AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ಮಗನೊಂದಿಗೆ ಟಿ20 ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ ಪಾಂಡ್ಯ; ಮಡದಿ ನತಾಶಾ ನಾಪತ್ತೆ

Hardik Pandya: ಟಿ20 ವಿಶ್ವಕಪ್ ಗೆದ್ದ ನಂತರ ತಮ್ಮ ಮನೆಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಈ ಟಿ20 ವಿಶ್ವಕಪ್ ವಿಜಯೋತ್ಸವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿದ್ದಾರೆ. ಈ ಆಚರಣೆಯ ಫೋಟೋಗಳನ್ನು ಹಾರ್ದಿಕ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಮಗ ಅಗಸ್ತ್ಯ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮಡದಿ ನತಾಶಾ ಮಾತ್ರ ಕಾಣಿಸಿಕೊಂಡಿಲ್ಲ.

Hardik Pandya: ಮಗನೊಂದಿಗೆ ಟಿ20 ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ ಪಾಂಡ್ಯ; ಮಡದಿ ನತಾಶಾ ನಾಪತ್ತೆ
ಹಾರ್ದಿಕ್ ಪಾಂಡ್ಯ
ಪೃಥ್ವಿಶಂಕರ
|

Updated on: Jul 05, 2024 | 8:22 PM

Share

ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಇಡೀ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಾಂಡ್ಯ ಮೂರು ಓವರ್‌ಗಳಲ್ಲಿ 20 ರನ್‌ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತ ತಂಡ ಇದೀಗ ದೇಶಕ್ಕೆ ಮರಳಿದ್ದು, ಜುಲೈ 4 ರಂದು ತಂಡದ ಎಲ್ಲಾ ಆಟಗಾರರು ಅಭಿಮಾನಿಗಳೊಂದಿಗೆ ಈ ವಿಜಯವನ್ನು ಆಚರಿಸಿದ್ದರು. ಆ ಬಳಿಕ ಭಾರತ ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗೆ ಮರಳಿದ್ದು, ಕುಟುಂಬದೊಂದಿಗೆ ತಮ್ಮ ಸಂಭ್ರಮಾಚರಣೆಯನ್ನು ನಡೆಸಿದ್ದಾರೆ. ಅವರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಸೇರಿದ್ದಾರೆ.

ಮಗನೊಂದಿಗೆ ಸಂಭ್ರಮಾಚರಣೆ

ಟಿ20 ವಿಶ್ವಕಪ್ ಗೆದ್ದ ನಂತರ ತಮ್ಮ ಮನೆಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಈ ಟಿ20 ವಿಶ್ವಕಪ್ ವಿಜಯೋತ್ಸವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿದ್ದಾರೆ. ಈ ಆಚರಣೆಯ ಫೋಟೋಗಳನ್ನು ಹಾರ್ದಿಕ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಮಗ ಅಗಸ್ತ್ಯ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಮಡದಿ ನತಾಶಾ ಮಾತ್ರ ಕಾಣಿಸಿಕೊಂಡಿಲ್ಲ.

ನಿನಗಾಗಿ ಮಾತ್ರ ಮಾಡುತ್ತೇನೆ: ಪಾಂಡ್ಯ

ಮಗನೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪಾಂಡ್ಯ, ‘ನನ್ನ 1! ನಾನು ಏನೇ ಮಾಡಿದರೂ ನಿನಗಾಗಿ ಮಾತ್ರ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಫೋಟೋಗಳಲ್ಲಿ ಹಾರ್ದಿಕ್ ಪತ್ನಿ ನತಾಶಾ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಇವರಿಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿರುವ ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ಸಿಕ್ಕಂತಾಗಿದೆ. ಹಾಗೆಯೇ ಮತ್ತೊಮ್ಮೆ ಅವರ ವಿಚ್ಛೇದನದ ವದಂತಿ ಮುನ್ನಲೆಗೆ ಬಂದಿದೆ.

ಟಿ20 ವಿಶ್ವಕಪ್‌ನಲ್ಲಿ ದಿಟ್ಟ ಪ್ರದರ್ಶನ

ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ ಬ್ಯಾಟ್​ನಿಂದ 144 ರನ್ ಕಲೆಹಾಕಿದ ಪಾಂಡ್ಯ ಬೌಲಿಂಗ್​ನಲ್ಲಿ 11 ವಿಕೆಟ್ ಪಡೆದರು. ಫೈನಲ್ ಪಂದ್ಯದಲ್ಲೂ ತಮ್ಮ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಮೂರು ಓವರ್​ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ಇದಲ್ಲದೇ ಕೊನೆಯ ಓವರ್​ನಲ್ಲಿ 16 ರನ್ ಡಿಫೆಂಡ್ ಮಾಡಿದ್ದರು. ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಪಾಂಡ್ಯ, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಬಹುಮಾನ ಪಡೆದಿದ್ದು, ಟಿ20 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