India vs South Africa: ಸೌತ್ ಆಫ್ರಿಕಾಗೆ ಜಯ: ಸರಣಿ ಗೆದ್ದ ಟೀಮ್ ಇಂಡಿಯಾ

TV9 Web
| Updated By: ಝಾಹಿರ್ ಯೂಸುಫ್

Updated on:Oct 04, 2022 | 10:53 PM

India vs South Africa 3rd T20: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ರಿಲೀ ರೊಸೊ ಅವರ ಭರ್ಜರಿ ಶತಕದ ನೆರವಿನಿಂದ 3 ವಿಕೆಟ್​ ನಷ್ಟಕ್ಕೆ 227 ರನ್​ ಕಲೆಹಾಕಿತು.

India vs South Africa: ಸೌತ್ ಆಫ್ರಿಕಾಗೆ ಜಯ: ಸರಣಿ ಗೆದ್ದ ಟೀಮ್ ಇಂಡಿಯಾ
India vs South Africa

India vs South Africa 3rd T20: ಇಂದೋರ್​ನಲ್ಲಿ ನಡೆದ  ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 49 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ರಿಲೀ ರೊಸೊ 7 ಸಿಕ್ಸ್​ ಒಳಗೊಂಡಂತೆ 48 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್​ ಕಲೆಹಾಕಿತು.

228 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್​ ಬಾರಿಸಿ ಅಬ್ಬರಿಸಿದರು. ಆದರೆ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಸೌತ್ ಆಫ್ರಿಕಾ ತಂಡವು ಅಂತಿಮವಾಗಿ 18.3 ಓವರ್​ಗಳಲ್ಲಿ ಟೀಮ್ ಇಂಡಿಯಾವನ್ನು 170 ರನ್​ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಗೆಲುವಿನೊಂದಿಗೆ ಸರಣಿಯನ್ನು ಅಂತ್ಯಗೊಳಿಸಿತು.

ಈ ಸೋಲಿನ ಹೊರತಾಗಿಯೂ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ನಾಯಕ ರೋಹಿತ್ ಶರ್ಮಾ ಸರಣಿ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

ಭಾರತ ಪೂರ್ಣ ತಂಡ: ರೋಹಿತ್ ಶರ್ಮಾ (ನಾಯಕ) , ರಿಷಬ್ ಪಂತ್ ( ವಿಕೆಟ್ ಕೀಪರ್ ) , ಸೂರ್ಯಕುಮಾರ್ ಯಾದವ್ , ಶ್ರೇಯಸ್ ಅಯ್ಯರ್ , ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಹರ್ಷಲ್ ಪಟೇಲ್ , ದೀಪಕ್ ಚಾಹರ್ , ಅರ್ಷದೀಪ್ ಸಿಂಗ್ , ಉಮೇಶ್ ಯಾದವ್ , ಮೊಹಮ್ಮದ್ ಸಿರಾಜ್, ಶಹಬಾಝ್ ಅಹ್ಮದ್, ಯುಜ್ವೇಂದ್ರ ಚಹಾಲ್.

ದಕ್ಷಿಣ ಆಫ್ರಿಕಾ ಪೂರ್ಣ ತಂಡ: ತೆಂಬಾ ಬವುಮಾ (ನಾಯಕ) , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರಿಲೀ ರೊಸ್ಸೌ , ಐಡೆನ್ ಮಾರ್ಕ್ರಾಮ್ , ಡೇವಿಡ್ ಮಿಲ್ಲರ್ , ಟ್ರಿಸ್ಟಾನ್ ಸ್ಟಬ್ಸ್ , ವೇಯ್ನ್ ಪಾರ್ನೆಲ್ , ಕೇಶವ್ ಮಹಾರಾಜ್ , ಕಗಿಸೊ ರಬಾಡಾ , ಅನ್ರಿಕ್ ನೋಕಿಯಾ , ಲುಂಗಿ ಎನ್​ಗಿಡಿ , ತಬ್ರೇಝ್ ಶಂಸಿ, ರೀಜಾ ಹೆಂಡ್ರಿಕ್ಸ್, ಡ್ವೇನ್ ಪ್ರಿಟೊರಿಯಸ್, ಹೆನ್ರಿಚ್ ಕ್ಲಾಸೆನ್.

