Virat Kohli: ಒಂದು ಪಂದ್ಯದ ಸೋಲು…ಹಲವು ಕೆಟ್ಟ ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ

| Updated By: ಝಾಹಿರ್ ಯೂಸುಫ್

Updated on: Oct 25, 2021 | 5:19 PM

India vs Pakistan: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿ ಸೀಮಿತ ಓವರ್ ಕ್ರಿಕೆಟ್​ನಲ್ಲಿ 10 ವಿಕೆಟ್​ಗಳ ಸೋಲು ಕಂಡಿದೆ. ಈ ಮೊದಲು ಜನವರಿ 2020ರಲ್ಲಿ ಆಸ್ಟ್ರೇಲಿಯಾ ವಿರುದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳಿಂದ ಸೋಲನುಭವಿಸಿತ್ತು.

Virat Kohli: ಒಂದು ಪಂದ್ಯದ ಸೋಲು...ಹಲವು ಕೆಟ್ಟ ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
Virat Kohli
Follow us on

ಟಿ20 ವಿಶ್ವಕಪ್​ 2021ರ (T20 World Cup 2021) ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (Pakistan) ವಿರುದ್ದ ಹೀನಾಯ ಸೋಲನುಭವಿಸಿದೆ. ಈ ಮೂಲಕ 29 ವರ್ಷಗಳ ನಂತರ ಪಾಕಿಸ್ತಾನ ತಂಡ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. 1992ರ ನಂತರ ಮೊದಲ ಬಾರಿಗೆ ನಾಯಕ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿ ಈ ಅನಗತ್ಯ ದಾಖಲೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್​ನಿಂದ ಶುರುವಾಗಿ ಮಹೇಂದ್ರ ಸಿಂಗ್ ಧೋನಿವರೆಗೆ ಯಾವ ನಾಯಕನೂ ಪಾಕ್ ವಿರುದ್ದ ಸೋಲನುಭವಿಸಿಲ್ಲ. ಆದರೆ ಕೊಹ್ಲಿ ತಮ್ಮ ನಾಯಕತ್ವದ ಕೊನೆಯ ಟೂರ್ನಿಯಲ್ಲೇ ಪಾಕ್ ವಿರುದ್ದ ಸೋಲುವ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ.

ಸೋತ ಮೊದಲ ನಾಯಕ: ಈ ಬಾರಿ ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 12-0 ಮುನ್ನಡೆ ಸಾಧಿಸಿತ್ತು. ಏಕದಿನ ವಿಶ್ವಕಪ್‌ನಲ್ಲಿ ಪಾಕ್ ವಿರುದ್ದ ಭಾರತ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಟಿ20 ವಿಶ್ವಕಪ್‌ನಲ್ಲಿ 5 ಜಯ ಸಾಧಿಸಿತ್ತು. ಆದರೆ ಈಗ 29 ವರ್ಷಗಳ ನಂತರ ಪಾಕ್ ತಂಡ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ವಿರುದ್ದ ಮೊದಲ ಗೆಲುವು ದಾಖಲಿಸಿದೆ. ಅತ್ತ ಗೆಲುವು ದಾಖಲಿಸಿದ ಮೊದಲ ನಾಯಕ ಬಾಬರ್ ಆಜಂ ಆದರೆ, ಇತ್ತ ಸೋಲು ಕಂಡು ಮೊದಲ ನಾಯಕ ಎಂಬ ಹಣೆಪಟ್ಟಿ ಕೊಹ್ಲಿ ಪಾಲಾಗಿದೆ.

10 ವಿಕೆಟ್​ಗಳ ಹೀನಾಯ ಸೋಲು: ಟೀಮ್ ಇಂಡಿಯಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 10 ವಿಕೆಟ್‌ಗಳಿಂದ ಸೋಲನುಭವಿಸಿಲ್ಲ. ಈ ಮೊದಲು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು 9 ಕ್ಕೂ ಹೆಚ್ಚು ವಿಕೆಟ್​ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತ್ತು. ಇದಾಗ್ಯೂ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ 10 ವಿಕೆಟ್​ಗಳ ಹೀನಾಯ ಸೋಲು ಕಂಡಿಲ್ಲ. ಹಾಗೆಯೇ ಪಾಕ್ ವಿರುದ್ದ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಇದುವರೆಗೆ 10 ವಿಕೆಟ್​ಗಳಿಂದ ಸೋತಿಲ್ಲ. 1997 ರಲ್ಲಿ ಪಾಕ್ ವಿರುದ್ದ 9 ವಿಕೆಟ್​ಗಳಿಂದ ಸೋತಿದ್ದು ಇದುವರೆಗಿನ ಕೆಟ್ಟ ದಾಖಲೆಯಾಗಿತ್ತು. ಇದೀಗ 10 ವಿಕೆಟ್​ಗಳಿಂದ ಪರಾಜಯಗೊಳ್ಳುವ ಮೂಲಕ ಟೀಮ್ ಇಂಡಿಯಾ ಕೆಟ್ಟ ದಾಖಲೆಯನ್ನು ಮೈಮೇಲೆ ಎಳೆದುಕೊಂಡಿದೆ.

ಎರಡು ಬಾರಿ ಹೀನಾಯ ಸೋಲು:
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿ ಸೀಮಿತ ಓವರ್ ಕ್ರಿಕೆಟ್​ನಲ್ಲಿ 10 ವಿಕೆಟ್​ಗಳ ಸೋಲು ಕಂಡಿದೆ. ಈ ಮೊದಲು ಜನವರಿ 2020ರಲ್ಲಿ ಆಸ್ಟ್ರೇಲಿಯಾ ವಿರುದ್ದ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಇದೀಗ ಪಾಕ್ ವಿರುದ್ದ ಟಿ20 ವಿಶ್ವಕಪ್​ನಲ್ಲಿ ಸೋಲುವ ಮೂಲಕ ಕೊಹ್ಲಿ 2 ಬಾರಿ 10 ವಿಕೆಟ್​ಗಳಿಂದ ಸೋತ ಟೀಮ್ ಇಂಡಿಯಾ ನಾಯಕ ಎನಿಸಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲು: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲೇ ಸೋಲನುಭವಿಸಿರುವುದು ಇದು ಎರಡನೇ ಬಾರಿ. ಈ ಹಿಂದೆ 2016 ರ ಟಿ20 ವಿಶ್ವಕಪ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲೇ ಪರಾಜಯಗೊಂಡಿತು. ಅಂದು ಆ ಪಂದ್ಯದಲ್ಲಿ ಭಾರತ ತಂಡವು ಕೇವಲ 79 ರನ್​ಗೆ ಆಲೌಟ್ ಆಗಿತ್ತು. ಇದೀಗ ಪಾಕಿಸ್ತಾನ್ ವಿರುದ್ದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಸೋತು ನಿರಾಸೆ ಮೂಡಿಸಿದೆ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(India vs Pakistan: Captain Virat Kohli registers unwanted records)