India vs Pakistan, Asia Cup 2022: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್: ಸುಲಭ ಗುರಿ ನೀಡಿದ ಪಾಕ್

| Updated By: ಝಾಹಿರ್ ಯೂಸುಫ್

Updated on: Aug 28, 2022 | 9:32 PM

India vs Pakistan, Asia Cup 2022: ಎಚ್ಚರಿಕೆಯ ಆಟವಾಡಿದ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು.

India vs Pakistan, Asia Cup 2022: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್: ಸುಲಭ ಗುರಿ ನೀಡಿದ ಪಾಕ್
Team India
Follow us on

India vs Pakistan, Asia Cup 2022: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ ಟೀಮ್ ಇಂಡಿಯಾ 148 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ್ದ ಪಾಕ್ ಉತ್ತಮ ಆರಂಭ ಪಡೆದಿರಲಿಲ್ಲ. ಪಂದ್ಯದ ಮೂರನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಪಾಕ್ ನಾಯಕ ಬಾಬರ್ ಆಜಂ (10) ಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಇದಾದ ಬಳಿಕ ಎಚ್ಚರಿಕೆಯ ಆಟವಾಡಿದ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಇನ್ನು ಪವರ್​ಪ್ಲೇನ ಅಂತಿಮ ಓವರ್​ನಲ್ಲಿ ಫಖರ್ ಝಮಾನ್ (10) ವಿಕೆಟ್ ಪಡೆಯುವ ಮೂಲಕ ಅವೇಶ್ ಖಾನ್ ಟೀಮ್ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ ರಿಜ್ವಾನ್ ಹಾಗೂ ಇಫ್ತಿಕರ್ ಅಹ್ಮದ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪರಿಣಾಮ 10 ಓವರ್​ಗಳಲ್ಲಿ ಪಾಕಿಸ್ತಾನ್ ತಂಡವು 68 ರನ್​ ಕಲೆಹಾಕಿತು. ಮೊದಲ ಹತ್ತು ಓವರ್​ಗಳಲ್ಲಿ ಮೇಲುಗೈ ಸಾಧಿಸಿ ಟೀಮ್ ಇಂಡಿಯಾ ಬೌಲರ್​ಗಳು ಪಾಕ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅದರಂತೆ 13ನೇ ಓವರ್​ನ ಹಾರ್ದಿಕ್ ಪಾಂಡ್ಯರ ಮೊದಲ ಎಸೆತದಲ್ಲೇ ಇಫ್ತಿಕರ್ ಅಹ್ಮದ್ (28) ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದರು. ಇದಾಗ್ಯೂ ಮತ್ತೊಂದೆಡೆ ಮೊಹಮ್ಮದ್ ರಿಜ್ವಾನ್ ಕ್ರೀಸ್ ಕಚ್ಚಿ ನಿಂತಿದ್ದರು. ಇದೇ ವೇಳೆ ಮತ್ತೆ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಎಸೆತವನ್ನು ಥರ್ಡ್​ಮ್ಯಾನ್​ನತ್ತ ಬಾರಿಸಲು ಹೋಗಿ ರಿಜ್ವಾನ್ (42) ಕೂಡ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಖುಷ್ದಿಲ್ ಶಾ (7) ಜಡೇಜಾಗೆ ಕ್ಯಾಚ್ ನೀಡಿ ಹೊರನಡೆದರು. ಈ ಮೂಲಕ ಹಾರ್ದಿಕ್ ಪಾಂಡ್ಯ 15ನೇ ಓವರ್​ನಲ್ಲಿ ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.

ಪರಿಣಾಮ ಪಾಕ್ ತಂಡವು 15ನೇ ಓವರ್​ನಲ್ಲಿ 100 ರನ್​ಗಳ ಗಟಿದಾಡುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಇನ್ನು ಆಸೀಫ್ ಅಲಿ 9 ರನ್​ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಬೌಂಡರಿ ಲೈನ್​ನಲ್ಲಿದ್ದ ಸೂರ್ಯಕುಮಾರ್​ ಯಾದವ್​ಗೆ ಕ್ಯಾಚ್ ನೀಡಿದರು. ಇನ್ನು 18ನೇ ಓವರ್​ನಲ್ಲಿ ನವಾಜ್ (1) ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾಗೆ 7ನೇ ಯಶಸ್ಸು ತಂದುಕೊಟ್ಟರು.

18ನೇ ಓವರ್ ಮುಕ್ತಾಯದ ವೇಳೆಗೆ 124 ರನ್​ ಕಲೆಹಾಕಿದ್ದ ಪಾಕಿಸ್ತಾನ್ ತಂಡಕ್ಕೆ 19ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸುವ ಮೂಲಕ ಅಂತಿಮ ಓವರ್​ಗಳಲ್ಲಿ ರನ್​ ಗತಿಯನ್ನು ನಿಯಂತ್ರಿಸಿದರು. ಅಂತಿಮ ಹಂತದಲ್ಲಿ 6 ಎಸೆತಗಳಲ್ಲಿ 16 ರನ್​ ಬಾರಿಸಿದ್ದ ದಹಾನಿಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಾಕಿಸ್ತಾನ್ ತಂಡವನ್ನು 19.5 ಓವರ್​ಗಳಲ್ಲಿ 147 ರನ್​ಗಳಿಗೆ ಆಲೌಟ್ ಮಾಡಿತು.

ಟೀಮ್ ಇಂಡಿಯಾ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಇನ್ನು ಅರ್ಷದೀಪ್ ಸಿಂಗ್ 2 ವಿಕೆಟ್ ಉರುಳಿಸಿದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.

 

 

 

Published On - 9:29 pm, Sun, 28 August 22