LIVE NEWS & UPDATES

The liveblog has ended.
  • 04 Oct 2022 10:41 PM (IST)

    2-1 ಅಂತರದಿಂದ ಸರಣಿ ಗೆದ್ದ ಭಾರತ

    3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ.

  • 04 Oct 2022 10:38 PM (IST)

    ಟೀಮ್ ಇಂಡಿಯಾ ಆಲೌಟ್

    RSA 227/3 (20)

    IND 178 (18.3)

     

    ಸೌತ್ ಆಫ್ರಿಕಾಗೆ 49 ರನ್​ಗಳ ಜಯ
  • 04 Oct 2022 10:35 PM (IST)

    ಕೊನೆಯ 2 ಓವರ್

    12 ಎಸೆತಗಳಲ್ಲಿ 53 ರನ್​ಗಳ ಅವಶ್ಯಕತೆ

    IND 175/9 (18)

      

    ಕ್ರೀಸ್​ನಲ್ಲಿ ಸಿರಾಜ್-ಉಮೇಶ್ ಯಾದವ್ ಬ್ಯಾಟಿಂಗ್

  • 04 Oct 2022 10:34 PM (IST)

    ಫೋರ್​ರ್​ರ್​

    ರಬಾಡ ಎಸೆತದಲ್ಲಿ ಪಾಯಿಂಟ್​ ಮೂಲಕ ಫೋರ್ ಬಾರಿಸಿದ ಮೊಹಮ್ಮದ್ ಸಿರಾಜ್

    IND 175/9 (17.4)

      

  • 04 Oct 2022 10:31 PM (IST)

    17 ಓವರ್ ಮುಕ್ತಾಯ

    IND 170/9 (17)

      

    ಕ್ರೀಸ್​ನಲ್ಲಿ ಸಿರಾಜ್-ಉಮೇಶ್ ಯಾದವ್ ಬ್ಯಾಟಿಂಗ್

  • 04 Oct 2022 10:30 PM (IST)

    ಚಹರ್ ಔಟ್

    ಡ್ವೇನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ..ಕ್ಯಾಚ್…ದೀಪಕ್ ಚಹರ್ (31) ಔಟ್

    IND 168/9 (16.3)

      

  • 04 Oct 2022 10:27 PM (IST)

    ಕೊನೆಯ 4 ಓವರ್

    24 ಎಸೆತಗಳಲ್ಲಿ 66 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಉಮೇಶ್ ಯಾದವ್ – ದೀಪಕ್ ಚಹರ್ ಬ್ಯಾಟಿಂಗ್

  • 04 Oct 2022 10:20 PM (IST)

    ವಾಟ್ ಎ ಶಾಟ್

    ಎನ್​ಗಿಡಿ ಫ್ರೀ ಹಿಟ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದೀಪಕ್ ಚಹರ್

    IND 150/8 (15.1)

      

  • 04 Oct 2022 10:19 PM (IST)

    ಭರ್ಜರಿ ಸಿಕ್ಸ್

    ಕೇಶವ್ ಮಹರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದೀಪಕ್ ಚಹರ್

    IND 142/8 (15)

      

  • 04 Oct 2022 10:14 PM (IST)

    ವೆಲ್ಕಂ ಬೌಂಡರಿ

    ರಬಾಡ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ದೀಪಕ್ ಚಹರ್

    IND 129/8 (13.5)

      

  • 04 Oct 2022 10:09 PM (IST)

    8ನೇ ವಿಕೆಟ್ ಪತನ

    ಕೇಶವ್ ಮಹರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಅಶ್ವಿನ್ (2)

    IND 120/8 (12.2)

