (Rishabh Pant) ಮಾಡಿದ್ದಾರೆ.
9ನೇ ಓವರ್ ಬೌಲಿಂಗ್ ಮಾಡಲು ಬಂದ ರಾಹುಲ್ ಚಹಾರ್ ಅವರ ಎಸೆತದಲ್ಲಿ ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಾಸ್ ಸಿಂಗಲ್ ರನ್ಗೆಂದು ಓಡಿದರು. ಈ ಸಂದರ್ಭ ನಾನ್ ಸ್ಟ್ರೈಕ್ನಲ್ಲಿದ್ದ ಲೊಫ್ಟೀ ಎಟಾನ್ ರನೌಟ್ನಿಂದ ಪಾರಾಗಲು ಕೀಪರ್ ಪಡೆ ಓಡಿ ಬಂದು ಡೈವ್ ಹೊಡೆದರು. ಇತ್ತ ರನೌಟ್ ಮಾಡುವ ಯೋಜನೆಯಲ್ಲಿದ್ದ ರಿಷಭ್ ಪಂತ್ ಚೆಂಡನ್ನು ವಿಕೆಟ್ಗೆ ತಾಗಿಸುವ ಭರದಲ್ಲಿ ಡೈವ್ ಹೊಡೆದಿದ್ದ ಲೊಫ್ಟೀ ಎಟಾನ್ ಅವರ ಬ್ಯಾಟ್ ಮೇಲೆ ಅರಿವಿಲ್ಲದೆ ಕಾಲಿಟ್ಟರು.
ನಮೀಬಿಯಾ ಬ್ಯಾಟರ್ನ ಬ್ಯಾಟ್ ಮೇಲೆ ಕಾಲಿಟ್ಟಿದ್ದು ತಿಳಿದಾಗ ಪಂತ್ ಅವರು ತಕ್ಷಣವೇ ಹಿಂದೆ ಸರಿದು ಬ್ಯಾಟ್ಗೆ ನಮಸ್ಕರಿಸಿದರು. ಎದುರಾಳಿಯ ಬ್ಯಾಟನ್ನು ಕೈಯಿಂದ ಮುಟ್ಟಿ ಎದೆಗೆ ಮತ್ತು ಹಣೆಗೆ ನಮಸ್ಕರಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇದು ಭಾರತೀಯರ ಸಂಸ್ಕೃತಿ ಎಂದು ಟೀಮ್ ಇಂಡಿಯಾ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
That’s @RishabhPant17 for you. This is Indian cricket #respect #RishabhPant #Cricket #IndvsNam #India @BCCI @ICC @T20WorldCup #T20WorldCup pic.twitter.com/nd5xCTGKuK
— Rohan Anjaria (@RohanAnjaria) November 8, 2021
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಟ್ರೋಫಿ ಇಲ್ಲದೆ ತವರಿಗೆ ಹಿಂತಿರುಗಿದೆ ನಿಜ. ಆದರೆ, ಟೀಮ್ ಇಂಡಿಯಾ ಅನೇಕ ಬಾರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ಕೇವಲ ಫ್ಯಾನ್ಸ್ ಮಾತ್ರವಲ್ಲದೆ ಇತರೆ ತಂಡಗಳು ಕೂಡ ಭಾರತವನ್ನು ಕೊಂಡಾಡಿದೆ.
ಇತ್ತೀಚೆಗಷ್ಟೆ ಸ್ಟಾಟ್ಲೆಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಎದುರಾಳಿಯ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಸರ್ಪ್ರೈಸ್ ನೀಡಿದ್ದರು. ಇದು ಸ್ಕಾಟ್ಲೆಂಡ್ ನಾಯಕನ ಆಸೆ ಕೂಡ ಆಗಿತ್ತು. ಕೊಹ್ಲಿಯನ್ನು ನಮ್ಮ ಡ್ರೆಸ್ಸಿಂಗ್ ರೂಮ್ಗೆ ಆಹ್ವಾನಿಸುತ್ತೇನೆ ಎಂದು ಸ್ಕಾಟ್ಲೆಂಡ್ ನಾಯಕ ಪಂದ್ಯಕ್ಕು ಮುನ್ನ ಹೇಳಿದ್ದರು. ಇದಕ್ಕಾಗಿ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಕೆ. ಎಲ್ ರಾಹುಲ್ ಸ್ಕಾಟ್ಲೆಂಡ್ ಆಟಗಾರರಿದ್ದ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಕೆಲವೊಂದು ಕ್ರಿಕೆಟ್ ಟಿಪ್ಸ್ ನೀಡಿ ಕೆಲ ಸಮಯ ಮಾತುಕತೆ ನಡೆಸಿದ್ದರು.
Virat Kohli: ನಮೀಬಿಯಾ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ನೀವೇ ಕೇಳಿ
(India Batter Rishabh Pant accidentally steps on bat of Namibia batter immediately pays his respect viral news)