Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್

India vs New Zealand: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್​ನ ಮೂರನೇ ದಿನದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ ವೇಳೆ ಅಂಪೈರ್ ಸರಿಯಾಗಿ ಗಮನಿಸದೆ ಕೆಟ್ಟ ನಿರ್ಧಾರವೊಂದನ್ನು ಪ್ರಕಟಿಸಿದರು. ಈ ಸಂದರ್ಭ ಸಿಟ್ಟಾದ ವಿರಾಟ್ ಕೊಹ್ಲಿ ಏನು ಹೇಳಿದ್ರು ಕೇಳಿ.

Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್
Virat Kohli India vs New Zealand
Follow us
TV9 Web
| Updated By: Vinay Bhat

Updated on: Dec 06, 2021 | 9:38 AM

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಬಹುತೇಕ ಟೀಮ್ ಇಂಡಿಯಾ (Team India) ಕಡೆ ವಾಲಿದೆ. ಕೊಹ್ಲಿ (Kohli) ಪಡೆಯ ಗೆಲುವಿಗೆ ಕಿವೀಸ್ ಪಡೆಯ ಕೇವಲ 5 ವಿಕೆಟ್​ಗಳಷ್ಟೆ ಬೇಕಿರುವುದು. ಹೀಗಾಗಿ ಇಂದು ಮಧ್ಯಾಹ್ನದ ಹೊತ್ತಿಗೆ ಭಾರತದ ಗೆಲುವು ಖಚಿತವಾಗಲಿದೆ. ಇಂಡೋ-ಕಿವೀಸ್ (IND vs ZN Test) ಟೆಸ್ಟ್ ಸರಣಿಯಲ್ಲಿ ಅಂಪೈರ್​ಗಳ ಕೆಟ್ಟ ತೀರ್ಪಿನಿಂದ ಅನೇಕ ತಪ್ಪುಗಳಾಗಿವೆ. ಈ ಹಿಂದೆ ರಾಂಚಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೂ ಅಂಪೈರ್​ಗಳು ಮನಬಂದಂತೆ ತೀರ್ಪು ನೀಡುತ್ತಿದ್ದರು. ಎರಡನೇ ಟೆಸ್ಟ್​ನಲ್ಲೂ ಅದೇ ಮುಂದುವರೆದಿದೆ. ಆಟಗಾರರು ಡಿಆರ್​​ಎಸ್ (DRS) ಮೊರೆ ಹೋಗಿ ತಪ್ಪಾದ ನಿರ್ಧಾರವನ್ನು ಸರಿಪಡಿಸಿರುವ ಘಟನೆ ಮುಂಬೈ ಟೆಸ್ಟ್​ನಲ್ಲೂ (Mumbai Test) ನಡೆಯುತ್ತಿದೆ. ಭಾನುವಾರ ಕೂಡ ಅಂಪೈರ್​ಗಳು ಇದೇರೀತಿ ವರ್ತಿಸಿದರು. ಇದರಿಂದ ನಾಯಕ ವಿರಾಟ್ ಕೊಹ್ಲಿ (Virat Kohli) ಸಿಟ್ಟುಗೊಂಡು ಏನು ಹೇಳಿದ್ರು ಕೇಳಿ.

ಮೂರನೇ ದಿನದ ನ್ಯೂಜಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ ವೇಳೆ ಅಂಪೈರ್ ಸರಿಯಾಗಿ ಗಮನಿಸದೆ ಕೆಟ್ಟ ನಿರ್ಧಾರವೊಂದನ್ನು ಪ್ರಕಟಿಸಿದರು. 16ನೇ ಓವರ್​ನ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಒಂದು ಬಾಲ್ ಅನ್ನು ಫುಲ್​ಟ್ರಾಸ್ ಹಾಕಿದರು. ಸರಿಯಾಗಿ ನಿಯಂತ್ರಣಕ್ಕೆ ಸಿಗದ ಕಾರಣ ಚೆಂಡನ್ನು ಬ್ಯಾಟರ್ ರಾಸ್ ಟೇಲರ್ ಹಾಗೂ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಇಬ್ಬರೂ ಬಿಟ್ಟರು. ಪರಿಣಾಮ ಬಾಲ್ ವಿಕೆಟ್ ಹಿಂಬದಿಯಿಂದ ಬೌಂಡರಿ ಗೆರೆ ದಾಟಿತು.

ಈ ಸಂದರ್ಭ ಬೈಸ್ ಎಂದು ನಿರ್ಧಾರ ಕೊಡಬೇಕಾದ ಅಂಪೈರ್ ಬೌಂಡರಿ ಎಂದು ಕೈ ತೋರಿಸಿದರು. ಅಷ್ಟಕ್ಕು ಅಲ್ಲಿ ಬ್ಯಾಟ್ ತಾಗಿಯೇ ಇರಲಿಲ್ಲ. ಆದರೂ ಬ್ಯಾಟರ್ ಖಾತೆಗೆ 4 ರನ್ ಸೇರಿಸಿದರು. ಇದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ನಗುತ್ತಲೇ “ಈ ಅಂಪೈರ್​ಗಳು ಏನು ಮಾಡುತ್ತಿದ್ದಾರೆ?, ನಾನು ನಿಮ್ಮ ಜಾಗಕ್ಕೆ ಬರುತ್ತೇನೆ, ನೀವು ಇಲ್ಲಿ ಫೀಲ್ಡಿಂಗ್​ಗೆ ಬನ್ನಿ” ಎಂಬ ಅರ್ಥದಲ್ಲಿ ಹಿಂದಿಯಲ್ಲಿ ಹೇಳಿದ್ದಾರೆ. ಇದು ಸ್ಟಂಪ್​ ಮೈಕ್​ನಲ್ಲಿ ಕೇಳಿಸಿದೆ. ಸದ್ಯ ಕೊಹ್ಲಿ ಈ ರೀತಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ. ಇನ್ನೂ 2 ದಿನಗಳ ಆಟ ಬಾಕಿ ಉಳಿದಿರುವ ನಿರ್ಣಾಯಕ ಪಂದ್ಯವನ್ನು ಮೂರೂವರೆ ದಿನಗಳಲ್ಲೇ ಗೆಲ್ಲುವ ಅವಕಾಶ ಕೊಹ್ಲಿ ಪಡೆಯ ಮುಂದಿದೆ. ಸೋಮವಾರ ಉಳಿದ 5 ವಿಕೆಟ್ ಕಬಳಿಸಿ ಸರಣಿ ವಶಪಡಿಸಿಕೊಳ್ಳುವತ್ತ ಟೀಮ್ ಇಂಡಿಯಾ ದಿಟ್ಟ ಹೆಜ್ಜೆ ಇಟ್ಟಿದೆ. ಸದ್ಯ ಭಾರತ ನೀಡಿದ 540 ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್, ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 138 ರನ್ ಪೇರಿಸಿದ್ದು, ಜಯ ದಾಖಲಿಸಲು ಇನ್ನೂ 400 ರನ್ ಗಳಿಸಬೇಕಿದೆ.

IND vs NZ 2nd Test, Day 3 LIVE Score

Ravichandran Ashwin: ಒಂದೇ ದಿನ ರವಿಚಂದ್ರನ್ ಅಶ್ವಿನ್ ಖಾತೆಗೆ ಸೇರಿತು ಬರೋಬ್ಬರಿ 4 ದಾಖಲೆಗಳು

(Virat Kohli Angry and take a swipe at an umpire saying he is willing to swap places with him in IND vs NZ 2nd Test)