
ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2025) ಪಂದ್ಯಕ್ಕೆ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಪಂದ್ಯದಲ್ಲಿ ಜಯ ಗಳಿಸುವ ತಂಡಕ್ಕೆ ಸೂಪರ್ 4 ಸುತ್ತಿಗೆ ಟಿಕೆಟ್ ಖಚಿತವಾಗಲಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿವೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಆದಾಗ್ಯೂ ದುಬೈ ಮೈದಾನದಲ್ಲಿ ಪಂದ್ಯ ಗೆಲ್ಲಬೇಕೆಂದರೆ ಟಾಸ್ ಗೆಲ್ಲುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಟಾಸ್ ಗೆದ್ದ ತಂಡವು ದುಬೈನಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ದುಬೈನಲ್ಲಿ ಈ ಎರಡೂ ತಂಡಗಳ ನಡುವಿನ ಟಿ20 ಪಂದ್ಯದ ಇತಿಹಾಸವು ಕೂಡ ಇದನ್ನೇ ಹೇಳುತ್ತದೆ.
ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಲ್ಲಿಯವರೆಗೆ 3 ಟಿ20 ಪಂದ್ಯಗಳು ನಡೆದಿದ್ದು, ಮೂರರಲ್ಲಿಯೂ ಗುರಿಯನ್ನು ಬೆನ್ನಟ್ಟಿದ ತಂಡ ಗೆದ್ದಿದೆ. 2022 ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ, ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತು. ಮುಂದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. 2021 ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಇದರರ್ಥ ದುಬೈನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಯಾವಾಗಲೂ ಸೋಲಿಗೆ ಕೊರಳೊಡ್ಡಿದೆ. ಇದೇ ಕಾರಣದಿಂದ 2025 ರ ಏಷ್ಯಾಕಪ್‌ನಲ್ಲಿ ಯಾವುದೇ ತಂಡ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದೆ. ಅಂದಹಾಗೆ, ಇದು ಏಷ್ಯಾಕಪ್ ಬಗ್ಗೆ ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕೊನೆಯ 8 ಪಂದ್ಯಗಳಲ್ಲಿ, ಕಳೆದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಚೇಸಿಂಗ್ ತಂಡವೇ ಗೆದ್ದಿದೆ.
IND vs PAK: ಭಾರತ- ಪಾಕ್ ತಂಡಗಳ ನಡುವಿನ ಈ 4 ವಿವಾದಗಳು ನಿಮಗೆ ನೆನಪಿವೆಯಾ?
ದುಬೈನಲ್ಲಿ ಚೇಸಿಂಗ್ ಮಾಡುವುದು ಏಕೆ ಸುಲಭ, ಇದು ಒಂದು ದೊಡ್ಡ ಪ್ರಶ್ನೆಯಾಗಿದೆ. ದುಬೈ ಪಿಚ್ ಆರಂಭದಲ್ಲಿ ಸ್ವಲ್ಪ ನಿಧಾನವಾಗಿರುತ್ತದೆ, ಇದರಿಂದಾಗಿ ಚೆಂಡು ನಿಂತು ಬರುತ್ತದೆ. ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ಬಿಗ್ ಶಾಟ್‌ಗಳನ್ನು ಆಡುವುದು ಸುಲಭವಲ್ಲ. ನಂತರ, ಹವಾಮಾನ ತಣ್ಣಗಾಗುತ್ತಿದ್ದಂತೆ, ಪಿಚ್ ವೇಗವಾಗುತ್ತದೆ ಮತ್ತು ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ, ಶಾಟ್‌ಗಳನ್ನು ಆಡಲು ಸುಲಭವಾಗುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಟಾಸ್ ಗೆಲ್ಲುತ್ತಾರೋ ಅವರು ಅರ್ಧ ಪಂದ್ಯ ಗೆದ್ದಂತೆ ಎಂದರೆ ತಪ್ಪಾಗಲಾರದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