ಆಗಸ್ಟ್ 18 ರಿಂದ ಭಾರತ-ಜಿಂಬಾಬ್ವೆ (India vs Zimbabwe) ನಡುವಣ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಈ ಸರಣಿಯಿಂದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಹೀಗಾಗಿ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದಾರೆ. ಮುಂಬರುವ ಏಷ್ಯಾಕಪ್ ಹಿನ್ನೆಲೆಯಲ್ಲಿ ಈ ಸರಣಿಯು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಮಹತ್ವದಾಗಿ ಪರಿಣಮಿಸಿದೆ. ಅತ್ತ ಜಿಂಬಾಬ್ವೆ ಬಾಂಗ್ಲಾದೇಶ ತಂಡವನ್ನು ಮಣಿಸಿ ಹೊಸ ಹುರುಪಿನಲ್ಲಿದೆ. ಹೀಗಾಗಿ ಉಭಯ ತಂಡಗಳಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಾಗ್ಯೂ ಜಿಂಬಾಬ್ವೆ ತಂಡವನ್ನು ಭಾರತ ಹಗುರವಾಗಿ ಪರಿಗಣಿಸಬಾರದು ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಏಕೆಂದರೆ ಈ ಹಿಂದೆ ಭಾರತದ ವಿರುದ್ದ ಏಕದಿನ ಸರಣಿ ಗೆದ್ದ ಇತಿಹಾಸ ಜಿಂಬಾಬ್ವೆ ತಂಡಕ್ಕಿದೆ. ಹೀಗಾಗಿ ಕೆಎಲ್ ರಾಹುಲ್ ಪಡೆಯನ್ನು ಮಣಿಸುವ ಆತ್ಮ ವಿಶ್ವಾಸದಲ್ಲೇ ಜಿಂಬಾಬ್ವೆ ತಂಡದ ಯುವ ತರುಣರು ಮೈದಾನಕ್ಕಿಳಿಯಲಿದ್ದಾರೆ.
ಇದಾಗ್ಯೂ ಜಿಂಬಾಬ್ವೆ ವಿರುದ್ದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ಅಂದರೆ ಜಿಂಬಾಬ್ವೆ ವಿರುದ್ದ ಭಾರತ ಇದುವರೆಗೆ 9 ಏಕದಿನ ಸರಣಿಗಳನ್ನು ಆಡಿದೆ. ಇದರಲ್ಲಿ ಅತೀ ಹೆಚ್ಚು ಬಾರಿ ಗೆದ್ದಿದ್ದು ಯಾರು? ಅಂದಿನ ನಾಯಕ ಯಾರು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
ಜಿಂಬಾಬ್ವೆ ಸರಣಿಗಳ ಇತಿಹಾಸ:
ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಭಾರತ ತಂಡವು ಜಿಂಬಾಬ್ವೆ ವಿರುದ್ದ ಸರಣಿ ಆಡಲು ಸಜ್ಜಾಗಿದೆ. ಅತ್ತ ಬಾಂಗ್ಲಾದೇಶ್ ವಿರುದ್ದ ಏಕದಿನ ಸರಣಿ ಗೆದ್ದಿರುವ ಜಿಂಬಾಬ್ವೆ ಭಾರತಕ್ಕೂ ಕಠಿಣ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.
ಜಿಂಬಾಬ್ವೆ ವಿರುದ್ದ ಭಾರತ ಯಾಕೆ ಸರಣಿ ಆಡುತ್ತಿದೆ?
ಮೇಲ್ನೋಟಕ್ಕೆ ಜಿಂಬಾಬ್ವೆ ಐಸಿಸಿ ಪಾಯಿಂಟ್ ಟೇಬಲ್ನಲ್ಲಿ ಕೆಳ ಹಂತದಲ್ಲಿರುವ ತಂಡ. ಅದರಲ್ಲೂ ಭಾರತದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಇತ್ತ ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಉತ್ಸುಕರಾಗಿಲ್ಲ. ಇದಾಗ್ಯೂ ಬಿಸಿಸಿಐ ಯಾಕೆ ಜಿಂಬಾಬ್ವೆ ವಿರುದ್ದ ಸರಣಿ ಆಯೋಜಿಸುತ್ತಿದೆ ಎಂಬ ಪ್ರಶ್ನೆಯೊಂದು ಮೂಡುತ್ತದೆ. ಇದಕ್ಕೆ ಎರಡು ಉತ್ತರಗಳನ್ನು ನೀಡಬಹುದು.
