IND vs SL: 2ನೇ ಏಕದಿನದಲ್ಲೂ ಟಾಸ್ ಗೆದ್ದ ಶ್ರೀಲಂಕಾ; ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಹೀಗಿದೆ

IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಇರಾದೆಯಲ್ಲಿವೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ.

IND vs SL: 2ನೇ ಏಕದಿನದಲ್ಲೂ ಟಾಸ್ ಗೆದ್ದ ಶ್ರೀಲಂಕಾ; ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಹೀಗಿದೆ
ಭಾರತ- ಶ್ರೀಲಂಕಾ
Follow us
|

Updated on:Aug 04, 2024 | 2:46 PM

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಇರಾದೆಯಲ್ಲಿವೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಹೀಗಾಗಿ ಇಂದಿನ ಪಂದ್ಯವನ್ನು ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ. ಇನ್ನು ಈ ಪಂದ್ಯದ ಟಾಸ್ ಮುಗಿದಿದ್ದು, ಟಾಸ್ ಗೆದ್ದ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಎಂದಿನಂತೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ

ಶ್ರೀಲಂಕಾ ಈ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಗಾಯದ ಸಮಸ್ಯೆಯಿಂದ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಜೆಫ್ರಿ ವೆಂಡರ್ಸೆ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಕಾಮಿಂದು ಮೆಂಡಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉಭಯ ತಂಡಗಳು

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದಿರ ಸಮರವಿಕ್ರಮ, ಚರಿತ್ ಅಸಲಂಕಾ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲಾಲಗೆ, ಅಕಿಲಾ ಧನಂಜಯ್, ಅಸಿತ್ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ.

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್.

3 ವರ್ಷಗಳಿಂದ ಲಂಕಾ ವಿರುದ್ಧ ಭಾರತ ಸೋತಿಲ್ಲ

ಏಕದಿನದಲ್ಲಿ ಕಳೆದ 3 ವರ್ಷಗಳಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಸೋತಿಲ್ಲ. ಜುಲೈ 2021 ರಲ್ಲಿ ಶ್ರೀಲಂಕಾ ಕೊನೆಯ ಬಾರಿಗೆ ಭಾರತವನ್ನು ಏಕದಿನದಲ್ಲಿ ಸೋಲಿಸಿತ್ತು. ಆ ಪಂದ್ಯ ಕೂಡ ಕೊಲಂಬೊದಲ್ಲಿ ನಡೆದಿತ್ತು. ಇದೀಗ ಭಾರತ ತನ್ನ ಗೆಲುವಿನ ದಾಖಲೆಯನ್ನು ಮುಂದುವರೆಸಲು ಬಯಸಿದರೆ, ಇತ್ತ ಶ್ರೀಲಂಕಾ ಏಕದಿನದಲ್ಲಿ ತನ್ನ ಸೋಲಿನ ಸರಣಿಯನ್ನು ಮುರಿಯುವ ಇರಾದೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Sun, 4 August 24