
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ. ಪಾಕಿಸ್ತಾನ ನೀಡಿದ 160 ರನ್ಗಳ ಗುರಿಯನ್ನು ಭಾರತ 6 ವಿಕೆಟ್ ನಷ್ಟದಲ್ಲಿ ಸಾಧಿಸಿತು. ವಿರಾಟ್ ಕೊಹ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 8 ವಿಕೆಟ್ಗೆ 159 ರನ್ ಗಳಿಸಿತು. ಶಾನ್ ಮಸೂದ್ ಮತ್ತು ಇಫ್ತಿಕರ್ ಅಹ್ಮದ್ ಇಬ್ಬರೂ ಅರ್ಧಶತಕ ಗಳಿಸಿದರು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭ ಕಳಪೆಯಾಗಿದ್ದರೂ ಆ ಬಳಿಕ ಕೊಹ್ಲಿ ಹಾಗೂ ಪಾಂಡ್ಯ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಅಮೋಘವಾಗಿ ಆರಂಭಿಸಿದೆ. ಪಾಕಿಸ್ತಾನ ನೀಡಿದ 160 ರನ್ಗಳ ಗುರಿಯನ್ನು ಭಾರತ 6 ವಿಕೆಟ್ ನಷ್ಟದಲ್ಲಿ ಸಾಧಿಸಿತು.
ಭಾರತದ 100 ರನ್ಗಳು ಪೂರ್ಣಗೊಂಡಿದ್ದು, ಇದೀಗ ಭಾರತದ ಗೆಲುವಿಗೆ 5 ಓವರ್ಗಳಲ್ಲಿ 60 ರನ್ಗಳ ಅಗತ್ಯವಿದೆ. ಕೊಹ್ಲಿ ಮತ್ತು ಪಾಂಡ್ಯ ಕ್ರೀಸ್ನಲ್ಲಿ ಫ್ರೀಜ್ ಆಗಿದ್ದಾರೆ. ಸ್ಪರ್ಧೆಯು ಬಹಳ ರೋಚಕವಾಗಿ ಮಾರ್ಪಟ್ಟಿದೆ
ಕೊಹ್ಲಿ ಮತ್ತು ಪಾಂಡ್ಯ ಕ್ರೀಸ್ನಲ್ಲಿ ನೆಲೆಯೂರಿದ್ದಾರೆ. 40 ಎಸೆತಗಳಲ್ಲಿ ಇಬ್ಬರ ನಡುವಿನ 50 ರನ್ಗಳ ಜೊತೆಯಾಟ ಪೂರ್ಣಗೊಂಡಿದೆ. ಇಬ್ಬರೂ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.
4 ವಿಕೆಟ್ ಉರುಳಿದ ಬಳಿಕ ನಿದಾನಗತಿಯ ಬ್ಯಾಟಿಂಗ್ಗೆ ಮುಂದಾಗಿದ್ದ ಭಾರತ 12ನೇ ಓವರ್ನಲ್ಲಿ ಲಯಕ್ಕೆ ಮರಳಿದಂತೆ ತೋರುತ್ತಿದೆ. ಈ ಓವರ್ನಲ್ಲಿ ಪಾಂಡ್ಯ 2 ಸಿಕ್ಸರ್ ಭಾರಿಸಿದರೆ, ಕೊಹ್ಲಿ ಒಂದು ಸಿಕ್ಸರ್ ಬಾರಿಸಿದರು.
11ನೇ ಓವರ್ನ ಶಾದಾಬ್ ಖಾನ್ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸುವ ಮೂಲಕ ಭಾರತದ 50 ರನ್ ಪೂರ್ಣಗೊಂಡಿತು.
ಟೀಂ ಇಂಡಿಯಾದ ಮೊದಲ ಸಿಕ್ಸರ್ ಪಾಂಡ್ಯ ಬ್ಯಾಟ್ನಿಂದ ಬಂದಿದೆ. 12ನೇ ಓವರ್ ಎಸೆದ ನವಾಜ್ ಅವರ ಮೊದಲ ಎಸೆತವನ್ನು ಪಾಂಡ್ಯ ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು.
11ನೇ ಓವರ್ನಲ್ಲಿ ಪಾಂಡ್ಯ ಸ್ಟ್ರೈಟ್ ಹಿಟ್ ಮಾಡುವ ಮೂಲಕ ಬೌಂಡರಿ ಬಾರಿಸಿದರು. ಇದು ಪಾಂಡ್ಯ ಅವರ ಮೊದಲ ಬೌಂಡರಿಯಾಗಿದೆ.
