Virat Kohli: ನಮೀಬಿಯಾ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ನೀವೇ ಕೇಳಿ

TV9kannada Web Team

TV9kannada Web Team | Edited By: Vinay Bhat

Updated on: Nov 09, 2021 | 9:02 AM

Virat Kohli Post Match Presentation Ceremony: ಟಿ20 ವಿಶ್ವಕಪ್​ನಲ್ಲಿ ಕೊನೇ ಪಂದ್ಯವನ್ನು ಆಡಿದ ಭಾರತ ನಮೀಬಿಯಾ ವಿರುದ್ಧ ಗೆದ್ದ ಬಳಿಕ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದರು?, ಇಲ್ಲಿದೆ ಓದಿ.

Virat Kohli: ನಮೀಬಿಯಾ ವಿರುದ್ಧ ಗೆದ್ದ ಬಳಿಕ ವಿರಾಟ್ ಕೊಹ್ಲಿ ಆಡಿದ ಒಂದೊಂದು ಮಾತು ನೀವೇ ಕೇಳಿ
Virat Kohli India vs Namibia

ಭಾರತ ಕ್ರಿಕೆಟ್ ತಂಡಕ್ಕೆ (Indian Cricket Team) ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ (T20 World Cup) ಹಲವಾರು ಕಾರಣಗಳಿಗೆ ಮಹತ್ವದ್ದಾಗಿತ್ತು. ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಅಂತ್ಯ, ಕೋಚ್ ರವಿಶಾಸ್ತ್ರಿ (Ravi Shastri) ಅವಧಿ ಮುಕ್ತಾಯ, ಮೆಂಟರ್ ಆಗಿ ಎಂ ಎಸ್ ಧೋನಿ (MS Dhoni) ಹೀಗೆ ನಾನಾ ವಿಚಾರಗಳಿಂದ ಟೀಮ್ ಇಂಡಿಯಾ (Team India) ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, 2012ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಲು ವಿಫಲವಾದ ಭಾರತ ಬರಿಗೈಲಿ ತವರಿಗೆ ಮರಳಲಿದೆ. ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿಗೆ ಭಾರತ ತಂಡ ಟೂರ್ನಿಯಿಂದಲೇ ಹೊರಬಿತ್ತು. ಕೊನೇ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸೋಮವಾರ ನಡೆದ ನಮೀಬಿಯಾ (India vs Namibia) ವಿರುದ್ಧದ ಪಂದ್ಯದಲ್ಲೂ ಭಾರತ ಗೆದ್ದು ಟೂರ್ನಿಗೆ ವಿದಾಯ ಹೇಳಿತು.

ಈ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಕಳೆದ ಆರು- ಏಳು ವರ್ಷಗಳಿಂದ ಸಾಕಷ್ಟು ಕೆಲಸ ಮತ್ತು ಒತ್ತಡದಿಂದ ಇದ್ದೆ. ಈಗ ಇದನ್ನು ಸರಿದೂಗಿಸುವ ಸಮಯ ಬಂದಿದೆ. ನನ್ನ ಟಿ20 ಕ್ರಿಕೆಟ್​ನ ನಾಯಕತ್ವ ಕೊನೆಗೊಂಡಿದೆ. ನಮ್ಮ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಹೌದು, ನಾವು ಇಲ್ಲಿ ಟ್ರೋಫಿ ಗೆದ್ದಿಲ್ಲ ನಿಜ, ಆದರೆ ಅತ್ಯುತ್ತಮ ಕ್ರಿಕೆಟ್ ಅನ್ನು ಆಡಿದ್ದೇವೆ’ ಎಂದು ಹೇಳಿದ್ದಾರೆ.