      

  • 04 Oct 2022 10:06 PM (IST)

    7ನೇ ವಿಕೆಟ್ ಪತನ

    ಪಾರ್ನೆಲ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಅಕ್ಷರ್ ಪಟೇಲ್ (9)

  • 04 Oct 2022 10:02 PM (IST)

    ಭರ್ಜರಿ ಬೌಂಡರಿ

    ಪಾರ್ನೆಲ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಅಕ್ಷರ್ ಪಟೇಲ್

    IND 114/6 (11.3)

      

  • 04 Oct 2022 09:57 PM (IST)

    6ನೇ ವಿಕೆಟ್ ಪತನ

    ಎನ್​ಗಿಡಿ ಎಸೆತದಲ್ಲಿ ಭರ್ಜರಿ ಸಿಕ್ಸ್​ಗೆ ಯತ್ನ…ಬೌಂಡರಿ ಲೈನ್​ನಲ್ಲಿ ಕ್ಯಾಚ್​ ಆಗಿ ಹೊರನಡೆದ ಹರ್ಷಲ್ ಪಟೇಲ್ (17)

    IND 108/6 (10.5)

      

  • 04 Oct 2022 09:55 PM (IST)

    ಹರ್ಷಲ್-ಸಿಕ್ಸ್

    ಎನ್​ಗಿಡಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹರ್ಷಲ್ ಪಟೇಲ್

    IND 107/5 (10.4)

      

  • 04 Oct 2022 09:53 PM (IST)

    ವೆಲ್ಕಂ ಬೌಂಡರಿ

    ಎನ್​ಗಿಡಿ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಹರ್ಷಲ್ ಪಟೇಲ್

    IND 99/5 (10.1)

      

  • 04 Oct 2022 09:52 PM (IST)

    10 ಓವರ್ ಮುಕ್ತಾಯ

    IND 95/5 (10)

      

    ಕ್ರೀಸ್​ನಲ್ಲಿ ಅಕ್ಷರ್-ಹರ್ಷಲ್ ಬ್ಯಾಟಿಂಗ್

  • 04 Oct 2022 09:41 PM (IST)

    5ನೇ ವಿಕೆಟ್ ಪತನ

    ಡ್ವೇನ್ ಎಸೆತದಲ್ಲಿ ಭರ್ಜರಿ ಹಿಟ್​ಗೆ ಯತ್ನ…ಬೌಂಡರಿ ಲೈನ್​ನಿಂದ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದ ಸ್ಟಬ್ಸ್..ಸೂರ್ಯಕುಮಾರ್ ಯಾದವ್ (8) ಔಟ್

    IND 86/5 (8)

      

  • 04 Oct 2022 09:39 PM (IST)

    ಸಿಕ್ಸರ್ ಸೂರ್ಯ

    ಡ್ವೇನ್ ಎಸೆತದಲ್ಲಿ ಫೈನ್ ಲೆಗ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್

    IND 86/4 (7.4)

      

  • 04 Oct 2022 09:35 PM (IST)

    4ನೇ ವಿಕೆಟ್ ಪತನ

    ಕೇಶವ್ ಮಹರಾಜ್ ಎಸೆತದಲ್ಲಿ ಸ್ವಿಚ್ ಹಿಟ್​ಗೆ ಯತ್ನ…ದಿನೇಶ್ ಕಾರ್ತಿಕ್ (46) ಕ್ಲೀನ್ ಬೌಲ್ಡ್

  • 04 Oct 2022 09:33 PM (IST)

    ಡಿಕೆ ಆರ್ಭಟ

    ಕೇಶವ್ ಮಹರಾಜ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಡಿಕೆ

    IND 78/3 (6.4)

      

  • 04 Oct 2022 09:30 PM (IST)

    ಪವರ್ ಪ್ಲೇ ಮುಕ್ತಾಯ

    IND 64/3 (6)

      

