IND vs ZIM 4th T20 Highlights: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ

ಪೃಥ್ವಿಶಂಕರ
|

Updated on:Jul 13, 2024 | 7:54 PM

India vs Zimbabwe 4th T20I Highlights in Kannada: ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಜೇಯ ಮುನ್ನಡೆ ಸಾಧಿಸುವ ಇರಾದೆಯಲ್ಲಿದ್ದರೆ, ಇತ್ತ ಆತಿಥೇಯ ಜಿಂಬಾಬ್ವೆ ತಂಡ ಪಂದ್ಯವನ್ನು ಗೆದ್ದು, ಸರಣಿಯನ್ನು ಜೀವಂತವಾಗಿರಿಸಲು ಎದುರು ನೋಡುತ್ತಿದೆ.

IND vs ZIM 4th T20 Highlights: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ
ಭಾರತ- ಜಿಂಬಾಬ್ವೆ

ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯವಾಗಿ ಗೆದ್ದು ಪಂದ್ಯವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯನ್ನೂ ವಶಪಡಿಸಿಕೊಂಡಿದೆ. ಯಶಸ್ವಿ ಜೈಸ್ವಾಲ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಹೀರೋ ಎನಿಸಿಕೊಂಡಿದ್ದು, ಅಜೇಯ 93 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

LIVE NEWS & UPDATES

The liveblog has ended.
  • 13 Jul 2024 07:33 PM (IST)

    IND vs ZIM Live Score: ಭಾರತಕ್ಕೆ ಸರಣಿ

    ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ.

  • 13 Jul 2024 07:32 PM (IST)

    IND vs ZIM Live Score: 10 ವಿಕೆಟ್ ಜಯ

    ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿದೆ.

  • 13 Jul 2024 07:25 PM (IST)

    IND vs ZIM Live Score: 18 ರನ್‌ಗಳ ಅಗತ್ಯ

    ಭಾರತ ಗೆಲ್ಲಲು 18 ರನ್‌ಗಳ ಅಗತ್ಯವಿದೆ. ಜೈಸ್ವಾಲ್ ಮತ್ತು ಗಿಲ್ ಬಲಿಷ್ಠ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  • 13 Jul 2024 07:09 PM (IST)

    IND vs ZIM Live Score: ಜೈಸ್ವಾಲ್ ಅರ್ಧಶತಕ

    ಯಶಸ್ವಿ ಜೈಸ್ವಾಲ್ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟಿ20 ವೃತ್ತಿಜೀವನದಲ್ಲಿ ಅವರ 5ನೇ ಅರ್ಧಶತಕವಾಗಿದೆ.

  • 13 Jul 2024 06:48 PM (IST)

    IND vs ZIM Live Score: ಪವರ್‌ಪ್ಲೇ ಮುಗಿದಿದೆ

    ಟೀಂ ಇಂಡಿಯಾ ಇನ್ನಿಂಗ್ಸ್‌ನ ಪವರ್‌ಪ್ಲೇ ಮುಗಿದಿದೆ. ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ 6 ಓವರ್‌ಗಳಲ್ಲಿ ಇಬ್ಬರು ಆಟಗಾರರ ನಡುವೆ ಮೊದಲ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ಇತ್ತು. ಯಶಸ್ವಿ ಜೈಸ್ವಾಲ್ 47 ರನ್ ಹಾಗೂ ಶುಭಮನ್ ಗಿಲ್ 13 ರನ್ ಗಳಿಸಿ ಆಡುತ್ತಿದ್ದಾರೆ.

  • 13 Jul 2024 06:46 PM (IST)

    IND vs ZIM Live Score: 50 ರನ್ ಪೂರ್ಣ

    ಭಾರತ ತಂಡ ಮೊದಲ 4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 40 ರನ್ ಹಾಗೂ ಶುಭಮನ್ ಗಿಲ್ 12 ರನ್ ಗಳಿಸಿ ಆಡುತ್ತಿದ್ದಾರೆ.

  • 13 Jul 2024 06:45 PM (IST)

    IND vs ZIM Live Score: ವೇಗದ ಆರಂಭ

    ಟೀಂ ಇಂಡಿಯಾದ ಆರಂಭಿಕರಾದ ಶುಭ್‌ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ವೇಗದ ಆರಂಭ ಮಾಡಿದ್ದಾರೆ. ಮೊದಲ 2 ಓವರ್‌ಗಳ ನಂತರ ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ.