10 ಓವರ್ಗಳ ಆಟ ಮುಗಿದಿದ್ದು, ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲಿಕಿದೆ. ತಂಡದ ಪ್ರಮುಖ 4 ವಿಕೆಟ್ಗಳು ಉರುಳಿದ್ದು, 10 ಓವರ್ಗಳಲ್ಲಿ ತಂಡ ಕೇವಲ 45 ರನ್ ಗಳಿಸಿದೆ. ಕೊಹ್ಲಿ ಹಾಗೂ ಪಾಂಡ್ಯ ಬ್ಯಾಟಿಂಗ್ನಲ್ಲಿದ್ದಾರೆ.
7ನೇ ಓವರ್ ಮೊದಲನೇ ಎಸೆತದಲ್ಲಿ ಅಕ್ಷರ್ ಪಟೇಲ್ ರನೌಟ್ ಆಗಿ ಬಲಿಯಾಗಿದ್ದಾರೆ. ಶಾದಬ್ ಎಸೆದ ಈ ಓವರ್ನಲ್ಲಿ ಅಕ್ಷರ್ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಕೊಹ್ಲಿ- ಹಾಗೂ ಅಕ್ಷರ್ ನಡುವೆ ಉಂಟಾದ ಗೊಂದಲದಲ್ಲಿ ಅಕ್ಷರ್ ರನೌಟ್ ಆದರು.
ಪವರ್ ಪ್ಲೇ ಮುಗಿದ್ದಿದ್ದು, ಟೀಂ ಇಂಡಿಯಾ ಈ 6 ಓವರ್ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡದ ಖಾತೆಯಲ್ಲಿ ಕೇವಲ 31 ರನ್ ಮಾತ್ರ ಸೇರಿವೆ.
6ನೇ ಓವರ್ನ 2ನೇ ಎಸೆತವನ್ನು ಸೂರ್ಯಕುಮಾರ್ ಮಿಡ್ ವಿಕೆಟ್ ಕಡೆ ಬೌಂಡರಿಗಟ್ಟಿದ್ದಾರೆ. ನಂತರದ ಎಸೆತದಲ್ಲೇ ಸೂರ್ಯ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಭಾರತ 26 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
4ನೇ ಓವರ್ 2ನೇ ಎಸೆತದಲ್ಲಿ ರೋಹಿತ್ ಫಸ್ಟ್ ಸ್ಲಿಪ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
3ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದೆ. ಕೊಹ್ಲಿ 2 ರನ್ ಗಳಿಸಿದ್ದರೆ, ರೋಹಿತ್ 4 ರನ್ ಬಾರಿಸಿದ್ದಾರೆ.
ಆರಂಭಿಕ ರಾಹುಲ್ ಮತ್ತೊಮ್ಮೆ ಪಾಕ್ ವಿರುದ್ಧ ವಿಫಲರಾಗಿದ್ದಾರೆ. 2ನೇ ಓವರ್ ಎಸೆದ ನಸೀಮ್ 5ನೇ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ.
ಟೀಂ ಇಂಡಿಯಾ ಪರ ರೋಹಿತ್ ಹಾಗೂ ರಾಹುಲ್ ಕಣಕ್ಕಿಳಿದಿದ್ದಾರೆ. ಪಾಕ್ ಪರ ಆಫ್ರಿದಿ ಬೌಲಿಂಗ್ ದಾಳಿ ಆರಂಭಿಸಿದ್ದಾರೆ.
ಭುವನೇಶ್ವರ್ ಅವರ ಕೊನೆಯ ಓವರ್ನಲ್ಲಿ ಹ್ಯಾರಿಸ್ ರೌಫ್ ಸಿಕ್ಸರ್ ಬಾರಿಸಿದರು. ಬಳಿಕ ಕೂಡ ಕೊನೆಯ ಎಸೆತದಲ್ಲಿ 2 ರನ್ ಸೇರಿಸಿದರು. ಇದರೊಂದಿಗೆ ಪಾಕಿಸ್ತಾನ 20 ಓವರ್ಗಳಲ್ಲಿ 8 ವಿಕೆಟ್ಗೆ 159 ರನ್ ಗಳಿಸಿತು. ಭಾರತಕ್ಕೆ 160 ರನ್ಗಳ ಗುರಿ ಸಿಕ್ಕಿತು.