    ಕ್ರೀಸ್​ನಲ್ಲಿ ಡಿಕೆ-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

  • 04 Oct 2022 09:29 PM (IST)

    6,4,6

    ಪಾರ್ನೆಲ್​ ಓವರ್​ನಲ್ಲಿ 6, 4, 6 ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್

    IND 61/3 (5.4)

      

  • 04 Oct 2022 09:27 PM (IST)

    ಭರ್ಜರಿ ಸಿಕ್ಸ್

    ಪಾರ್ನೆಲ್ ಎಸೆತದಲ್ಲಿ ಫೈನ್​ ಲೆಗ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕೆ

    IND 51/3 (5.2)

      

  • 04 Oct 2022 09:25 PM (IST)

    ಪಂತ್ ಔಟ್

    ಎನ್​ಗಿಡಿ ಎಸೆತದಲ್ಲಿ ರಿಷಭ್ ಪಂತ್ ಆಫ್​ಸೈಡ್​ನತ್ತ ಶಾಟ್…ಸ್ಟಬ್ಸ್ ಅತ್ಯುತ್ತಮ ಕ್ಯಾಚ್…ಪಂತ್ (27) ಔಟ್

    IND 45/3 (5)

      

  • 04 Oct 2022 09:24 PM (IST)

    ಪಂತ್ ಆರ್ಭಟ

    ಲುಂಗಿ ಎನ್​ಗಿಡಿ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಪಂತ್

    IND 45/2 (4.5)

      

  • 04 Oct 2022 09:22 PM (IST)

    ಪಂತ್ ಪವರ್

    ಎನ್​ಗಿಡಿ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    IND 35/2 (4.3)

      

  • 04 Oct 2022 09:21 PM (IST)

    ಪಂಟರ್ ಪಂತ್

    ಎನ್​ಗಿಡಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್

    IND 29/2 (4.2)

      

  • 04 Oct 2022 09:14 PM (IST)

    ಪವರ್ ಪಂತ್

    ರಬಾಡ ಎಸೆತದಲ್ಲಿ ಸ್ಕ್ವೇರ್ ಮೂಲಕ ಭರ್ಜರಿ ಬೌಂಡರಿ ಬಾರಿಸಿದ ರಿಷಭ್ ಪಂತ್

    IND 18/2 (3)

      

  • 04 Oct 2022 09:10 PM (IST)

    ಡಿಕೆ ಎಂಟ್ರಿ

    ಪಾರ್ನೆಲ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಬೌಂಡರಿ ಬಾರಿಸಿ ಖಾತೆ ತೆರೆದ ಡಿಕೆ

    IND 8/2 (2)

      

      

  • 04 Oct 2022 09:08 PM (IST)

    2ನೇ ವಿಕೆಟ್ ಪತನ

    ವೇಯ್ನ್ ಪಾರ್ನೆಲ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಶ್ರೇಯಸ್ ಅಯ್ಯರ್ (1)

    IND 4/2 (1.4)

      

  • 04 Oct 2022 09:03 PM (IST)

    ಮೊದಲ ಓವರ್ ಮುಕ್ತಾಯ

    IND 2/1 (1)

      

    ಕ್ರೀಸ್​ನಲ್ಲಿ ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 04 Oct 2022 08:59 PM (IST)

    ಮೊದಲ ವಿಕೆಟ್ ಪತನ

    ಕಗಿಸೊ ರಬಾಡ ಎಸೆತದಲ್ಲಿ ರೋಹಿತ್ ಶರ್ಮಾ ಬ್ಯಾಟ್​ ಎಡ್ಜ್​ ಆಗಿ ಚೆಂಡು ವಿಕೆಟ್​ಗೆ..ಬೌಲ್ಡ್​

    ಶೂನ್ಯಕ್ಕೆ ಔಟಾದ ಹಿಟ್​ಮ್ಯಾನ್

    IND 0/1 (0.2)

      

  • 04 Oct 2022 08:46 PM (IST)

