Smriti Mandhana: ಸ್ಮೃತಿ ಮಂದಾನ ಸ್ಫೋಟಕ ಶತಕಕ್ಕೆ ಬೆಚ್ಚಿ ಬಿದ್ದ ವಿಂಡೀಸ್: ಬೃಹತ್ ಮೊತ್ತದತ್ತ ಭಾರತ

India Women vs West Indies Women, Women's World Cup 2022: ವೆಸ್ಟ್ ಇಂಡೀಸ್ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡರೂ ಓಪನರ್ ಸ್ಮೃತಿ ಮಂದಾದ ಅವರ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಇವರಿಗೆ ಉಪ ನಾಯಕಿ ಹರ್ಮನ್​ಪ್ರೀತ್ ಕೌರ್ ಉತ್ತಮ ಸಾಥ್ ನೀಡಿದ್ದಾರೆ.

Smriti Mandhana: ಸ್ಮೃತಿ ಮಂದಾನ ಸ್ಫೋಟಕ ಶತಕಕ್ಕೆ ಬೆಚ್ಚಿ ಬಿದ್ದ ವಿಂಡೀಸ್: ಬೃಹತ್ ಮೊತ್ತದತ್ತ ಭಾರತ
smriti mandhana century INDW vs WIW
Follow us
TV9 Web
| Updated By: Vinay Bhat

Updated on:Mar 12, 2022 | 9:25 AM

12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2022) ಟೂರ್ನಿಯ 10ನೇ ಪಂದ್ಯದಲ್ಲಿಂದು ಭಾರತ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಅನ್ನು ಎದುರಿಸುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (West Indies Women vs India Women) ನಾಯಕಿ ಮಿಥಾಲಿ ರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕಣಕ್ಕಿಳಿದ ಭಾರತ ಬೊಂಬಾಟ್ ಬ್ಯಾಟಿಂಗ್ ನಡೆಸುತ್ತಿದೆ. ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡರೂ ಓಪನರ್ ಸ್ಮೃತಿ ಮಂದಾದ (Smriti Mandhana) ಅವರ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಇವರಿಗೆ ಉಪ ನಾಯಕಿ ಹರ್ಮನ್​ಪ್ರೀತ್ ಕೌರ್ ಉತ್ತಮ ಸಾಥ್ ನೀಡಿದ್ದಾರೆ. ಕೆರಿಬಿಯನ್ ಬೌಲರ್​ಗಳ ಬೆಂಡೆತ್ತಿದ ಮಂದಾನ ಕೇವಲ 107 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ ಸೆಂಚುರಿ ಗಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 5ನೇ ಶತಕ ಪೂರೈಸಿದ್ದಾರೆ. ಭಾರತವೀಗ 250 ರನ್​ಗಳ ಗಡಿ ದಾಟಿದ್ದು, 300ರ ಟಾರ್ಗೆಟ್​ನತ್ತ ಚಿತ್ತ ನೆಟ್ಟಿದೆ.

ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂದಾನ ಹಾಗೂ ಯಸ್ತಿಕಾ ಭಾಟಿಯಾ ಇನ್ನಿಂಗ್ಸ್ ಆರಂಭಿಸಿದರು. ಭಾಟಿಯಾ ಕೇವಲ 21 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 31 ರನ್ ಸಿಡಿಸಿ ಔಟಾದರು. ಈ ಜೋಡಿ ಮೊದಲ ವಿಕೆಟ್​ಗೆ 6.3 ಓವರ್​ನಲ್ಲಿ 49 ರನ್ ಕಲೆಹಾಕಿತು. ನಾಯಕಿ ಮಿಥಾಲಿ ರಾಜ್ ಈ ಬಾರಿ ಕೂಡ ವೈಫಲ್ಯ ಅನುಭವಿಸಿದರು. ಇವರ ಆಟ ಕೇವಲ 5 ರನ್​ಗೆ ಅಂತ್ಯವಾಯಿತು. ದೀಪ್ತಿ ಶರ್ಮಾ (15) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಬೇಗನೆ ನಿರ್ಗಮಿಸಿದರು.

ಹೀಗೆ ಭಾರತ 78 ರನ್ ಆಗುವ ಗೊತ್ತಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಮಂದಾನ ಹಾಗೂ ಹರ್ಮನ್​ಪ್ರೀತ್ ಕೌರ್. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ಸೆಟಲ್ ಆದಂತೆ ಅಬ್ಬರಿಸಲು ಶುರು ಮಾಡಿತು. ಅದರಲ್ಲೂ ಮಂದಾನ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಇತ್ತ ಹರ್ಮನ್ ಕೂಡ ಇವರಿಗೆ ಅತ್ಯುತ್ತಮ ಸಾಥ್ ನೀಡಿದರು. ಮಂದಾನ ಕೇವಲ 107 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಿಡಿಸಿ 100 ರನ್ ಪೂರೈಸಿ ಕ್ರೀಸ್​ನಲ್ಲಿದ್ದರೆ, ಇತ್ತ ಹರ್ಮನ್ ಅದಾಗಲೆ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ಜೋಡಿ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದೆ.

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ನ್ಯೂಜಿಲೆಂಡ್ ವಿರುದ್ಧ ಆಡಿದ ಆಟಗಾರರೇ ಕಣಕ್ಕಿಳಿದಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲೂ ಯಾವುದೇ ಬದಲಾವಣೆ ಇಲ್ಲ. ಇಲ್ಲಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಹರ್ಮನ್​ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಡಿಯಾಂಡ್ರಾ ಡಾಟಿನ್, ಹೇಯ್ಲಿ ಮ್ಯಾಥ್ಯೂಸ್, ಕೈಸಿಯಾ ನೈಟ್, ಸ್ಟೆಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಶಾಮಿಲಿಯಾ ಕೊನ್ನೆಲ್, ಅನಿಸಾ ಮೊಹಮ್ಮದ್, ಶಕೆರಾ ಸೆಲ್ಮನ್.

IND vs SL: ಇಂದಿನಿಂದ ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್: ಪಿಂಕ್ ಬಾಲ್ ಕದನಕ್ಕೆ ಸಜ್ಜಾದ ಚಿನ್ನಸ್ವಾಮಿ

Published On - 9:22 am, Sat, 12 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