ಭಾರತದ ಕಠಿಣ ದಾಳಿಯ ಮುಂದೆ ಶಾನ್ ಮಸೂದ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
18ನೇ ಓವರ್ ಎಸೆದ ಶಮಿಯ ಎರಡು ಎಸೆತಗಳನ್ನು ಮಸೂದ್ ಬೌಂಡರಿಗಟ್ಟಿದರು. ಮೊದಲ ಬೌಂಡರಿ ಸ್ಲಿಪ್ನಲ್ಲಿ ಬೌಂಡರಿಗೊದರೆ, ನಂತರದ ಎಸೆತ ಮಿಡ್ ಆಫ್ನಲ್ಲಿ ಬೌಂಡರಿ ತಲುಪಿತು.
17ನೇ ಓವರ್ ಎಸೆದ ಅರ್ಷದೀಪ್ ತಮ್ಮ ಖಾತೆಗೆ 3 ವಿಕೆಟ್ ಹಾಕಿಕೊಂಡಿದ್ದಾರೆ. 17ನೇ ಓವರ್ನ 4ನೇ ಎಸೆತದಲ್ಲಿ ಆಸೀಫ್ ಕಾರ್ತಿಕ್ಗೆ ಕ್ಯಾಚಿತ್ತು ಔಟಾಗಿದ್ದಾರೆ.
ಹಾರ್ದಿಕ್ ಎಸೆದ 16ನೇ ಓವರ್ನಲ್ಲಿ 2 ಬೌಂಡರಿ ಬಾರಿಸಿದ ನವಾಜ್ ಅಂತಿಮವಾಗಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. 16ನೇ ಓವರ್ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್ ಕಾರ್ತಿಕ್ಗೆ ಕ್ಯಾಚಿತ್ತು ನವಾಜ್ ಔಟಾದರು.
ಶಾದಬ್ ವಿಕೆಟ್ ಬಳಿಕ ಬಂದಿದ್ದ ಹೈದರ್ ಕೂಡ ಕೇವಲ 2 ರನ್ಗಳಿಗೆ ಸುಸ್ತಾಗಿದ್ದಾರೆ. ಹೈದರ್ ಕೂಡ ಸಾದಬ್ ರಿತಿಯಲ್ಲಿ ಬಿಗ್ ಶಾಟ್ ಆಡುವ ಯತ್ನ ಮಾಡಿ ಸೂರ್ಯಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.
ಇಫ್ತಿಕರ್ ವಿಕೆಟ್ ಬಳಿಕ ಬಂದ ಶಾದಬ್ ಖಾನ್ 14ನೇ ಓವರ್ ಎಸೆದ ಹಾರ್ದಿಕ್ ಅವರ 2ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದರು. ಆದರೆ ಚೆಂಡು ಸೀದಾ ಲಾಂಗ್ ಆನ್ನಲ್ಲಿ ನಿಂತಿದ್ದ ಸೂರ್ಯ ಕೈಸೇರಿತು.
ಅರ್ಧಶತಕ ಸಿಡಿಸಿದ ಇಫ್ತಿಕರ್ ಕೊನೆಗೂ ಶಮಿ ಬಲೆಗೆ ಬಿದ್ದಿದ್ದಾರೆ. ಶಮಿ ಎಸೆದ 13ನೇ ಓವರ್ನಲ್ಲಿ 2ನೇ ಎಸೆತದಲ್ಲಿ ಇಫ್ತಿಕರ್ ಎಲ್ಬಿ ಬಲೆಗೆ ಬಿದ್ದರು.
12ನೇ ಓವರ್ ಎಸೆದ ಅಕ್ಷರ್ ಪಟೇಲ್ಗೆ ಇಫ್ತಿಕರ್ ಬರೋಬ್ಬರಿ 3 ಸಿಕ್ಸರ್ ಬಾರಿಸಿದ್ದಾರೆ. ಎರಡು ಸಿಕ್ಸರ್ ಲಾಂಗ್ ಆನ್ ಹಾಗೂ ಲಾಂಗ್ ಆಫ್ನಲ್ಲಿ ಬಂದರೆ, ಮತ್ತೊಂದು ಸಿಕ್ಸರ್ ಡೀಪ್ ಮಿಡ್ ವಿಕೆಟ್ ಕಡೆ ಬಂತು.
11ನೇ ಓವರ್ನ 5ನೇ ಎಸೆತದಲ್ಲಿ ಅಂತಿಮವಾಗಿ ಪಾಕ್ ತಂಡದ ಮೊದಲ ಸಿಕ್ಸರ್ ಬಂದಿದೆ. ಅಶ್ವಿನ್ ಎಸೆತವನ್ನು ಮಿಡ್ ಆನ್ ಮೇಲೆ ಆಡಿ ಇಫ್ತಿಕರ್ ಭರ್ಜರಿ ಸಿಕ್ಸರ್ ಬಾರಿಸಿದ್ದಾರೆ.
