Ravindra Jadeja: ರಾಕ್‌ಸ್ಟಾರ್ ಜಡ್ಡು ರಾಕಿಂಗ್: ಅಗಲಿದ ನಾಯಕನಿಗೆ ಸೆಂಚುರಿ ನಮನ
Ravindra Jadeja's 2nd Test hundred: ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ವೃತ್ತಿ ಕ್ರಿಕೆಟ್ನಲ್ಲಿ ಜಡೇಜಾ 5 ಸಾವಿರ ರನ್ ಪೂರೈಸಿದ್ದಾರೆ.
ಅದು 2008ರ ಐಪಿಎಲ್ ಬಲಿಷ್ಠ ತಂಡಗಳ ನಡುವೆ ಶೇನ್ ವಾರ್ನ್ (Shane Warne) ನೇತೃತ್ವದಲ್ಲಿ ಯುವ ಪಡೆಯನ್ನು ಒಳಗೊಂಡ ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿದಿತ್ತು. ತಂಡದ ನಾಯಕರಾಗಿ ಸಂಪೂರ್ಣ ಜವಾಬ್ದಾರಿವಹಿಸಿಕೊಂಡಿದ್ದ ವಾರ್ನ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಿಸಿದರು. ಯೂಸುಫ್ ಪಠಾಣ್, ಸ್ವಪ್ನಿಲ್ ಅಸ್ನೊಡ್ಕರ್,ರವೀಂದ್ರ ಜಡೇಜಾರಂತಹ ಆಟಗಾರರನ್ನೇ ಮುಂದಿಟ್ಟುಕೊಂಡು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಅಂದು ತಂಡದಲ್ಲಿದ್ದ ಯುವ ತರುಣ ರವೀಂದ್ರ ಜಡೇಜಾರನ್ನು ಗಮನಿಸಿ, ದಿಸ್ ಕಿಡ್ ಈಸ್ ರಾಕ್‌ಸ್ಟಾರ್ ಎಂದಿದ್ದರು ಶೇನ್ ವಾರ್ನ್. ಸ್ಪಿನ್ ಮಾಂತ್ರಿಕನ ರಾಕ್‌ಸ್ಟಾರ್ ಆ ಬಳಿಕ ಕ್ರಿಕೆಟ್ ಅಂಗಳದಲ್ಲಿ ಸರ್ ಜಡೇಜಾ (Ravindra Jadeja) ಆಗಿ ಮಿಂಚಲಾರಂಭಿಸಿದರು. ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು.
ಇದೀಗ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕ ಮೂಡಿಬಂದಿದ್ದು ತನ್ನನ್ನು ರಾಕ್‌ಸ್ಟಾರ್ ಎಂದು ಕರೆದಿದ್ದ ಶೇನ್ ವಾರ್ನ್ ಅವರ ಅಗಲಿಕೆಯ ಬೆನ್ನಲ್ಲೇ ಎಂಬುದು ವಿಶೇಷ. ಹೀಗಾಗಿಯೇ ರಾಕ್‌ಸ್ಟಾರ್ ಜಡೇಜಾ ಶತಕ ಬಾರಿಸಿ ಈ ಮೂಲಕ ಶೇನ್ ವಾರ್ನ್‌ಗೆ ಗೌರವ ಸಲ್ಲಿಸಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಶತಕ ನೋಡಿ ಶೇನ್ ವಾರ್ನ್ ಹೆಮ್ಮೆಪಟ್ಟಿರುತ್ತಾರೆ ಎಂದು ಆರ್ಆರ್ ಟ್ವಿಟಿಸಿದೆ.
ಒಟ್ಟಿನಲ್ಲಿ ಶೇನ್ ವಾರ್ನ್ ಎಂಬ ದಂತಕಥೆಗೆ ಭರ್ಜರಿ ಶತಕದ ಮೂಲಕ ರವೀಂದ್ರ ಜಡೇಜಾ ನಮನ ಸಲ್ಲಿಸಿದ್ದಾರೆ. ಈ ಮೂಲಕ ರಾಕ್‌ಸ್ಟಾರ್ ಬಿರುದು ನೀಡಿದ ನಾಯಕನಿಗೆ ಸೆಂಚುರಿಯೊಂದಿಗೆ ಗೌರವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
2ನೇ ಶತಕ: ಮೊಹಾಲಿ ಮೈದಾನದಲ್ಲಿ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದರು. 160 ಎಸೆತಗಳಲ್ಲಿ ಈ ಶತಕ ಪೂರೈಸಿದರು. ವಿಶೇಷ ಎಂದರೆ ಈ ಶತಕದ ಅವಧಿಯಲ್ಲಿ ಜಡೇಜಾ 6 ಮತ್ತು 7 ನೇ ವಿಕೆಟ್‌ಗೆ ಎರಡು ಶತಕದ ಜೊತೆಯಾಟಗಳನ್ನುಆಡಿದರು. ಮೊದಲು ಪಂತ್ ಜೊತೆಗೆ 104 ರನ್ಗಳ ಜೊತೆಯಾಟವಾಡಿದರೆ, ಆ ಬಳಿಕ ಅಶ್ವಿನ್ ಜತೆ 132 ರನ್ಗಳ ಜೊತೆಯಾಟ ಆಡಿದರು.
‘ರಾಕ್‌ಸ್ಟಾರ್’ ಮಿಂಚಿಂಗ್: ಈ ಶತಕದೊಂದಿಗೆ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ವೃತ್ತಿ ಕ್ರಿಕೆಟ್ನಲ್ಲಿ ಜಡೇಜಾ 5 ಸಾವಿರ ರನ್ ಪೂರೈಸಿದ್ದಾರೆ. ಮತ್ತೊಂದೆಡೆ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಪಿಲ್ ದೇವ್ ಬಳಿಕ 5 ಸಾವಿರ ರನ್ ಹಾಗೂ 400 ಕ್ಕೂ ಅಧಿಕ ವಿಕೆಟ್ ಪಡೆದ ಭಾರತದ 2ನೇ ಆಟಗಾರ ಎಂಬ ವಿಶೇಷ ದಾಖಲೆಯನ್ನು ಜಡೇಜಾ ನಿರ್ಮಿಸಿದ್ದಾರೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(“Warne Must Be Really Proud Of His Rockstar”: Ravindra Jadeja’s 2nd Test hundred)