
ಪ್ರಸ್ತುತ ಭಾರತದಲ್ಲಿ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ನಡೆಯುತ್ತಿದೆ. ಹೀಗಾಗಿ ಭಾರತ ಮಹಿಳಾ ತಂಡದ ಎಲ್ಲಾ ಆಟಗಾರ್ತಿಯರು ಈ ಮಿನಿ ಟಿ20 ಸಮರದಲ್ಲಿ ನಿರತರಾಗಿದ್ದಾರೆ. ಆ ಬಳಿಕ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಪಡೆ ಏಕದಿನ, ಟಿ20 ಮತ್ತು ಏಕೈಕ ಟೆಸ್ಟ್ ಪಂದ್ಯದ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟೀಂ ಇಂಡಿಯಾದ ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ 2025 ರಲ್ಲೇ ಪ್ರಕಟಿಸಿತ್ತು. ಈ 3 ಸರಣಿಗಳಿಗಾಗಿ ಭಾರತ, ಆಸ್ಟ್ರೇಲಿಯಾ ಪ್ರವಾಸ (India vs Australia) ಕೈಗೊಳ್ಳಲಿದ್ದು, ಅಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ20 ಹಾಗೂ ಏಕೈಕ 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಲಿದೆ.
ಈ ಪ್ರವಾಸವು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಪಂದ್ಯ ಫೆಬ್ರವರಿ 15 ರಂದು ಸಿಡ್ನಿಯಲ್ಲಿ ನಡೆಯಲಿದೆ. ಎರಡನೇ ಟಿ20ಪಂದ್ಯ ಫೆಬ್ರವರಿ 19 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಫೆಬ್ರವರಿ 21 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 24 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 27 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಅಂತಿಮವಾಗಿ ಮಾರ್ಚ್ 6 ರಿಂದ 9 ರವರೆಗೆ ಏಕೈಕ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ.
3️⃣ T20Is
3️⃣ ODIs
1️⃣ TestThe schedule for #TeamIndia's tour of Australia is here 👍 👍#AUSvIND pic.twitter.com/yUEhYDhkGY
— BCCI Women (@BCCIWomen) March 31, 2025
ಆಸ್ಟ್ರೇಲಿಯಾ ಪ್ರವಾಸವು ಟೀಂ ಇಂಡಿಯಾಗೆ ಖಂಡಿತವಾಗಿಯೂ ಸುಲಭವಲ್ಲ. ಏಕೆಂದರೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ದಾಖಲೆಯು ಏಕದಿನ ಮತ್ತು ಟಿ20 ಎರಡೂ ಸ್ವರೂಪಗಳಲ್ಲಿ ಅತ್ಯಂತ ಕಳಪೆಯಾಗಿದೆ. ಮೊದಲನೆಯದಾಗಿ, ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಆಡಿದ 19 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು, 15 ಪಂದ್ಯಗಳಲ್ಲಿ ಸೋತಿದೆ. ಇದು ಮಾತ್ರವಲ್ಲದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಇದುವರೆಗೆ ಏಕದಿನ ಸರಣಿಯನ್ನು ಗೆದ್ದಿಲ್ಲ. ಇನ್ನು ಟಿ20 ಮಾದರಿಯಲ್ಲಿ, ಭಾರತ 12 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಏಳು ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಭಾರತ ಆಸ್ಟ್ರೇಲಿಯಾದಲ್ಲಿ ಒಂದು ಟಿ20 ಸರಣಿಯನ್ನು ಗೆದ್ದಿದ್ದು, ಆ ಗೆಲುವು 10 ವರ್ಷಗಳ ಹಿಂದೆ ಅಂದರೆ 2016 ರಲ್ಲಿ ಬಂದಿತ್ತು. ಈ ಬಾರಿ ಏನಾಗುತ್ತದೆ ಎಂದು ನೋಡುವುದು ಆಸಕ್ತಿದಾಯಕವಾಗಿರುತ್ತದೆ.
ಈ ಭಾರತ-ಆಸ್ಟ್ರೇಲಿಯಾ ಸರಣಿಯು ಅಲಿಸಾ ಹೀಲಿ ಅವರ ಕೊನೆಯ ಸರಣಿಯಾಗಲಿದೆ. ಈ ಸರಣಿಯ ನಂತರ ಅವರು ನಿವೃತ್ತರಾಗಲಿದ್ದಾರೆ. ಈ ಲೆಜೆಂಡರಿ ವಿಕೆಟ್ ಕೀಪರ್-ಬ್ಯಾಟರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. 35 ವರ್ಷ ವಯಸ್ಸಿನ ಅವರು 123 ಏಕದಿನ ಪಂದ್ಯಗಳಲ್ಲಿ 35.98 ಸರಾಸರಿಯಲ್ಲಿ 3,563 ರನ್ ಗಳಿಸಿದ್ದಾರೆ, ಇದರಲ್ಲಿ ಏಳು ಶತಕಗಳು ಸೇರಿವೆ. ಹಾಗೆಯೇ ಟಿ20ಮಾದರಿಯಲ್ಲಿ 25.45 ಸರಾಸರಿಯಲ್ಲಿ 3,054 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Fri, 16 January 26