‘ನಮ್ಮ ತಂಡದಲ್ಲಿರುವ ಆಟಗಾರರು ನನ್ನ ಕೆಲಸನ್ನು ತುಂಬಾನೆ ಸರಳ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೊನೆಯ ಮೂರು ಪಂದ್ಯಗಳಲ್ಲಿ. ಇದು ಈ ಯುಗದ ಟಿ20 ಕ್ರಿಕೆಟ್. ಮೊದಲ ಎರಡು ಓವರ್​ನಲ್ಲಿ ಸ್ಫೋಟಕ ಆಟವಾಡುವುದನ್ನ ನಾವು ಮೊದಲ ಎರಡು ಪಂದ್ಯಗಳಲ್ಲಿ ಮಾಡಲಿಲ್ಲ. ಈ ಹಿಂದೆ ಹೇಳಿದಂತೆ ಆ ಪಂದ್ಯಗಳಲ್ಲಿ ನಾವು ಧೈರ್ಯದಿಂದ ಇರಲಿಲ್ಲ, ಆ ಸಂದರ್ಭದಲ್ಲಿ ಅದು ಸಾಕಷ್ಟು ಕಷ್ಟವಾಗಿತ್ತು. ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿಗಳಿಗೆ ನನ್ನ ಧನ್ಯವಾದ. ವರ್ಷದಿಂದ ವರ್ಷಕ್ಕೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆಟಗಾರರಲ್ಲಿ ಉತ್ತಮ ಸಂಬಂಧ ಬೆಳೆಸಿದ್ದಾರೆ. ಆಟಗಾರರ ನಡುವೆ ಏನು ಬೇಕೋ ಅದನ್ನು ಅವರು ಮಾಡಿದ್ದಾರೆ.’

‘ನನ್ನ ಅಗ್ರೆಶನ್ ಯಾವತ್ತೂ ಬದಲಾಗುವುದಿಲ್ಲ. ಅದು ಬದಲಾವಣೆ ಆದ ದಿನ ನಾನು ಕ್ರಿಕೆಟ್ ಆಡುವುದು ನಿಲ್ಲಿಸುತ್ತೇನೆ. ನಾನು ನಾಯಕನಾಗು ಮುನ್ನ ಕೂಡ ತಂಡಕ್ಕೆ ಯಾವುದಾದರು ರೀತಿಯಲ್ಲಿ ಹೇಗಾದರು ಕೊಡುನೆ ನೀಡುತ್ತಿದ್ದೆ. ಸೂರ್ಯಕುಮಾರ್​ಗೆ ಈ ವಿಶ್ವಕಪ್​ನಲ್ಲಿ ಆಡಲು ಸಾಕಷ್ಟು ಸಮಯ ಸಿಗಲಿಲ್ಲ. ಅದಕ್ಕಾಗಿ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸಿದೆ. ಇದೊಂದು ನನ್ನ ಖಾತೆಗೆ ಸೇರಿದ ಅತ್ಯುತ್ತಮ ನೆನಪು’ ಎಂದು ಕೊಹ್ಲಿ ಹೇಳಿದ್ದಾರೆ.

ನಮೀಬಿಯಾ ವಿರುದ್ಧದ ಈ ಪಂದ್ಯದಲ್ಲಿ ಆಲ್ರೌಂಡ್ ನಿರ್ವಹಣೆ ತೋರಿದ ವಿರಾಟ್ ಕೊಹ್ಲಿ ಬಳಗ 9 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ನಮೀಬಿಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಸ್ಪಿನ್ ಜೋಡಿ ರವೀಂದ್ರ ಜಡೇಜಾ (16ಕ್ಕೆ 3) ಹಾಗೂ ಆರ್.ಅಶ್ವಿನ್ (20ಕ್ಕೆ 3) ಮಾರಕ ದಾಳಿಗೆ ನಲುಗಿದ ನಮೀಬಿಯ 8 ವಿಕೆಟ್‌ಗೆ 132 ರನ್‌ಗಳಿಸಿತು.

ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ, ಉಪನಾಯಕ ರೋಹಿತ್ ಶರ್ಮ (56ರನ್, 37 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (54*ರನ್, 36ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 136 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada