Virender Sehwag: ಟೀಮ್ ಇಂಡಿಯಾದ ಇಬ್ಬರು ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ ಸೆಹ್ವಾಗ್

| Updated By: ಝಾಹಿರ್ ಯೂಸುಫ್

Updated on: Jul 25, 2021 | 3:35 PM

India vs Sri Lanka: 3ನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದಿದ್ದರು.

Virender Sehwag: ಟೀಮ್ ಇಂಡಿಯಾದ ಇಬ್ಬರು ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದ ಸೆಹ್ವಾಗ್
Virender Sehwag
Follow us on

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ (Team India) ವನ್ನು ಮೂರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶ್ರೀಲಂಕಾ ಕ್ಲೀನ್ ಸ್ವೀಪ್ ತಪ್ಪಿಸಿಕೊಂಡಿತು. ಈ ಸರಣಿಯಲ್ಲಿ ಒಟ್ಟು 7 ಹೊಸಮುಖಗಳಿಗೆ ಅವಕಾಶ ನೀಡಲಾಗಿತ್ತು. ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದಿದ್ದರು. ಹೀಗೆ ಅವಕಾಶ ಪಡೆದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ಮಿಂಚಿದರೆ, ಸಂಜು ಸ್ಯಾಮ್ಸನ್ 46 ರನ್​ಗಳಿಸಿ ಗಮನ ಸೆಳೆದಿದ್ದರು. ಹಾಗೆಯೇ ಚೇತನ್ ಸಕರಿಯಾ ಹಾಗೂ ರಾಹುಲ್ ಚಹರ್ ಕೂಡ ಬೌಲಿಂಗ್​ನಲ್ಲಿ ಮಿಂಚಿದ್ದರು. ಇದಾಗ್ಯೂ ತಂಡದಲ್ಲಿದ್ದ ಅನುಭವಿ ಆಟಗಾರರು ವಿಫಲರಾಗಿರುವುದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಟೀಮ್ ಇಂಡಿಯಾ ಯುವ ಪಡೆ ಲಂಕಾ ವಿರುದದ ಸರಣಿ ಗೆದ್ದರೆ ಇಬ್ಬರು ಆಟಗಾರರ ಪ್ರದರ್ಶನ ನನಗೆ ದೊಡ್ಡ ನಿರಾಸೆಯನ್ನುಂಟು ಮಾಡಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ನಿಜವಾಗ್ಲೂ ನಾನು ಮನೀಶ್ ಪಾಂಡೆ ಬಗ್ಗೆ ಭರವಸೆ ಹೊಂದಿದ್ದೆ, ಆದರೆ ಆತ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ಕಳಪೆ ಪ್ರದರ್ಶನ ನೀಡಿರುವುದು ನಿಜಕ್ಕೂ ಬೇಸರವನ್ನುಂಟು ಮಾಡಿತು ಎಂದು ವೀರು ಹೇಳಿದ್ದಾರೆ. ಮನೀಶ್ ಪಾಂಡೆ ಮೂರು ಪಂದ್ಯಗಳಿಂದ ಕ್ರಮವಾಗಿ 26, 37 ಹಾಗೂ 11 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ತಂಡದಲ್ಲಿ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ಸ್ಥಾನ ಪಡೆದರೂ ಪಾಂಡೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಬಗ್ಗೆ ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೋರ್ವ ಅನುಭವಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕಡೆಯಿಂದ ಕೂಡ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಪಾಂಡ್ಯ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಏಕದಿನ ಕ್ರಿಕೆಟ್​ನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಪಾಂಡ್ಯ ಹಾಗೂ ಪಾಂಡೆ ವಿಫಲರಾಗಿದ್ದಾರೆ. ಅತ್ಯುತ್ತಮ ಪ್ರದರ್ಶನದ ಹೊರತಾಗಿ ಎದುರಾಳಿಗಳಿಗೆ ಸವಾಲಾಗುವಲ್ಲಿ ಕೂಡ ಇಬ್ಬರು ಎಡವಿದ್ದಾರೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಅದರಲ್ಲೂ ಮನೀಶ್ ಪಾಂಡೆ ಅವರ ಪ್ರದರ್ಶನ ನನ್ನಲ್ಲಿ ತುಂಬಾ ನಿರಾಸೆಯನ್ನುಂಟು ಮಾಡಿತು ಎಂದು ವೀರು ಹೇಳಿದರು.

ಇದೇ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಪ್ರದರ್ಶನವನ್ನು ಹಾಡಿಹೊಗಳಿದ ಸೆಹ್ವಾಗ್, ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆಗಿಂತ ಸೂರ್ಯ ಹಾಗೂ ಕಿಶನ್​ ಅವರನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

ಇದನ್ನೂ ಓದಿ: ದ್ರಾವಿಡ್ ಗರಡಿ ಹುಡುಗರು ಎಡವಿದೆಲ್ಲಿ: ಭಾರತದ ಸೋಲಿಗೆ ಇದುವೇ ಪ್ರಮುಖ ಕಾರಣ..!

(India vs Sri lanka: Virender Sehwag unhappy with Manish Pandey and Hardik Pandya)