    ಸೌತ್ ಆಫ್ರಿಕಾ ಇನಿಂಗ್ಸ್ ಅಂತ್ಯ

    RSA 227/3 (20)

     

  • 04 Oct 2022 08:46 PM (IST)

    ಹ್ಯಾಟ್ರಿಕ್ ಸಿಕ್ಸ್

    ಕ್ಯಾಚ್ ಹಿಡಿದು ಬೌಂಡರಿ ಲೈನ್ ಮೆಟ್ಟಿದ ಸಿರಾಜ್…ಚಹರ್ ಎಸೆತದಲ್ಲಿ ಮಿಲ್ಲರ್ ಬ್ಯಾಟ್​ನಿಂದ ಮತ್ತೊಂದು ಸಿಕ್ಸ್​

    RSA 226/3 (19.5)

     

  • 04 Oct 2022 08:44 PM (IST)

    ರಾಕೆಟ್ ಸಿಕ್ಸ್

    ಚಹರ್​ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಮಿಲ್ಲರ್

    RSA 220/3 (19.4)

     

  • 04 Oct 2022 08:43 PM (IST)

    ಕಿಲ್ಲರ್ ಮಿಲ್ಲರ್

    ಚಹರ್ ಹೈ ನೋಬಾಲ್​…ಭರ್ಜರಿ ಸಿಕ್ಸ್​ ಸಿಡಿಸಿದ ಮಿಲ್ಲರ್

    RSA 214/3 (19.3)

     

  • 04 Oct 2022 08:41 PM (IST)

    3ನೇ ವಿಕೆಟ್ ಪತನ

    ಚಹರ್ ಎಸೆತದಲ್ಲಿ ಸ್ಕೂಪ್​ ಶಾಟ್​ಗೆ ಯತ್ನ…ಅಶ್ವಿನ್​ಗೆ ಕೈಗೆ ಚೆಂಡು…ಸ್ಟಬ್ಸ್​ (23) ಔಟ್

    RSA 207/3 (19.2)

     

     

  • 04 Oct 2022 08:40 PM (IST)

    ಭರ್ಜರಿ ಶತಕ

    48 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿದ ರಿಲೀ ರೊಸೊ

  • 04 Oct 2022 08:38 PM (IST)

    ಕೊನೆಯ ಓವರ್ ಬಾಕಿ

    RSA 203/2 (19)

     

    ಕ್ರೀಸ್​ನಲ್ಲಿ ರೊಸೊ-ಸ್ಟಬ್ಸ್ ಬ್ಯಾಟಿಂಗ್

  • 04 Oct 2022 08:37 PM (IST)

    RSA 201/2 (18.4)

    ಸೌತ್ ಆಫ್ರಿಕಾ ಪರ ರೊಸೊ-ಸ್ಟಬ್ಸ್ ಭರ್ಜರಿ ಬ್ಯಾಟಿಂಗ್

    RSA 201/2 (18.4)

     

  • 04 Oct 2022 08:34 PM (IST)

    18 ಓವರ್ ಮುಕ್ತಾಯ

    RSA 192/2 (18)

      

    ಕ್ರೀಸ್​ನಲ್ಲಿ ಸ್ಟಬ್ಸ್-ರೊಸೊ ಬ್ಯಾಟಿಂಗ್

  • 04 Oct 2022 08:33 PM (IST)

    ಸ್ಟ್ರೈಟ್ ಹಿಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ರೊಸೊ

    RSA 191/2 (17.5)

      

      

  • 04 Oct 2022 08:32 PM (IST)

    ಸ್ಕೂಪ್​ಪ್​ಪ್​ಪ್​

    ಹರ್ಷಲ್ ಪಟೇಲ್ ಎಸೆತದಲ್ಲಿ ಹಿಂಬದಿಯತ್ತ ಸ್ಕೂಪ್ ಸಿಕ್ಸ್ ಸಿಡಿಸಿದ ರೊಸೊ

    RSA 187/2 (17.4)

      

