ಒಂದು ಪಂದ್ಯ, ಹಲವು ದಾಖಲೆ: ಹೊಸ ಇತಿಹಾಸ ನಿರ್ಮಿಸಿದ ಏಷ್ಯನ್ ಚಾಂಪಿಯನ್ಸ್
Team India Records: ಏಕದಿನ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆದ 2003 ರಲ್ಲಿ 226 ಎಸೆತಗಳು ಬಾಕಿಯಿರುವಂತೆ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ 263 ಎಸೆತಗಳನ್ನು ಉಳಿಸಿ ಅಮೋಘ ಗೆಲುವು ದಾಖಲಿಸಿದೆ.
ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಹಲವು ದಾಖಲೆ ಬರೆದಿದೆ. ಅದರಲ್ಲಿ ಬಹುತೇಕ ವಿಶ್ವ ದಾಖಲೆಗಳು ಎಂಬುದೇ ಇಲ್ಲಿ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವೇಗಿಗಳು ಲಂಕಾ ನಾಯಕನ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದರು.
ಮೊದಲ ಓವರ್ನಲ್ಲೇ ಪ್ರಥಮ ವಿಕೆಟ್ ಪಡೆದು ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಮಿಯಾ ಮ್ಯಾಜಿಕ್ ಶುರುವಾಯಿತು. 4ನೇ ಓವರ್ನಲ್ಲಿ ಒಟ್ಟು 4 ವಿಕೆಟ್ ಕಬಳಿಸಿ ಸಿರಾಜ್ ಲಂಕಾ ತಂಡಕ್ಕೆ ಬಿಗ್ ಶಾಕ್ ನೀಡಿದರು.
ಅಲ್ಲದೆ ಕೇವಲ 7 ಓವರ್ಗಳಲ್ಲಿ ಸಿರಾಜ್ 21 ರನ್ ನೀಡಿ 6 ವಿಕೆಟ್ ಪಡೆದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 2.2 ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 15.2 ಓವರ್ಗಳಲ್ಲಿ 50 ರನ್ಗಳಿಸಿ ಸರ್ವಪತನ ಕಂಡಿತು.
ಕೇವಲ 51 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ನಿರೀಕ್ಷೆಯಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಕೇವಲ 6.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಹಲವು ದಾಖಲೆಗಳು ಟೀಮ್ ಇಂಡಿಯಾ ಪಾಲಾಯಿತು. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ…
ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವು (ಬಾಕಿ ಎಸೆತಗಳ ಲೆಕ್ಕದಲ್ಲಿ):
ಏಕದಿನ ಕ್ರಿಕೆಟ್ನ ಫೈನಲ್ ಪಂದ್ಯದಲ್ಲಿ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆದ 2003 ರಲ್ಲಿ 226 ಎಸೆತಗಳು ಬಾಕಿಯಿರುವಂತೆ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ 263 ಎಸೆತಗಳನ್ನು ಉಳಿಸಿ ಅಮೋಘ ಗೆಲುವು ದಾಖಲಿಸಿದೆ.
- 263 ಎಸೆತಗಳು ಬಾಕಿ : ಭಾರ vs ಶ್ರೀಲಂಕಾ (ಕೊಲಂಬೊ, 2023)
- 226 ಎಸೆತಗಳು ಬಾಕಿ: ಆಸ್ಟ್ರೇಲಿಯಾ vs ಇಂಗ್ಲೆಂಡ್ (ಸಿಡ್ನಿ, 2003)
- 179 ಎಸೆತಗಳು ಬಾಕಿ: ಆಸ್ಟ್ರೇಲಿಯಾ vs ಪಾಕಿಸ್ತಾನ್ (ಲಾರ್ಡ್ಸ್ 1999)
ಅತೀ ಕಡಿಮೆ ಬೌಲ್ ಮಾಡಿದ ಪಂದ್ಯ:
ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ 15.2 ಓವರ್ಗಳನ್ನು ಎಸೆದರೆ, ಶ್ರೀಲಂಕಾ ಕೇವಲ 6.1 ಓವರ್ ಬೌಲ್ ಮಾಡಿದೆ. ಅಂದರೆ ಕೇವಲ 129 ಎಸೆತಗಳಲ್ಲಿ ಪಂದ್ಯ ಮುಗಿದಿದೆ. ಇದು ಏಕದಿಕ ಕ್ರಿಕೆಟ್ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳ ಮೂರನೇ ಏಕದಿನ ಪಂದ್ಯವಾಗಿದೆ.
- 104 ಎಸೆತಗಳು- ನೇಪಾಳ vs ಯುಎಸ್ಎ (ಕೀರ್ತಿಪುರ್, 2020)
- 120 ಎಸೆತಗಳು- ಶ್ರೀಲಂಕಾ vs ಝಿಂಬಾಬ್ವೆ (ಕೊಲಂಬೊ, 2001)
- 129 ಎಸೆತಗಳು- ಭಾರತ vs ಶ್ರೀಲಂಕಾ (ಕೊಲಂಬೊ, 2023)
- 140 ಎಸೆತಗಳು- ಶ್ರೀಲಂಕಾ vs ಕೆನಡಾ (ಪಾರ್ಲ್, 2003)
ಟೀಮ್ ಇಂಡಿಯಾದ ಅತೀ ದೊಡ್ಡ ಗೆಲುವು:
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಟೀಮ್ ಇಂಡಿಯಾ ಅತೀ ದೊಡ್ಡ ಗೆಲುವಾಗಿದೆ. ಏಕೆಂದರೆ ಭಾರತ ತಂಡವು ಈ ಪಂದ್ಯದಲ್ಲಿ 263 ಎಸೆತಗಳನ್ನು ಉಳಿಸಿ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
- 263 ಎಸೆತಗಳು: ಭಾರತ vs ಶ್ರೀಲಂಕಾ (ಕೊಲಂಬೊ, 2023)
- 231 ಎಸೆತಗಳು: ಭಾರತ vs ಕೀನ್ಯಾ (ಬ್ಲೋಮ್‌ಫಾಂಟೈನ್, 2001)
- 211 ಎಸೆತಗಳು: ಭಾರತ vs ವೆಸ್ಟ್ ಇಂಡೀಸ್ (ತಿರುವನಂತಪುರ, 2018)
- 188 ಎಸೆತಗಳು: ಭಾರತ vs ಇಂಗ್ಲೆಂಡ್ (ದಿ ಓವಲ್, 2022)
ಇದನ್ನೂ ಓದಿ: 16 ಎಸೆತಗಳಲ್ಲಿ 5 ವಿಕೆಟ್: ವಿಶ್ವ ದಾಖಲೆ ಬರೆದ ಮೊಹಮ್ಮದ್ ಸಿರಾಜ್
ಫೈನಲ್‌ನಲ್ಲಿ 10 ವಿಕೆಟ್ಗಳ ಭರ್ಜರಿ ಜಯ:
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2ನೇ ಬಾರಿ ಫೈನಲ್ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 1998 ರಲ್ಲಿ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು.
- 197/0- ಭಾರತ vs ಝಿಂಬಾಬ್ವೆ (ಶಾರ್ಜಾ, 1998)
- 118/0- ಆಸ್ಟ್ರೇಲಿಯಾ vs ಇಂಗ್ಲೆಂಡ್ (ಸಿಡ್ನಿ, 2003)
- 51/0 ಭಾರತ vs ಶ್ರೀಲಂಕಾ (ಕೊಲಂಬೊ, 2023)