IND vs ZIM 1st T20I Live Streaming: ಭಾರತ- ಜಿಂಬಾಬ್ವೆ ಮೊದಲ ಟಿ20 ಪಂದ್ಯ ಯಾವ ಚಾನೆಲ್​ನಲ್ಲಿ, ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಪೂರ್ಣ ವಿವರ

|

Updated on: Jul 05, 2024 | 9:29 PM

India vs Zimbabwe 1st T20I Cricket Match Live Streaming: ಈ ಸರಣಿಯ ಎಲ್ಲಾ ಪಂದ್ಯಗಳನ್ನು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ Sony Liv ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ, ಆದರೆ ಅದು ಉಚಿತವಾಗಿರುವುದಿಲ್ಲ. ಇದಕ್ಕಾಗಿ ಚಂದಾದಾರಿಕೆ ಅಗತ್ಯವಿದೆ. ಅಪ್ಲಿಕೇಶನ್‌ನ ಚಂದಾದಾರಿಕೆಯನ್ನು ರೂ 399 ರಿಂದ ರೂ 1499 ಕ್ಕೆ ತೆಗೆದುಕೊಳ್ಳಬಹುದು.

IND vs ZIM 1st T20I Live Streaming: ಭಾರತ- ಜಿಂಬಾಬ್ವೆ ಮೊದಲ ಟಿ20 ಪಂದ್ಯ ಯಾವ ಚಾನೆಲ್​ನಲ್ಲಿ, ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಪೂರ್ಣ ವಿವರ
ಭಾರತ- ಜಿಂಬಾಬ್ವೆ
Follow us on

ಒಂದು ಕಡೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬಾರ್ಬಡೋಸ್‌ನಿಂದ ಭಾರತಕ್ಕೆ ಬಂದಿಳಿದಿದ್ದರೆ, ಮತ್ತೊಂದೆಡೆ ಶುಭ್​ಮನ್ ಗಿಲ್ ನೇತೃತ್ವದ ಮತ್ತೊಂದು ತಂಡ ಜಿಂಬಾಬ್ವೆ ಪ್ರವಾಸ ಮಾಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಶುಭಮನ್ ಗಿಲ್ ಜೊತೆಗೆ ಇತರ ಆಟಗಾರರೂ ಜಿಂಬಾಬ್ವೆ ತಲುಪಿದ್ದಾರೆ. ಈ ಸರಣಿಯು ಜುಲೈ 6 ರಿಂದ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭವಾಗಲಿದೆ. ಆದರೆ ಈ ಸರಣಿಗೂ ಮುನ್ನ ಅಭಿಮಾನಿಗಳಿಗೆ ಶಾಕ್ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಅದೆನೆಂದರೆ ಈ ಪಂದ್ಯವನ್ನು ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಈ ಸರಣಿಯ ಎಲ್ಲಾ ಪಂದ್ಯಗಳನ್ನು ಟಿವಿಯಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

ಚಂದಾದಾರಿಕೆ ಅಗತ್ಯ

ಈ ಸರಣಿಯ ಎಲ್ಲಾ ಪಂದ್ಯಗಳನ್ನು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ Sony Liv ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ, ಆದರೆ ಅದು ಉಚಿತವಾಗಿರುವುದಿಲ್ಲ. ಇದಕ್ಕಾಗಿ ಚಂದಾದಾರಿಕೆ ಅಗತ್ಯವಿದೆ. ಅಪ್ಲಿಕೇಶನ್‌ನ ಚಂದಾದಾರಿಕೆಯನ್ನು ರೂ 399 ರಿಂದ ರೂ 1499 ಕ್ಕೆ ತೆಗೆದುಕೊಳ್ಳಬಹುದು. ಈ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿವೆ. ಉಳಿದಂತೆ ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಯಾವಾಗ?

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಜುಲೈ 6 ಶನಿವಾರ ನಡೆಯಲಿದೆ.

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಎಲ್ಲಿ ನಡೆಯಲ್ಲಿದೆ?

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯ ಸಂಜೆ 4:30ಕ್ಕೆ ಆರಂಭವಾಗಲಿದೆ. ಹಾಗಾಗಿ ಟಾಸ್ 4 ಗಂಟೆಗೆ ನಡೆಯಲಿದೆ.

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬೇಕು?

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ.

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ನೋಡಬೇಕು?

ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟಿ20 ಪಂದ್ಯವನ್ನು Sony Liv ಸಿನಿಮಾ ಅಪ್ಲಿಕೇಶನ್‌ನಲ್ಲಿ ಮೊಬೈಲ್‌ನಲ್ಲಿ ವೀಕ್ಷಿಸಬಹುದು.

ಮೊದಲೆರಡು ಪಂದ್ಯಗಳಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್ (ಜಿತೇಶ್ ಶರ್ಮಾ, ಜಿತೇಶ್ ಶರ್ಮಾ) ಕೀಪರ್), ಹರ್ಷಿತ್ ರಾಣಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