2.5 ಓವರ್ಗಳಲ್ಲಿ ಮುಗಿದ ಪಂದ್ಯ: ಭಾರತಕ್ಕೆ ಭರ್ಜರಿ ಜಯ
ICC Under 19 Womens T20 World Cup 2025: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವೈಷ್ಣವಿ ಶರ್ಮಾ 4 ಓವರ್ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಭರ್ಜರಿ ಬೌಲಿಂಗ್ನೊಂದಿಗೆ ಈ ಪಂದ್ಯದಲ್ಲಿ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ.
ಕೌಲಾಲಂಪುರ್ನ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನ 16ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮಲೇಷ್ಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ನಿಕಿ ಪ್ರಸಾದ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮಲೇಷ್ಯಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಭಾರತೀಯ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಮಲೇಷ್ಯಾ ಬ್ಯಾಟರ್ಗಳು ಪರದಾಡಿದರು. ಪರಿಣಾಮ ಪವರ್ಪ್ಲೇ ಮುಗಿಯುವ ಮುನ್ನವೇ ಕೇವಲ 22 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಆ ಬಳಿಕ ಬಂದ ಬ್ಯಾಟರ್ಗಳನ್ನು ಬಂದ ವೇಗದಲ್ಲೇ ಪೆವಿಲಿಯನ್ಗೆ ಕಳುಹಿಸುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಪರಿಣಾಮ 14.3 ಓವರ್ಗಳಲ್ಲಿ ಮಲೇಷ್ಯಾ ತಂಡವು ಕೇವಲ 31 ರನ್ಗಳಿಸಿ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ವೈಷ್ಣವಿ ಶರ್ಮಾ 4 ಓವರ್ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಆಯುಷಿ ಶುಕ್ಲಾ 3.3 ಓವರ್ಗಳಲ್ಲಿ 8 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇನ್ನು ಜೋಶಿತಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
For her exceptional bowling performance including a hat-trick and a five wicket haul, Vaishnavi Sharma is the Player of the Match 👏 🏆
Scorecard ▶️ https://t.co/3K1CCzgAYK#TeamIndia | #MASvIND | #U19WorldCup pic.twitter.com/Wu1IaGRQC9
— BCCI Women (@BCCIWomen) January 21, 2025
17 ಎಸೆತಗಳಲ್ಲಿ ಮುಗಿದ ಪಂದ್ಯ:
32 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಗೊಂಗಡಿ ತ್ರಿಷಾ 12 ಎಸೆತಗಳಲ್ಲಿ 5 ಫೋರ್ಗಳೊಂದಿಗೆ 27 ರನ್ ಬಾರಿಸಿದರೆ, ಕಮಿಲಿನಿ 4 ರನ್ ಕಲೆಹಾಕಿದರು. ಈ ಮೂಲಕ ಭಾರತ ತಂಡವು 2.5 ಓವರ್ಗಳಲ್ಲಿ 32 ರನ್ ಕಲೆಹಾಕಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
ಭಾರತ ಮಹಿಳಾ U19 ಪ್ಲೇಯಿಂಗ್ 11: ಗೊಂಗಡಿ ತ್ರಿಷಾ , ಜಿ ಕಮಲಿನಿ (ವಿಕೆಟ್ ಕೀಪರ್) , ಸಾನಿಕಾ ಚಲ್ಕೆ , ನಿಕಿ ಪ್ರಸಾದ್ ( ನಾಯಕಿ ) , ಭಾವಿಕಾ ಅಹಿರೆ , ಮಿಥಿಲಾ ವಿನೋದ್ , ಆಯುಷಿ ಶುಕ್ಲಾ , ಜೋಶಿತಾ ವಿಜೆ , ಶಬ್ನಮ್ ಶಕಿಲ್ , ಪರುಣಿಕಾ ಸಿಸೋಡಿಯಾ , ವೈಷ್ಣವಿ ಶರ್ಮಾ.
ಇದನ್ನೂ ಓದಿ: 26 ಸಿಕ್ಸ್, 17 ಫೋರ್: RCBಯಿಂದ ಹೊರಬಿದ್ದ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಸಿಡಿಲಬ್ಬರ
ಮಲೇಷ್ಯಾ ಮಹಿಳಾ U19 ಪ್ಲೇಯಿಂಗ್ 11: ನೂರ್ ಅಲಿಯಾ ಹೈರುನ್ (ವಿಕೆಟ್ ಕೀಪರ್) , ನುನಿ ಫರಿನಿ ಸಫ್ರಿ , ಹುಸ್ನಾ , ನೂರ್ ದಾನಿಯಾ ಸ್ಯುಹದಾ (ನಾಯಕಿ) , ನೂರ್ ಇಜ್ಜತುಲ್ ಸೈಫಿಕಾ , ನೂರಿಮಾನ್ ಹಿದಾಯ , ಸುಬಿಕಾ ಮಣಿವಣ್ಣನ್ , ನೂರ್ ಐನ್ ಬಿಂಟಿ ರೋಸ್ಲಾನ್ , ನೂರ್ ಇಸ್ಮಾ ದನಿಯಾ , ಸಿತಿ ಮರ್ಸಿಯಾ ಕ್ವಿಸ್ಟ್.