  • 13 Jul 2024 06:15 PM (IST)

    IND vs ZIM Live Score: 153 ರನ್‌ಗಳ ಗುರಿ

    ಭಾರತ ಮತ್ತು ಜಿಂಬಾಬ್ವೆ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 152 ರನ್ ಗಳಿಸಿತು.

  • 13 Jul 2024 06:03 PM (IST)

    IND vs ZIM Live Score: 6ನೇ ವಿಕೆಟ್

    ಜಿಂಬಾಬ್ವೆ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಖಲೀಲ್ ಅಹ್ಮದ್ 12 ರನ್ ಗಳಿಸಿದ್ದ ಮೇಯರ್ಸ್ ಅವರನ್ನು ಕಟ್ ಮತ್ತು ಬೌಲ್ಡ್ ಮಾಡಿದರು.

  • 13 Jul 2024 05:59 PM (IST)

    IND vs ZIM Live Score: ರಾಝಾ ಔಟ್

    ಜಿಂಬಾಬ್ವೆ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿದೆ. ಸಿಕಂದರ್ ರಜಾ ರೂಪದಲ್ಲಿ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

  • 13 Jul 2024 05:59 PM (IST)

    IND vs ZIM Live Score: 18 ಓವರ್ ಅಂತ್ಯ

    ಜಿಂಬಾಬ್ವೆ 18 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿದೆ. ಸಿಕಂದರ್ ರಜಾ 44 ರನ್ ಮತ್ತು ಮೇಯರ್ಸ್ 11 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

  • 13 Jul 2024 05:42 PM (IST)

    IND vs ZIM Live Score: ಕ್ಯಾಂಪ್ಬೆಲ್ ರನ್ ಔಟ್

    ಆತಿಥೇಯ ತಂಡವು 96 ರನ್‌ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ರವಿ ಬಿಷ್ಣೋಯ್ ತಮ್ಮದೇ ಓವರ್‌ನಲ್ಲಿ ಕ್ಯಾಂಪ್‌ಬೆಲ್ ಅವರನ್ನು ರನ್ ಔಟ್ ಮಾಡಿದರು. ಯೋನ್ ಮಾರಿಯಸ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 13 Jul 2024 05:38 PM (IST)

    IND vs ZIM Live Score: ಬೆನೆಟ್ ಔಟ್

    ಬ್ರಿಯಾನ್ ಬೆನೆಟ್ ರೂಪದಲ್ಲಿ ಜಿಂಬಾಬ್ವೆ ಮೂರನೇ ವಿಕೆಟ್ ಕಳೆದುಕೊಂಡಿದೆ. ಬೆನೆಟ್ 9 ರನ್ ಬಾರಿಸಿ ವಾಷಿಂಗ್ಟನ್ ಸುಂದರ್​ಗೆ ಬಲಿಯಾದರು. ಕ್ಯಾಂಪ್‌ಬೆಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 14 ಓವರ್‌ಗಳ ನಂತರ ಜಿಂಬಾಬ್ವೆ ಸ್ಕೋರ್ 93/3.

  • 13 Jul 2024 05:21 PM (IST)

    IND vs ZIM Live Score: ದುಬೆಗೆ ವಿಕೆಟ್

    ಶಿವಂ ದುಬೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 25 ರನ್ ಗಳಿಸಿದ್ದ ಮಾಧವೆರೆ ಅವರನ್ನು ಔಟ್ ಮಾಡಿದರು. ಇದೀಗ ಸಿಕಂದರ್ ರಜಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 13 Jul 2024 05:18 PM (IST)

    IND vs ZIM Live Score: ಮೊದಲ ವಿಕೆಟ್

    ಜಿಂಬಾಬ್ವೆಯ ಮೊದಲ ವಿಕೆಟ್ ಪತನಗೊಂಡಿದೆ. ಅಭಿಷೇಕ್ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ತಡಿವನಾಶೆ ಮರುಮಣಿ 32 ರನ್ ಗಳಿಸಿ ಔಟಾದರು.

