RCB Coach: ಆರ್ಸಿಬಿ ತಂಡಕ್ಕೆ ಹೊಸ ಹೆಡ್ ಕೋಚ್ ಘೋಷಣೆ: ದೊಡ್ಡ ನಿರ್ಧಾರ ಪ್ರಕಟಿಸಿದ ಬೆಂಗಳೂರು ಫ್ರಾಂಚೈಸಿ
Sanjay Bangar: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಆರ್ಸಿಬಿ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ. ಐಪಿಎಲ್ 2022 ಮತ್ತು ಐಪಿಎಲ್ 2023 ರಲ್ಲಿ ಇವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರಂತೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15ನೇ ಆವೃತ್ತಿಯ ದೊಡ್ಡ ಹರಾಜಿಗೆ ಕೆಲವೇ ವಾರಗಳಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ ತಂಡದ ಹೊಸ ನಾಯಕನ (RCB New Captain) ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹೊಸ ಮುಖ್ಯ ಕೋಚ್ನ ಹೆಸರನ್ನು (RCB Head Coach) ಘೋಷಣೆ ಮಾಡಿದೆ. ಆರ್ಸಿಬಿ ತಂಡದ ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ (Sanjay Bangar) ನೇಮಕಗೊಂಡಿದ್ದಾರೆ. ಈ ಬಗ್ಗೆ ಆರ್ಸಿಬಿ ಫ್ರಾಂಚೈಸಿ ಖಚಿತ ಪಡಿಸಿದ್ದು, ಮುಂದಿನ ಎರಡು ವರ್ಷಕ್ಕೆ ಆರ್ಸಿಬಿ (RCB) ತಂಡಕ್ಕೆ ಸಂಜಯ್ ಬಂಗಾರ್ ಅವರನ್ನು ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಹೇಳಿದೆ.
ಐಪಿಎಲ್ 2021ಕ್ಕೂ ಮುನ್ನ ಬೆಂಗಳೂರು ಫ್ರಾಂಚೈಸಿ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಬ್ಯಾಟಿಂಗ್ ಸಲಹೆಗಾರನನ್ನಾಗಿ ನೇಮಕ ಮಾಡಿತ್ತು. ಸದ್ಯ ಮುಂದಿನ ವರ್ಷದಿಂದ ಇವರನ್ನು ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಸಂಜಯ್ ಬಂಗಾರ್, ‘ಮುಖ್ಯ ಕೋಚ್ ಆಗಿ ಆರ್ಸಿಬಿಯಂತಹ ಅದ್ಭುತ ಫ್ರಾಂಚೈಸಿಯಲ್ಲಿ ಕೆಲಸ ಮಾಡುವುದು ನಿಜಕ್ಕೂ ಉತ್ತಮ ಅವಕಾಶವಾಗಿದೆ. ಅತ್ಯುತ್ತಮ ಆಟಗಾರರು, ಸಿಬ್ಬಂದಿಗಳ ಜೊತೆ ಕೆಲಸ ಮಾಡಿ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾತುರನಾಗಿದ್ದೇನೆ. ಐಪಿಎಲ್ ಮೆಗಾ ಆಕ್ಷನ್ ಇರುವ ಕಾರಣ ಸಾಕಷ್ಟು ಜವಾಬ್ದಾರಿಗಳಿವೆ. ಫ್ರಾಂಚೈಸಿ ಕಡೆಯಿಂದ ಸಂಪೂರ್ಣ ಬೆಂಬಲವಿದ್ದು ಆರ್ಸಿಬಿ ತಂಡ ಟ್ರೋಫಿ ಗೆಲ್ಲಲು ಎಲ್ಲ ಶ್ರಮವಹಿಸುತ್ತೇವೆ’ ಎಂದು ಹೇಳಿದ್ದಾರೆ.
Sanjay Bangar named Head Coach of RCB
Mike Hesson speaks about the appointment of RCB’s Head Coach while Sanjay Bangar addresses the fans explaining his plans for the mega auction and the 2022 season, on @myntra presents Bold Diaries.#PlayBold #WeAreChallengers #IPL2022 pic.twitter.com/wkm7VbizTV
— Royal Challengers Bangalore (@RCBTweets) November 9, 2021
ಆರ್ಸಿಬಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಕೂಡ ಬಂಗಾರ್ ಹೆಡ್ ಕೋಚ್ ಆಗಿರುವುದಕ್ಕೆ ಸಂತಸ ಹಂಚಿಕೊಂಡಿದ್ದಾರೆ. ‘ಬ್ಯಾಟಿಂಗ್ ತರಬೇತುದಾರರಾಗಿ ಸಂಜಯ್ ಅವರಿಗೆ ಉತ್ತಮ ಅನುಭವವಿದೆ. ಹೀಗಾಗಿ ಅವರೇ ಮುಖ್ಯ ಕೋಚ್ ಆಗುವುದು ಉತ್ತಮ ಎಂದು ಆರ್ಸಿಬಿ ಫ್ರಾಂಚೈಸಿ ತೀರ್ಮಾನಿಸಿತು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರು ಅದ್ಭುತವಾಗಿ ಕಾರ್ಯನಿರ್ವಹಿಸಿದ್ದರು. ಖಂಡಿತವಾಗಿಯೂ ಅವರ ಅನುಭವ ನಮಗೆ ಸಹಾಯವಾಗಲಿದೆ’ ಎಂದು ಹೆಸ್ಸನ್ ಹೇಳಿದ್ದಾರೆ.
ಇನ್ನು ಆರ್ಸಿಬಿ ಫ್ರಾಂಚೈಸಿ ಹೊಸ ನಾಯಕನ ಹೆಸರು ಕೂಡ ಸದ್ಯದಲ್ಲೇ ಘೋಷಣೆ ಮಾಡಲಿದೆಯಂತೆ. ಇದಕ್ಕಾಗಿ ಇಬ್ಬರು ಆಟಗಾರರ ಹೆಸರನ್ನು ಕೂಡ ಶಾರ್ಟ್ ಲಿಸ್ಟ್ ಮಾಡಿದೆಯಂತೆ. ಅವರೇ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಈಗಾಗಲೇ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ. ರಾಹುಲ್ ಕೂಡ ಪಂಜಾಬ್ ತಂಡ ಬಿಟ್ಟು ಮೆಗಾ ಆಕ್ಷನ್ಗೆ ಲಭ್ಯರಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗ ಆರ್ಸಿಬಿ ಇವರಿಬ್ಬರ ಪೈಕಿ ಒಬ್ಬರನ್ನು ಖರೀದಿಸಿ ನಾಯಕನ ಪಟ್ಟ ನೀಡಲಿದೆಯಂತೆ.
Rishabh Pant: ನಮೀಬಿಯಾ ಬ್ಯಾಟರ್ನ ಬ್ಯಾಟ್ಗೆ ಮೆಟ್ಟಿದ ರಿಷಭ್ ಪಂತ್: ತಪ್ಪು ಗೊತ್ತಾಗಿ ತಕ್ಷಣ ಮಾಡಿದ್ದೇನು ನೋಡಿ
(Sanjay Bangar was on Tuesday appointed as the head coach of Royal Challengers Bangalore RCB)