  • 04 Oct 2022 08:29 PM (IST)

    17 ಓವರ್ ಮುಕ್ತಾಯ

    RSA 177/2 (17)

      

    ಕ್ರೀಸ್​ನಲ್ಲಿ ರೊಸೊ-ಸ್ಟಬ್ಸ್ ಬ್ಯಾಟಿಂಗ್

  • 04 Oct 2022 08:27 PM (IST)

    ನೋಬಾಲ್

    ಸಿರಾಜ್ ಎಸೆದ ನೋಬಾಲ್​ಗೆ ಫ್ರಿಹಿಟ್…ಕೇವಲ 2 ರನ್ ಕಲೆಹಾಕಿದ ರೊಸೊ

    RSA 176/2 (16.5)

      

  • 04 Oct 2022 08:20 PM (IST)

    ಭರ್ಜರಿ ಬೌಂಡರಿ

    ದೀಪಕ್ ಚಹರ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ರೊಸೊ

    RSA 169/2 (16)

      

  • 04 Oct 2022 08:17 PM (IST)

    ರೊಸೊ ಅಬ್ಬರ

    33 ಎಸೆತಗಳಲ್ಲಿ 71 ರನ್ ಬಾರಿಸಿರುವ ರೊಸೊ ಭರ್ಜರಿ ಬ್ಯಾಟಿಂಗ್

    RSA 161/2 (15.2)

      

  • 04 Oct 2022 08:17 PM (IST)

    15 ಓವರ್ ಮುಕ್ತಾಯ

    RSA 161/2 (15.2)

      

    ಕ್ರೀಸ್​ನಲ್ಲಿ ರೊಸೊ- ಸ್ಟಬ್ಸ್ ಬ್ಯಾಟಿಂಗ್

  • 04 Oct 2022 08:03 PM (IST)

    2ನೇ ವಿಕೆಟ್ ಪತನ

    ಶೇಯಸ್ ಅಯ್ಯರ್ ಉತ್ತಮ ಫೀಲ್ಡಿಂಗ್…ಕ್ವಿಂಟನ್ ಡಿಕಾಕ್ (68) ರನೌಟ್

    RSA 120/2 (12.1)

     

  • 04 Oct 2022 08:01 PM (IST)

    ಡಿಕಾಕ್ ಸ್ಪೋಟಕ ಬ್ಯಾಟಿಂಗ್

    ಅರ್ಧಶತಕ ಬಾರಿಸಿದ ಕ್ವಿಂಟನ್ ಡಿಕಾಕ್

    ರಿಲೀ ರೊಸೊ ಉತ್ತಮ ಬ್ಯಾಟಿಂಗ್

    RSA 119/1 (12)

      

  • 04 Oct 2022 07:36 PM (IST)

    ಆಕರ್ಷಕ ಬೌಂಡರಿ

    ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡಿಕಾಕ್

    RSA 67/1 (7.2)

     

  • 04 Oct 2022 07:34 PM (IST)

    7 ಓವರ್ ಮುಕ್ತಾಯ

    RSA 61/1 (7)

     

    ಕ್ರೀಸ್​ನಲ್ಲಿ ರಿಲೀ ರೊಸೊ-ಡಿಕಾಕ್ ಬ್ಯಾಟಿಂಗ್

  • 04 Oct 2022 07:31 PM (IST)

    ವಾಟ್ ಎ ಶಾಟ್

    ಸಿರಾಜ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೊಸೊ

    RSA 55/1 (6.3)

     

  • 04 Oct 2022 07:28 PM (IST)

    ಭರ್ಜರಿ ಸಿಕ್ಸ್

    ಅಶ್ವಿನ್ ಎಸೆತಕ್ಕೆ ಭರ್ಜರಿ ಸಿಕ್ಸ್ ಸಿಡಿಸಿದ ರಿಲೀ ರೊಸೊ

    RSA 48/1 (6)

      

  • 04 Oct 2022 07:25 PM (IST)