1- ಭಾರತದಂತಹ ಬಲಿಷ್ಠ ತಂಡದ ವಿರುದ್ದ ಜಿಂಬಾಬ್ವೆ ಸರಣಿ ಆಡುವುದರಿಂದ ಇಲ್ಲಿನ ಕ್ರಿಕೆಟ್ ಬೋರ್ಡ್ ಆರ್ಥಿಕ ಲಾಭ ಪಡೆದುಕೊಳ್ಳುತ್ತದೆ. ಅಂದರೆ ಒಂದು ಸರಣಿ ಆಯೋಜಿಸುವುದರಿಂದ ಟಿವಿ ರೈಟ್ಸ್ ಹಾಗೂ ಜಾಹೀರಾತಿನ ಮೂಲಕ ಕ್ರಿಕೆಟ್ ಮಂಡಳಿ ಒಂದಷ್ಟು ಲಾಭ ಪಡೆದುಕೊಳ್ಳುತ್ತದೆ. ಪ್ರಸ್ತುತ ಸಂಕಷ್ಟದಲ್ಲಿರುವ ಜಿಂಬಾಬ್ವೆಗೆ ಆರ್ಥಿಕ ಪುನಶ್ಚೇತನಕ್ಕೆ ಟೀಮ್ ಇಂಡಿಯಾದಂತಹ ಬಲಿಷ್ಠ ತಂಡದ ವಿರುದ್ದದ ಸರಣಿ ಅನಿವಾರ್ಯ. ಈ ಒಂದು ಕಾರಣದಿಂದ ಜಿಂಬಾಬ್ವೆ ನೆರವಿಗೆ ಬಿಸಿಸಿಐ ಮುಂದಾಗಿದೆ ಎನ್ನಬಹುದು.
2- ಐಸಿಸಿ ನಿಯಮದ ಪ್ರಕಾರ ಮುಂಬರುವ ಏಕದಿನ ವಿಶ್ವಕಪ್ಗೆ ಪ್ರತಿ ತಂಡಗಳು ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಟೇಬಲ್ನಂತೆ ಅರ್ಹತೆ ಪಡೆಯಲಿದೆ. ಈ ಪಟ್ಟಿಯಲ್ಲಿ ಒಟ್ಟು 13 ತಂಡಗಳಿವೆ. ಇದರಲ್ಲಿ ಜಿಂಬಾಬ್ವೆ ಕೂಡ ಒಂದು. ಹೀಗಾಗಿ ಈ ತಂಡಗಳ ವಿರುದ್ದ ಭಾರತ ಕೂಡ ಏಕದಿನ ಸರಣಿ ಆಡಬೇಕಿದೆ. ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಟೇಬಲ್ನಲ್ಲಿ 8 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ 2023 ರ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಈ ಪಟ್ಟಿಯಲ್ಲಿ ಭಾರತಕ್ಕೆ ಎದುರಾಳಿಯಾಗಿ ಸಿಕ್ಕಿರುವ ಜಿಂಬಾಬ್ವೆ ವಿರುದ್ದ ಸರಣಿ ಆಡಬೇಕಿರುವುದು ಅನಿವಾರ್ಯ. ಈ ಎರಡು ಕಾರಣಗಳಿಂದ ಬಿಸಿಸಿಐ ಜಿಂಬಾಬ್ವೆ ವಿರುದ್ದ 6 ವರ್ಷಗಳ ಬಳಿಕ ಸರಣಿ ಆಡಲು ಮುಂದಾಗಿದೆ.