IND vs WI: ಟೀಂ ಇಂಡಿಯಾದಲ್ಲಿ ಈ ಇಬ್ಬರ ಆಯ್ಕೆ ಚಹಲ್- ಶ್ರೇಯಸ್​ ಸ್ಥಾನಕ್ಕೆ ಕುತ್ತು ತರುತ್ತಾ..?

| Updated By: ಪೃಥ್ವಿಶಂಕರ

Updated on: Jan 27, 2022 | 4:55 PM

IND vs WI: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ದೀಪಕ್ ಹೂಡಾ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದು, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ತಂಡದ ಭಾಗವಾಗಿದ್ದಾರೆ.

IND vs WI: ಟೀಂ ಇಂಡಿಯಾದಲ್ಲಿ ಈ ಇಬ್ಬರ ಆಯ್ಕೆ ಚಹಲ್- ಶ್ರೇಯಸ್​ ಸ್ಥಾನಕ್ಕೆ ಕುತ್ತು ತರುತ್ತಾ..?
ಟೀಂ ಇಂಡಿಯಾ
Follow us on

ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರುವರಿ 6ರಿಂದ ಆರಂಭವಾಗಲಿರುವ ಏಕದಿನ ಸರಣಿ ಹಾಗೂ ಆ ಬಳಿಕ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಅನುಭವಿ ಹಾಗೂ ಕೆಲವು ಯುವ ಆಟಗಾರರು ತಂಡದಲ್ಲಿ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾದ ಆಯ್ಕೆಯು ತುಂಬಾ ಆಸಕ್ತಿದಾಯಕವಾಗಿದೆ. ಏಕೆಂದರೆ ಈ ಸರಣಿಯಲ್ಲಿ ಟೀಂ ಇಂಡಿಯಾದ ಕೆಲವು ಅನುಭವಿ ಆಟಗಾರರ ಮೇಲೆ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡವಿದೆ. ರಾಹುಲ್ ದ್ರಾವಿಡ್ ಮತ್ತು ಹೊಸ ನಾಯಕ ರೋಹಿತ್ ಶರ್ಮಾ ಇಂತಹ ತಂತ್ರವನ್ನು ರೂಪಿಸಿದ್ದಾರೆ. ಬಹುಶಃ ಅನೇಕ ಹಿರಿಯ ಆಟಗಾರರು ಒಳಗೊಳಗೆ ಟೆನ್ಶನ್ ಮಾಡಿಕೊಂಡಿರಬಹುದು. ವಿಶೇಷವಾಗಿ ಶ್ರೇಯಸ್ ಅಯ್ಯರ್ ಮತ್ತು ಯುಜ್ವೇಂದ್ರ ಚಹಲ್. ಟೀಮ್ ಇಂಡಿಯಾ ಈ ಇಬ್ಬರಿಗೆ ದೀರ್ಘಕಾಲದಿಂದ ಅವಕಾಶಗಳನ್ನು ನೀಡುತ್ತಿದೆ. ಆದರೆ ಈಗ ಈ ಇಬ್ಬರ ಬದಲಿ ಆಯ್ಕೆಗಳನ್ನು ಸಹ ತಂಡದಲ್ಲಿ ಸೇರಿಸಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ದೀಪಕ್ ಹೂಡಾ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದು, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ತಂಡದ ಭಾಗವಾಗಿದ್ದಾರೆ. ದೀಪಕ್ ಹೂಡಾ ಏಕದಿನ ತಂಡಕ್ಕೆ ಬರುವುದರಿಂದ ಶ್ರೇಯಸ್ ಅಯ್ಯರ್ ಮೇಲೆ ನೇರ ಒತ್ತಡವಿದ್ದು, ಬಿಷ್ಣೋಯ್ ಆಗಮನವು ಯುಜುವೇಂದ್ರ ಚಹಾಲ್ ಮೇಲೆ ಉತ್ತಮ ಪ್ರದರ್ಶನ ನೀಡುವಂತೆ ಒತ್ತಡ ಹೇರಲಿದೆ.

