IND vs SA: ಶತಕದ ಜೊತೆಯಾಟ; ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಹಾನೆ- ಪೂಜಾರ!

| Updated By: ಪೃಥ್ವಿಶಂಕರ

Updated on: Jan 05, 2022 | 5:24 PM

IND vs SA: ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಮೊದಲ 61 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು ಮತ್ತು ಇಬ್ಬರೂ ಟೀಮ್ ಇಂಡಿಯಾದ ಸ್ಕೋರ್ ಅನ್ನು 100 ರ ಗಡಿ ದಾಟಿಸಿದರು.

IND vs SA: ಶತಕದ ಜೊತೆಯಾಟ; ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರಹಾನೆ- ಪೂಜಾರ!
ರಹಾನೆ- ಪೂಜಾರ
Follow us on

ಜೋಹಾನ್ಸ್‌ಬರ್ಗ್ ಟೆಸ್ಟ್ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಗೆ ಮಾಡು ಇಲ್ಲವೇ ಮಡಿ ಟೆಸ್ಟ್ ಆಗಿತ್ತು. ಈ ಟೆಸ್ಟ್ ಅವರಿಗೆ ದೊಡ್ಡ ಪರೀಕ್ಷೆಯಾಗಿತ್ತು ಏಕೆಂದರೆ ಇಬ್ಬರ ಬ್ಯಾಟ್‌ಗಳು ದೀರ್ಘಕಾಲ ಮೌನವಾಗಿದ್ದವು. ಈ ಸರಣಿಯ ಮೊದಲ 3 ಇನ್ನಿಂಗ್ಸ್‌ಗಳಲ್ಲಿಯೂ ಅವರು ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 3 ರನ್ ಮತ್ತು ರಹಾನೆ ಖಾತೆ ತೆರೆಯಲಿಲ್ಲ, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಬ್ಯಾಟ್‌ನಿಂದ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ 58 ರನ್ ಗಳಿಸಿದರು ಮತ್ತು ಚೇತೇಶ್ವರ ಪೂಜಾರ ಅದ್ಭುತ 53 ರನ್ ಗಳಿಸಿದರು.

ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅನೇಕ ಬಾರಿ ಅರ್ಧಶತಕಗಳನ್ನು ಗಳಿಸಿದ್ದಾರೆ, ಆದರೆ ಈ ಬಾರಿ ಈ ಫಿಫ್ಟಿ ಪ್ಲಸ್ ಇನ್ನಿಂಗ್ಸ್‌ಗಳು ಅವರ ವೃತ್ತಿಜೀವನವನ್ನು ಉಳಿಸಿದವು ಎಂದು ಪರಿಗಣಿಸಬಹುದು. ಪೂಜಾರ ಮತ್ತು ರಹಾನೆ ಮೇಲೆ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡವಿತ್ತು. ಟೀಮ್ ಇಂಡಿಯಾ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆದರೆ ಇದರ ಹೊರತಾಗಿಯೂ, ಜೋಹಾನ್ಸ್ಬರ್ಗ್ನಲ್ಲಿ ಇಬ್ಬರೂ ಅದ್ಭುತಗಳನ್ನು ಮಾಡಿದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಮೊದಲ 61 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು ಮತ್ತು ಇಬ್ಬರೂ ಟೀಮ್ ಇಂಡಿಯಾದ ಸ್ಕೋರ್ ಅನ್ನು 100 ರ ಗಡಿ ದಾಟಿಸಿದರು. ಪೂಜಾರ ಕೇವಲ 62 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ರಹಾನೆ ಕೂಡ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾವನ್ನು ಕೇವಲ 34 ಓವರ್‌ಗಳಲ್ಲಿ 150 ರನ್‌ಗಳಿಗೆ ಕೊಂಡೊಯ್ದರು.

ರಹಾನೆ-ಪೂಜಾರ ಶತಕದ ಜೊತೆಯಾಟ
ಚೇತೇಶ್ವರ ಪೂಜಾರ ಮತ್ತು ರಹಾನೆ ಜೋಡಿಯನ್ನು ರಬಾಡ ಮುರಿದರು. ರಬಾಡ 58 ರನ್ ಗಳಿಸಿದ ರಹಾನೆ ಅವರನ್ನು ಔಟ್ ಮಾಡುವ ಮೂಲಕ ಭಾರತ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. ಆದರೆ, ಔಟಾಗುವ ಮೊದಲು ರಹಾನೆ ಮತ್ತು ಪೂಜಾರ ಮೂರನೇ ವಿಕೆಟ್‌ಗೆ 111 ರನ್ ಸೇರಿಸಿದರು. ರಹಾನೆ ಮತ್ತು ಪೂಜಾರ ಅವರ ಶತಕದ ಜೊತೆಯಾಟವು ಟೀಮ್ ಇಂಡಿಯಾಗೆ ಗೆಲುವಿನ ಗ್ಯಾರಂಟಿ ನೀಡಿತು. ಈ ಇಬ್ಬರೂ ಆಟಗಾರರು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಶತಕಗಳ ಜೊತೆಯಾಟವನ್ನು ಮಾಡಿದ್ದಾರೆ ಮತ್ತು ಟೀಂ ಇಂಡಿಯಾ ಪ್ರತಿ ಬಾರಿಯೂ ಗೆದ್ದಿದೆ. ಏಷ್ಯಾದ ಹೊರಗೆ ಈ ಇಬ್ಬರೂ ಆಟಗಾರರು ಎರಡನೇ ಬಾರಿ ಶತಕದ ಜೊತೆಯಾಟವಾಡಿದ್ದಾರೆ. ಇದಕ್ಕೂ ಮುನ್ನ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಇಬ್ಬರೂ ಶತಕದ ಜೊತೆಯಾಟ ನಡೆಸಿ ಟೀಂ ಇಂಡಿಯಾ ಗೆದ್ದಿತ್ತು.

ವಿಸ್ಮಯಕಾರಿ ಸಂಗತಿ ಎಂದರೆ ಲಾರ್ಡ್ಸ್ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ಗಿಂತ 27 ರನ್ ಹಿನ್ನಡೆಯಲ್ಲಿದ್ದು, ರಹಾನೆ-ಪೂಜಾರ ಶತಕದ ಜೊತೆಯಾಟ ನೀಡಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೋಹಾನ್ಸ್‌ಬರ್ಗ್‌ನಲ್ಲಿ ಅದೇ ಸಂಭವಿಸಿದೆ, ಆದ್ದರಿಂದ ಭಾರತ ಈ ಟೆಸ್ಟ್‌ನಲ್ಲಿ ಗೆದ್ದು ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಇತಿಹಾಸವನ್ನು ಸೃಷ್ಟಿಸುವ ಸನಿಹದಲ್ಲಿದೆ.

Published On - 5:23 pm, Wed, 5 January 22