Ravindra Jadeja: ದಾಖಲೆ ಮೇಲೆ ದಾಖಲೆ ಬರೆದ ರಾಕ್​ಸ್ಟಾರ್ ಜಡೇಜಾ..!

| Updated By: ಝಾಹಿರ್ ಯೂಸುಫ್

Updated on: Mar 05, 2022 | 2:35 PM

India vs Sri Lanka: ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿರುವ ಟೀಮ್ ಇಂಡಿಯಾ ಜಡೇಜಾ ಅವರ ಭರ್ಜರಿ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 574 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

Ravindra Jadeja: ದಾಖಲೆ ಮೇಲೆ ದಾಖಲೆ ಬರೆದ ರಾಕ್​ಸ್ಟಾರ್ ಜಡೇಜಾ..!
Ravindra Jadeja
Follow us on

ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ (India vs Sri Lanka 1st Test) ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ವೃತ್ತಿ ಕ್ರಿಕೆಟ್​ನಲ್ಲಿ ಜಡೇಜಾ 5 ಸಾವಿರ ರನ್ ಪೂರೈಸಿದ್ದಾರೆ. ಮತ್ತೊಂದೆಡೆ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಪಿಲ್ ದೇವ್ ಬಳಿಕ 5 ಸಾವಿರ ರನ್ ಹಾಗೂ 400 ಕ್ಕೂ ಅಧಿಕ ವಿಕೆಟ್ ಪಡೆದ ಭಾರತದ 2ನೇ ಆಟಗಾರ ಎಂಬ ವಿಶೇಷ ದಾಖಲೆಯನ್ನು ಜಡೇಜಾ ನಿರ್ಮಿಸಿದ್ದಾರೆ.

33ರ ಹರೆಯದ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಶತಕವಾಗಿದೆ. ಈ ಪಂದ್ಯದ ಮೊದಲು, ಅವರು 57 ಟೆಸ್ಟ್‌ಗಳ 84 ಇನ್ನಿಂಗ್ಸ್‌ಗಳಲ್ಲಿ 34 ರ ಸರಾಸರಿಯಲ್ಲಿ 2195 ರನ್ ಗಳಿಸಿದ್ದರು. ಒಂದು ಶತಕ ಮತ್ತು 17 ಅರ್ಧಶತಕಗಳನ್ನು ಬಾರಿಸಿದ್ದರು. ಜೊತೆಗೆ 232 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು 113 ಏಕದಿನ ಇನ್ನಿಂಗ್ಸ್‌ಗಳಲ್ಲಿ, ಅವರು 33 ರ ಸರಾಸರಿಯಲ್ಲಿ 2411 ರನ್ ಗಳಿಸಿದ್ದರು. ಈ ವೇಳೆ 13 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೇ ವೇಳೆ 188 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಅಂತರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ 326 ರನ್ ಹಾಗೂ 48 ವಿಕೆಟ್​​ಗಳನ್ನು ಸಹ ಪಡೆದಿದ್ದಾರೆ.

ಇದೀಗ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 228 ಎಸೆತಗಳಲ್ಲಿ 17 ಬೌಂಡರಿ 3 ಸಿಕ್ಸರ್ ಒಳಗೊಂಡಂತೆ ಅಜೇಯ 175 ರನ್​ ಬಾರಿಸಿದ್ದಾರೆ. ಈ ಮೂಲಕ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟೀಮ್ ಇಂಡಿಯಾ ಪರ ಅತೀ ಹೆಚ್ಚು ರನ್​ ಬಾರಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ರವಿ ಜಡೇಜಾ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿತ್ತು. ಕಪಿಲ್ ದೇವ್ 1986 ರಲ್ಲಿ ಶ್ರೀಲಂಕಾ ವಿರುದ್ದವೇ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 163 ರನ್ ಬಾರಿಸಿದ್ದು ದಾಖಲೆಯಾಗಿತ್ತು. ಇದೀಗ ಅಜೇಯ 175 ರನ್ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿರುವ ಟೀಮ್ ಇಂಡಿಯಾ ಜಡೇಜಾ ಅವರ ಭರ್ಜರಿ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 574 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(India vs Sri Lanka: Ravindra Jadeja breaks Kapil Dev’s record)