ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 19 ರಿಂದ ಶುರುವಾಗಲಿದೆ. ಆ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ (India vs West Indies) ವಿರುದ್ದ ಸರಣಿ ಆಡಲಿದೆ. ಫೆಬ್ರವರಿ 6 ರಿಂದ ಶುರುವಾಗಲಿರುವ ಈ ಸರಣಿಗೆ ಇದೀಗ ಕೊರೋನಾತಂಕ ಎದುರಾಗಿದೆ. ಏಕೆಂದರೆ ದೇಶಾದ್ಯಂತ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು, ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಆಯೋಜಿಸುವುದು ಬಿಸಿಸಿಐಗೆ ಸವಾಲಾಗಿ ಮಾರ್ಪಟ್ಟಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಗಾಗಿ ಸ್ಟೇಡಿಯಂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅದರಂತೆ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯ ಎರಡು ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿ ( ಭಾರತ vs ವೆಸ್ಟ್ ಇಂಡೀಸ್ ಸರಣಿ ) ಮುಂದಿನ ತಿಂಗಳು 6 ರಂದು ಅಹಮದಾಬಾದ್‌ನಲ್ಲಿ ಶುರುವಾಗಲಿದೆ. ಈ ಸರಣಿಯಲ್ಲಿ 3 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಅದರಂತೆ ಮೊದಲು ಏಕದಿನ ಸರಣಿ ನಡೆಯಲಿದ್ದು, ಆ ಬಳಿಕ ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಇದಕ್ಕಾಗಿ ಅಹಮದಾಬಾದ್( ಫೆಬ್ರವರಿ 6), ಜೈಪುರ (ಫೆಬ್ರವರಿ 9), ಕೋಲ್ಕತ್ತಾ (ಫೆಬ್ರವರಿ 12), ಕಟಕ್ (15 ಫೆಬ್ರವರಿ), ವಿಶಾಖಪಟ್ಟಣಂ (ಫೆಬ್ರವರಿ 18) ಮತ್ತು ತಿರುವನಂತಪುರಂ (ಫೆಬ್ರವರಿ 20) ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಕೊರೋನಾತಂಕ ಇರುವ ಕಾರಣ ಎರಡು ಏಕದಿನ ಪಂದ್ಯಗಳನ್ನು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದಿನ ವೇಳಾಪಟ್ಟಿಯಂತೆ ಫೆಬ್ರವರಿ 12 ರಂದು ಈಡನ್ ಗಾರ್ಡನ್ಸ್‌ನಲ್ಲಿ ಒಂದು ಪಂದ್ಯ ನಡೆಯಬೇಕಿತ್ತು. ಇದೀಗ ಫೆಬ್ರವರಿ 9 ಹಾಗೂ 12 ರಂದು ಪಂದ್ಯಗಳನ್ನು ನಡೆಸಲು ಪ್ಲ್ಯಾನ್ ರೂಪಿಸಲಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ನವೆಂಬರ್ 2021 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕೊನೆಯ ಟಿ20 ಪಂದ್ಯ ಆಡಲಾಗಿತ್ತು. ಇದೀಗ ಕೊರೋನಾ ಕಾರಣದಿಂದ ಎರಡು ಏಕದಿನ ಪಂದ್ಯಗಳು ಈಡನ್ ಗಾರ್ಡನ್ಸ್ ಪಾಲಾಗುತ್ತಿದೆ.
3 ಸ್ಟೇಡಿಯಂನಲ್ಲಿ ಇಡೀ ಸರಣಿ:
ಭಾರತ – ವೆಸ್ಟ್ ಇಂಡೀಸ್ ನಡುವಣ 3 ODI ಮತ್ತು 3 T20 ಪಂದ್ಯಗಳನ್ನು ಮೂರು ಸ್ಟೇಡಿಯಂನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಇದೀಗ ಏಕದಿನ ಸರಣಿಯ ನಡೆಯಬೇಕಿದ್ದ ಸ್ಥಳಗಳನ್ನು ಬಿಸಿಸಿಐ ಬದಲಾಯಿಸಿದ್ದು, ಹಾಗೆಯೇ ಟಿ20 ಪಂದ್ಯಗಳ ಸ್ಟೇಡಿಯಂ ಕೂಡ ಬದಲಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(India vs West Indies: Two ODIs likely at Eden Gardens next month)
Published On - 2:27 pm, Sat, 15 January 22