10ನೇ ಓವರ್ ಅನ್ನು ಹಾರ್ದಿಕ್ ಎಸೆದರು. ಈ ಓವರ್ನಲ್ಲಿ ಇಫ್ತಿಕರ್ ಥಡ್ರ್ ಮ್ಯಾನ್ ಕಡೆ ಬೌಂಡರಿ ಬಾರಿಸಿದರು. ಆ ಬಳಿಕ ತಂಡ ಸಿಂಗಲ್ ಮೊರೆ ಹೋಯಿತು. 10 ಓವರ್ಗಳ ಆಟ ಅಂತ್ಯಗೊಂಡಿದ್ದು, ಇದರಲ್ಲಿ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ. ಇಫ್ತಿಕರ್ 21 ರನ್ ಗಳಿಸಿದ್ದರೆ, ಮಸೂದ್ 29 ರನ್ ಗಳಿಸಿದ್ದಾರೆ.
8 ಓವರ್ಗಳ ಬಳಿಕ ಈಗ ನಾಯಕ ರೋಹಿತ್ ಸ್ಪಿನ್ ದಾಳಿಯನ್ನು ಕಣಕ್ಕಿಳಿಸಿದ್ದಾರೆ. 9ನೇ ಓವರ್ನಲ್ಲಿ ಅಶ್ವಿನ್ ದಾಳಿಗಿಳಿದಿದ್ದಾರೆ.
ಶಾನ್ ಮಸೂದ್ಗೆ ಈ ಪಂದ್ಯದಲ್ಲಿ ಎರಡು ಜೀವದಾನ ಸಿಕ್ಕಂತಾಗಿದೆ. ಮೊದಲು ಕೊಹ್ಲಿ ರನ್ ಔಟ್ ಮಿಸ್ ಮಾಡಿದರೆ, 8ನೇ ಓವರ್ನಲ್ಲಿ ರವಿ ಅಶ್ವಿನ್ ಕ್ಯಾಚ್ ಹಿಡಿಯುವಲ್ಲಿ ಯಡವಟ್ಟು ಮಾಡಿದರು. ಹೀಗಾಗಿ ಮಸೂದ್ಗೆ 2 ಜೀವದಾನ ಸಿಕ್ಕಂತ್ತಾಗಿದೆ.
7ನೇ ಓವರ್ ಎಸೆದ ಹಾರ್ದಿಕ್ ಅವರ ಕೊನೆಯ ಎಸೆತವನ್ನು ಮಸೂದ್ ಬೌಂಡರಿಗಟ್ಟಿದ್ದಾರೆ. ಪಾಂಡ್ಯರ ಈ ಬೌನ್ಸರ್ ಎಸೆತವನ್ನು ಮಸೂದ್, ಥರ್ಡ್ ಮ್ಯಾನ್ ಕಡೆ ಆಡಿ ಬೌಂಡರಿ ಗಳಿಸಿದರು.
ಪವರ್ ಪ್ಲೇ ಮುಗಿದಿದ್ದು, ಈ 6 ಓವರ್ಗಳಲ್ಲಿ ಪಾಕ್ ತಂಡ ಪ್ರಮುಖ 2 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಿಜ್ವಾನ್ ಹಾಗೂ ಬಾಬರ್ ಅರ್ಷದೀಪ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಹೀಗಾಗಿ ಪಾಕ್ ತಂಡ ಒತ್ತಡಕ್ಕೆ ಸಿಲುಕಿದೆ.
ರಿಜ್ವಾನ್ ವಿಕೆಟ್ ಬಳಿಕ ಬಂದ ಇಫ್ತಿಕರ್, ಭುವಿ ಓವರ್ನ 5ನೇ ಎಸೆತದಲ್ಲಿ ಮಿಡ್ ವಿಕೆಟ್ ಕಡೆ ಅದ್ಭುತ ಶಾಟ್ ಆಡಿ ಬೌಂಡರಿ ಬಾರಿಸಿದರು.
