IND vs SA: ಏಕದಿನ ಸರಣಿಯಲ್ಲಿ 11 ದಾಖಲೆಗಳ ಸರದಾರನಾಗಲು ಹಿಟ್​ಮ್ಯಾನ್ ರೆಡಿ

Rohit Sharma: ನವೆಂಬರ್ 30 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ವಿಶ್ವದ ನಂ. 1 ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿಯಲಿರುವ ರೋಹಿತ್, 11ಕ್ಕೂ ಹೆಚ್ಚು ಕ್ರಿಕೆಟ್ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ. ಇದು ಸಿಕ್ಸರ್‌ಗಳು, ಒಟ್ಟು ರನ್‌ಗಳು, ಶತಕಗಳು ಮತ್ತು ಇನ್ನಿತರ ಮಹತ್ವದ ದಾಖಲೆಗಳನ್ನು ಒಳಗೊಂಡಿದೆ.

IND vs SA: ಏಕದಿನ ಸರಣಿಯಲ್ಲಿ 11 ದಾಖಲೆಗಳ ಸರದಾರನಾಗಲು ಹಿಟ್​ಮ್ಯಾನ್ ರೆಡಿ
Rohit Sharma

Updated on: Nov 29, 2025 | 7:53 PM

ವಿಶ್ವದ ನಂ. 1 ಏಕದಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ನವೆಂಬರ್ 30 ರಂದು ಆರಂಭವಾಗಲಿದ್ದು, ರೋಹಿತ್ ಮತ್ತೊಮ್ಮೆ ಆರಂಭಿಕನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ರೋಹಿತ್ ಇದೀಗ ರಾಂಚಿಯಲ್ಲಿ ಅದೇ ಪ್ರದರ್ಶನವನ್ನು ನೀಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಇದರೊಂದಿಗೆ ಈ ಏಕದಿನ ಸರಣಿಯು ರೋಹಿತ್ ಶರ್ಮಾಗೆ ವಿಶೇಷವಾದುದಾಗಿದೆ. ಏಕೆಂದರೆ ಅವರು ಈ ಮೂರು ಏಕದಿನ ಪಂದ್ಯಗಳಲ್ಲಿ ಐದು ದಾಖಲೆಗಳನ್ನು ಮುರಿಯವುದರ ಜೊತೆಗೆ 11 ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳುವ ಹೊಸ್ತಿಲಿನಲಿದ್ದಾರೆ.