ದೀಪಕ್ ಹೂಡಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ಸ್ಪರ್ಧೆ?
ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಯಲ್ಲಿ, ಟೀಮ್ ಇಂಡಿಯಾ ಶ್ರೇಯಸ್ ಅಯ್ಯರ್ ಅವರನ್ನು 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿಸಿತು. ಬ್ಯಾಟ್ಸ್‌ಮನ್ ಆಗಿ, ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದರು. ಅಯ್ಯರ್ ಒಳಗೆ ಪ್ರತಿಭೆ ಇದೆ ಎಂಬುದು ಎಲ್ಲರಿಗೂ ಗೊತ್ತು, ಆದರೆ ಟೀಂ ಇಂಡಿಯಾ ತನ್ನ ನಂ.5 ಬ್ಯಾಟ್ಸ್‌ಮನ್‌ನಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕೂಡ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿತ್ತು. ಸ್ಪಷ್ಟವಾಗಿ, ಟೀಮ್ ಇಂಡಿಯಾ ತನ್ನ ಮಧ್ಯಮ ಕ್ರಮಾಂಕದಲ್ಲಿ ಕೆಲವು ಆಟಗಾರರು ಇರಬೇಕೆಂದು ಬಯಸುತ್ತದೆ, ಅವರು ಅಗತ್ಯವಿದ್ದಾಗ ಬೌಲಿಂಗ್ ಮಾಡಬಹುದು. ಅದಕ್ಕಾಗಿಯೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ದೀಪಕ್ ಹೂಡಾ ಅವರನ್ನು ಆಯ್ಕೆ ಮಾಡಲಾಗಿದೆ, ಅವರು ಬೌಲಿಂಗ್ ಸಹ ಮಾಡುವ ಸಾಮಥ್ಯ್ರ ಹೊಂದಿದ್ದಾರೆ. ದೀಪಕ್ ಹೂಡಾ ಪರಿಣಾಮಕಾರಿ ಬೌಲರ್ ಅಲ್ಲ ಆದರೆ ಅಗತ್ಯವಿದ್ದಾಗ ಬೌಲ್ ಮಾಡಬಹುದು. ಅಲ್ಲದೆ, ಅವರು ನಂ.4 ರಿಂದ 7 ರವರೆಗೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.

ಯುಜ್ವೇಂದ್ರ ಚಹಾಲ್ ಮತ್ತು ರವಿ ಬಿಷ್ಣೋಯ್ ಮುಖಾಮುಖಿ
ಯುಜುವೇಂದ್ರ ಚಹಾಲ್ ಕೂಡ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರ ಪ್ರದರ್ಶನ ಸಾಧಾರಣವಾಗಿತ್ತು. ಚಾಹಲ್ ವಿಕೆಟ್ ಕಬಳಿಸುತ್ತಿದ್ದ ರೀತಿ ಈಗ ಸಾಕಷ್ಟು ಕುಸಿತ ಕಂಡಿದೆ ಅದಕ್ಕಾಗಿಯೇ ಟೀಂ ಇಂಡಿಯಾ ಇದೀಗ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಬಿಷ್ಣೋಯ್ ಲೆಗ್ ಸ್ಪಿನ್ನರ್ ಆದರೆ ಅವರ ಬೌಲಿಂಗ್ ವಿಧಾನವು ವಿಭಿನ್ನವಾಗಿದೆ. ಜೊತೆಗೆ ಅವರು ಉತ್ತಮ ಫೀಲ್ಡರ್ ಕೂಡ. ಟೀಮ್ ಇಂಡಿಯಾದಲ್ಲಿ ರವಿ ಬಿಷ್ಣೋಯ್ ಎಂಟ್ರಿಯಾಗಿರುವುದು ಚಹಾಲ್​ಗೆ ಎಲ್ಲೋ ಎಚ್ಚರಿಕೆ ಗಂಟೆಯಾಗಿದೆ.

ಇದನ್ನೂ ಓದಿ:IND vs WI: ಕುಲ್ದೀಪ್​ಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಿದ ರೋಹಿತ್; ರವಿ ಬಿಷ್ಣೋಯ್​ಗೂ ಚಾನ್ಸ್