ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ (2nd Test) ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಆರಂಭದಲ್ಲಿ ಸ್ಪಿನ್ನರ್ ಎಜಾಜ್ ಪಟೇಲ್ (Ajaz Patel) ಭಾರತದ 10 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದರೆ, ಬಳಿಕ ನ್ಯೂಜಿಲೆಂಡ್ 62 ರನ್ಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿತ್ತು. ಇದೀಗ ಟೀಮ್ ಇಂಡಿಯಾ (Team India) ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಎರಡನೇ ಟೆಸ್ಟ್ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 4 ದಾಖಲೆ ಸೃಷ್ಟಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 8 ರನ್ಗೆ 4 ವಿಕೆಟ್ ಪಡೆದು ಕಿವೀಸ್ ಪಡೆಗೆ ಮಾರಕವಾಗಿದ್ದ ಆರ್ ಅಶ್ವಿನ್ (R Ashwin), ಈಗ ಎರಡನೇ ಇನ್ನಿಂಗ್ಸ್ನಲ್ಲಿ ನಿನ್ನೆ 3 ವಿಕೆಟ್ ಪಡೆದು ಎದುರಾಳಿಗಳಿಗೆ ಮಗ್ಗುಲಮುಳ್ಳಾಗಿ ಕಾಡುತ್ತಿದ್ದಾರೆ. ಅಲ್ಲದೇ ಹಲವು ದಾಖಲೆ, ಮೈಲಿಗಲ್ಲುಗಳನ್ನ ಮುಟ್ಟಿದ್ದಾರೆ.
ಭಾನುವಾರ ಪಂದ್ಯದ ಮೂರನೇ ದಿನ ಅಶ್ವಿನ್ ಅವರು ಟೀಮ್ ಇಂಡಿಯಾದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆಯವರ ದಾಖಲೆಯೊಂದನ್ನು ಅಳಿಸಿ ಹಾಕಿದರು. ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಅವರು 2021ರಲ್ಲಿ 50 ಟೆಸ್ಟ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ವರ್ಷ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದವರ ಪಟ್ಟಿಯಲ್ಲಿ ಪಾಕಿಸ್ಥಾನದ ಶಹೀನ್ ಅಫ್ರಿದಿ ಎರಡನೇ ಸ್ಥಾನದಲ್ಲಿದ್ದಾರೆ. (44 ವಿಕೆಟ್)
ಆರ್ ಅಶ್ವಿನ್ ಒಂದು ವರ್ಷದಲ್ಲಿ 50 ವಿಕೆಟ್ ಪಡೆದ ಸಾಧನೆಯನ್ನ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಮಾಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 50 ಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ ಭಾರತೀಯರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನಕ್ಕೇರಿದರು. ಅಶ್ವಿನ್ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. (2015, 2016, 2017, 2021). ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ ಅವರು 1999, 2004, 2006ರಲ್ಲಿ ಈ ದಾಖಲೆ ಮಾಡಿದ್ದರೆ, ಹರ್ಭಜನ್ ಸಿಂಗ್ ಅವರು 2001, 2002, 2008ರಲ್ಲಿ ಈ ಸಾಧನೆ ಮಾಡಿದ್ದರು.
Most wickets in Tests in 2021:
51* – R Ashwin
44 – Shaheen Afridi
39 – Hasan Ali
35 – Axar PatelRavi Ashwin becomes the first bowler to complete 50 wickets in Tests in 2021.#ravichandranashwin #INDvsNZ #INDvNZ #Cricket #IndianCricketTeam #CricketTwitter
— Sachin Ghasil ?? (@GhasilSachin) December 5, 2021
ಇದರ ಜೊತೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ 65 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವೇಗಿ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಹ್ಯಾಡ್ಲಿ ದಾಖಲೆ ಬಗ್ಗೆ ಕುತೂಹಲ ಅಂಶ ಎಂದರೆ, ರಿಚರ್ಡ್ ಹ್ಯಾಡ್ಲಿ ಅವರು ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 65 ವಿಕೆಟ್ ಪಡೆಯಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಆರ್ ಅಶ್ವಿನ್ ಅವರು ಕೇವಲ 17 ಇನ್ನಿಂಗ್ಸಲ್ಲಿ ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಆರ್. ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇದೂವರೆಗೆ ಅವರು 80 ಪಂದ್ಯಗಳಿಂದ ಬರೋಬ್ಬರಿ 419 ವಿಕೆಟ್ ಪಡೆದಿದ್ದಾರೆ.
India vs New Zealand: ಭಾರತದ ಜಯಕ್ಕಿನ್ನು ಐದೇ ಮೆಟ್ಟಿಲು: ನ್ಯೂಜಿಲೆಂಡ್ ಗೆಲುವಿಗೆ ಬೇಕು ಬರೋಬ್ಬರಿ 400 ರನ್
(India vs New Zealand Ravichandran Ashwin becomes the first bowler to complete 50 wickets in Tests in 2021)