  1. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲು ರೋಹಿತ್‌ಗೆ ಇನ್ನೂ ಮೂರು ಸಿಕ್ಸರ್‌ಗಳ ಅಗತ್ಯವಿದೆ. ರೋಹಿತ್ ಶರ್ಮಾ ಇದುವರೆಗೆ ಏಕದಿನ ಪಂದ್ಯಗಳಲ್ಲಿ 344 ಸಿಕ್ಸರ್‌ಗಳನ್ನು ಬಾರಿಸಿದ್ದು, ಶಾಹಿದ್ ಅಫ್ರಿದಿ ಅವರ 351 ಸಿಕ್ಸರ್‌ಗಳ ದಾಖಲೆಗಿಂತ ಕೇವಲ ಏಳು ಸಿಕ್ಸರ್‌ಗಳ ಹಿಂದಿದ್ದಾರೆ.
  2. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ನಿರ್ಮಿಸಲು ರೋಹಿತ್ ಶರ್ಮಾಗೆ ಇನ್ನೂ ಏಳು ಸಿಕ್ಸರ್‌ಗಳು ಬೇಕಾಗುತ್ತವೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಈಗಾಗಲೇ ಆರು ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ದಾಖಲೆಗೆ ಹತ್ತಿರವಾಗಲು ಇನ್ನೂ ಏಳು ಸಿಕ್ಸರ್‌ಗಳು ಬೇಕಾಗಿವೆ.
  3. 20,000 ಅಂತರರಾಷ್ಟ್ರೀಯ ರನ್‌ಗಳನ್ನು ತಲುಪಲು ರೋಹಿತ್‌ಗೆ ಇನ್ನೂ 98 ರನ್‌ಗಳ ಅಗತ್ಯವಿದೆ. ಪ್ರಸ್ತುತ ಅವರು 19,902 ರನ್‌ಗಳನ್ನು ಪೂರೈಸಿದ್ದಾರೆ.
  4. ಆರಂಭಿಕನಾಗಿ 16000 ರನ್ ಪೂರ್ಣಗೊಳಿಸಲು ರೋಹಿತ್‌ಗೆ 213 ರನ್‌ಗಳ ಅವಶ್ಯಕತೆಯಿದೆ. ರೋಹಿತ್ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 15787 ರನ್‌ಗಳನ್ನು ಬಾರಿಸಿದ್ದಾರೆ.
  5. ಭಾರತೀಯ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಲು ರೋಹಿತ್ ಶರ್ಮಾಗೆ ಇನ್ನೂ ಒಂದು ಶತಕದ ಅಗತ್ಯವಿದೆ. ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಆರಂಭಿಕನಾಗಿ 32 ಶತಕಗಳನ್ನು ಬಾರಿಸಿದ್ದು, ಸಲ್ಮಾನ್ ಬಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
  6. ರೋಹಿತ್ ಶರ್ಮಾ 336 ಸಿಕ್ಸರ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರನಾಗಲು ಇನ್ನೂ ಎಂಟು ಸಿಕ್ಸರ್‌ಗಳ ಅಗತ್ಯವಿದೆ. 338 ಸಿಕ್ಸರ್​ಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಕ್ರಿಸ್ ಗೇಲ್ ದಾಖಲೆ ಮುರಿಯಲು ರೋಹಿತ್​ಗೆ ಇನ್ನು 3 ಸಿಕ್ಸರ್‌ಗಳು ಬೇಕಾಗಿವೆ.
  7. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಆರಂಭಿಕ ಆಟಗಾರನೊಬ್ಬ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ರೋಹಿತ್ ಶರ್ಮಾ 115 ರನ್ ಬಾರಿಸಬೇಕಾಗಿದೆ.
  8. ದಕ್ಷಿಣ ಆಫ್ರಿಕಾ ವಿರುದ್ಧ ಈಗಾಗಲೇ 1,973 ರನ್ ಗಳಿಸಿರುವ ರೋಹಿತ್ ಶರ್ಮಾಗೆ 2,000 ರನ್ ಪೂರೈಸಲು 27 ರನ್ ಅಗತ್ಯವಿದೆ.
  9. ಭಾರತದಲ್ಲಿ 5,000 ಏಕದಿನ ರನ್ ಪೂರ್ಣಗೊಳಿಸಲು ರೋಹಿತ್ ಶರ್ಮಾ ಅವರಿಗೆ ಇನ್ನೂ 133 ರನ್‌ಗಳ ಅಗತ್ಯವಿದೆ. ಪ್ರಸ್ತುತ ರೋಹಿತ್ ಭಾರತದಲ್ಲಿ 4,867 ರನ್ ಗಳಿಸಿದ್ದಾರೆ, ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  10. ಗೆಲುವಿನ ಪಂದ್ಯಗಳಲ್ಲಿ 12,000 ರನ್‌ಗಳನ್ನು ಪೂರೈಸಲು ರೋಹಿತ್‌ಗೆ ಇನ್ನೂ 30 ರನ್‌ಗಳ ಅಗತ್ಯವಿದೆ, ಈ ಸಾಧನೆ ಮಾಡಿದ ಮೊದಲ ಏಷ್ಯಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  11. ರೋಹಿತ್ ಶರ್ಮಾ ಸೆನಾ ದೇಶಗಳ ( ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ವಿರುದ್ಧ 5000 ಏಕದಿನ ರನ್ ಪೂರೈಸಲು ಕೇವಲ 36 ರನ್‌ಗಳ ಅಗತ್ಯವಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