    5 ಓವರ್ ಮುಕ್ತಾಯ

    RSA 38/1 (5)

      

    ಕ್ರೀಸ್​ನಲ್ಲಿ ರಿಲೀ ರೊಸೊ – ಡಿಕಾಕ್ ಬ್ಯಾಟಿಂಗ್

  • 04 Oct 2022 07:25 PM (IST)

    ರೊಸೊ ಹಿಟ್

    ಉಮೇಶ್ ಯಾದವ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಬೌಂಡರಿ ಬಾರಿಸಿದ ರಿಲೀ ರೊಸೊ

    RSA 34/1 (4.5)

      

  • 04 Oct 2022 07:23 PM (IST)

    ಮೊದಲ ವಿಕೆಟ್ ಪತನ

    ಉಮೇಶ್ ಯಾದವ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ತೆಂಬಾ ಬವುಮಾ (3)

    RSA 30/1 (4.1)

      

  • 04 Oct 2022 07:19 PM (IST)

    ಫೋರ್​ರ್​ರ್​ರ್​ರ್​

    ಅಶ್ವಿನ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬ್ಯಾಟ್​ನಿಂದ ಹಿಂಬದಿಯತ್ತ ಫೋರ್

    RSA 28/0 (3.4)

      

  • 04 Oct 2022 07:16 PM (IST)

    3 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಬವುಮಾ ಹಾಗೂ ಡಿಕಾಕ್ ಬ್ಯಾಟಿಂಗ್

    RSA 23/0 (3)

      

  • 04 Oct 2022 07:13 PM (IST)

    ಡಿ-ಹಿಟ್

    ದೀಪಕ್ ಚಹರ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಮತ್ತೊಂದು ಸಿಕ್ಸ್ ಸಿಡಿಸಿದ ಡಿಕಾಕ್

    RSA 20/0 (2.2)

      

  • 04 Oct 2022 07:11 PM (IST)

    ಆಕರ್ಷಕ ಬೌಂಡರಿ

    ಸಿರಾಜ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಮತ್ತೊಂದು ಬೌಂಡರಿ ಬಾರಿಸಿದ ಡಿಕಾಕ್…ಫೋರ್​

    RSA 13/0 (1.5)

      

  • 04 Oct 2022 07:09 PM (IST)

    ಭರ್ಜರಿ ಸಿಕ್ಸ್

    ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಡಿಕಾಕ್

    RSA 7/0 (1.2)

      

  • 04 Oct 2022 07:07 PM (IST)

    ಮೊದಲ ಓವರ್ ಮುಕ್ತಾಯ

    RSA 1/0 (1)

      

    ಕ್ರೀಸ್​ನಲ್ಲಿ ಬವುಮಾ-ಡಿಕಾಕ್ ಬ್ಯಾಟಿಂಗ್

  • 04 Oct 2022 07:03 PM (IST)

    ಮೊದಲ ಓವರ್

    ಬೌಲಿಂಗ್ – ದೀಪಕ್ ಚಹರ್

    ಆರಂಭಿಕರು- ಕ್ವಿಂಟನ್ ಡಿಕಾಕ್, ತೆಂಬಾ ಬವುಮಾ

  • 04 Oct 2022 06:46 PM (IST)

    ಕೊಹ್ಲಿ, ರಾಹುಲ್ ಹಾಗೂ ಅರ್ಷದೀಪ್​ಗೆ ವಿಶ್ರಾಂತಿ

  • 04 Oct 2022 06:43 PM (IST)

    ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್

    ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ

  • 04 Oct 2022 06:42 PM (IST)

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

  • 04 Oct 2022 06:35 PM (IST)

    ಟಾಸ್ ಗೆದ್ದ ಭಾರತ-ಬೌಲಿಂಗ್ ಆಯ್ಕೆ

    ಇಂದೋರ್​ನಲ್ಲಿ ನಡೆಯುತ್ತಿರುವ  ಭಾರತ-ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 04,2022 6:32 PM

    Follow us
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