  • 13 Jul 2024 05:02 PM (IST)

    IND vs ZIM Live Score: ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇ ಮುಗಿದಿದೆ. ಜಿಂಬಾಬ್ವೆಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೆಸ್ಲಿ ಮಾಧವೆರೆ ಮತ್ತು ತಡಿವಾನಾಶೆ ಮಾಧವೆರೆ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮೊದಲ ಆರು ಓವರ್‌ಗಳಲ್ಲಿ ಇಬ್ಬರ ನಡುವೆ 44 ರನ್‌ಗಳ ಜತೆಯಾಟವಿದೆ. ಆರು ಓವರ್‌ಗಳ ನಂತರ ಜಿಂಬಾಬ್ವೆ ಸ್ಕೋರ್ 44/0.

  • 13 Jul 2024 05:00 PM (IST)

    IND vs ZIM Live Score: ಸ್ಥಿರ ಆರಂಭ

    ಜಿಂಬಾಬ್ವೆ 4 ಓವರ್‌ಗಳಲ್ಲಿ 35 ರನ್ ಗಳಿಸಿದೆ. ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 17 ರನ್ ಹಾಗೂ ತಡಿವಾನಾಶೆ ಮರುಮನಿ 11 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 13 Jul 2024 04:50 PM (IST)

    IND vs ZIM Live Score: ಕ್ಯಾಚ್ ಕೈಬಿಟ್ಟ ದುಬೆ

    ಜಿಂಬಾಬ್ವೆಯ ಆರಂಭಿಕ ಆಟಗಾರ ತಡಿವಾನಾಶೆ ಮರುಮಾನಿ ಖಲೀಲ್ ಅಹ್ಮದ್ ಅವರ ಎಸೆತದಲ್ಲಿ ಮಿಡ್ ಆನ್‌ನಲ್ಲಿ ಗಾಳಿಯಲ್ಲಿ ಶಾಟ್ ಆಡಿದರು. ಇದು ಶಿವಂ ದುಬೆ ಬಳಿ ಹೋಯಿತು ಆದರೆ ದುಬೆ ಅದನ್ನು ಕೈಬಿಟ್ಟರು.

  • 13 Jul 2024 04:39 PM (IST)

    IND vs ZIM Live Score: ಜಿಂಬಾಬ್ವೆ ಇನ್ನಿಂಗ್ಸ್ ಆರಂಭ

    ಜಿಂಬಾಬ್ವೆ ಇನ್ನಿಂಗ್ಸ್ ಆರಂಭವಾಗಿದೆ. ಮಾಧವೆರೆ ಮತ್ತು ಮರುಮಣಿ ಆರಂಭಿಕರಾಗಿ ಕ್ರೀಸ್‌ಗೆ ಬಂದಿದ್ದಾರೆ. ಭಾರತದ ಪರ ಖಲೀಲ್ ಅಹ್ಮದ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.

  • 13 Jul 2024 04:19 PM (IST)

    IND vs ZIM Live Score: ಜಿಂಬಾಬ್ವೆ ತಂಡ

    ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಾಝಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಫರಾಜ್ ಅಕ್ರಂ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ರಿಚರ್ಡ್ ನ್ಗರ್ವಾ, ಬ್ಲೆಸ್ಸಿಂಗ್ ಮುಜರಾಬಾನಿ, ಟೆಂಡೈ ಚಟಾರಾ.

  • 13 Jul 2024 04:15 PM (IST)

    IND vs ZIM Live Score: ಭಾರತ ತಂಡ

    ಯಶಸ್ವಿ ಜೈಸ್ವಾಲ್, ಶುಭಮ್ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾದ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಖಲೀಲ್ ಅಹ್ಮದ್.

  • 13 Jul 2024 04:06 PM (IST)

    IND vs ZIM Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 13 Jul 2024 03:46 PM (IST)

    IND vs ZIM Live Score: ಹರಾರೆ ಹವಾಮಾನ

    ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿದೆ. ಆಕ್ಯುವೆದರ್ ವರದಿಯ ಪ್ರಕಾರ, ಆ ಸಮಯದಲ್ಲಿ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 9 ಕಿಲೋಮೀಟರ್ ಆಗಿರಬಹುದು.ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ.

  • Published On - Jul 13,2024 3:45 PM

    Follow us