5ನೇ ಓವರ್ ಅಂತ್ಯಕ್ಕೆ ಪಾಕ್- 24/2
4ನೇ ಓವರ್ ಎಸೆದ ಅರ್ಷದೀಪ್ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ವಿಕೆಟ್ ತಂದುಕೊಟ್ಟಿದ್ದಾರೆ. ತನ್ನ ಓವರ್ನ ಕೊನೆಯ ಎಸೆದಲ್ಲಿ ರಿಜ್ವಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕ್ ಪಡೆಗೆ 2ನೇ ಶಾಕ್ ನೀಡಿದ್ದಾರೆ. ಅರ್ಷದೀಪ್ ಎಸೆತವನ್ನು ರಿಜ್ವಾನ್ ಫೈನ್ ಲೆಗ್ ಕಡೆ ಆಡಿದರು. ಆದರೆ ಅಲ್ಲೆ ನಿಂತಿದ್ದ ಭುವಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ರಿಜ್ವಾನ್ಗೆ ಪೆವಿಲಿಯನ್ ದಾರಿ ತೋರಿದರು.
ಎರಡನೇ ಓವರ್ನ ಕೊನೆಯ ಎಸೆತದಲ್ಲಿ ರಿಜ್ವಾನ್, ಫೈನ್ ಲೆಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಮೊದಲ ಫೋರ್ ಗಳಿಸಿದರು.
ಎರಡನೇ ಓವರ್ ಎಸೆದ ಅರ್ಷದೀಪ್ ತನ್ನ ಮೊದಲ ಎಸೆತದಲ್ಲೇ ಟೀಂ ಇಂಡಿಯಾಗೆ ಯಶಸ್ಸು ತಂದಿದ್ದಾರೆ. ಮೊದಲ ಎಸೆತ ಎದುರಿಸಿದ ನಾಯಕ ಬಾಬರ್ ಎಲ್ಬಿಡ್ಬ್ಲ್ಯೂ ಬಲೆಗೆ ಬಿದ್ದಿದ್ದಾರೆ. ರಿವ್ಯೂವ್ ತೆಗೆದುಕೊಂಡರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಭುವಿ ಎಸೆದ ಮೊದಲ ಓವರ್ನಲ್ಲಿ ಪಾಕ್ ಬ್ಯಾಟರ್ ರಿಜ್ವಾನ್ ಯಾವುದೇ ರನ್ ಗಳಿಸಲಿಲ್ಲ. ಆದರೆ ವೈಡ್ ಮೂಲಕ ಒಂದು ರನ್ ಬಂತು.
ಮೊದಲ ಓವರ್ನ ಎರಡನೇ ಎಸೆತದಲ್ಲೇ ರಿಜ್ವಾನ್ ಇಂಜುರಿಗೆ ತುತ್ತಾಗಿದ್ದಾರೆ. ಭುವಿ ಎಸೆದ ಚೆಂಡು, ರಿಜ್ವಾನ್ ಹೆಬ್ಬೆರಳಿಗೆ ತಾಗಿತು. ರಿಜ್ವಾನ್ ಕೆಲ ಸಮಯ ನೋವಿನಿಂದ ನರಳಿದರು. ಆ ಬಳಿಕ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಪಾಕ್ ತಂಡದ ಬ್ಯಾಟಿಂಗ್ ಆರಂಭವಾಗಿದ್ದು, ಪಾಕ್ ಪರ್ ರಿಜ್ವಾನ್ ಹಾಗೂ ಬಾಬರ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಭಾರತ ಪರ ಭುವಿ ಬೌಲಿಂಗ್ ಆರಂಭಿಸಿದ್ದಾರೆ.
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ, ಇಫ್ತಿಖರ್ ಅಹ್ಮದ್, ಅಸಿಫ್ ಅಲಿ, ಶಾಹೀನ್ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್.
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ಗೆ ಕೆಲವೇ ಕ್ಷಣಗಳು ಬಾಕಿ ಇವೆ. ಮೆಲ್ಬೋರ್ನ್ನ ಕ್ರೀಡಾಂಗಣವು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಹೈವೋಲ್ಟೇಜ್ ಸ್ಪರ್ಧೆಯ ರೋಚಕತೆ ಶುರುವಾಗಲಿದೆ.
ಮೆಲ್ಬೋರ್ನ್ ತಲುಪಿರುವ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ಹವಾಮಾನದ ಪರಿಣಾಮ ಕಡಿಮೆಯಾಗಿದೆ. ಮಳೆಯ ಭೀತಿ ದೂರವಾಗುವಂತಿದ್ದು, ಮೆಲ್ಬೋರ್ನ್ನಲ್ಲಿ ಮಳೆಯ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ.
Published On - 12:05 pm, Sun, 23 October 22