Praveen Kumar: ಭಾರತೀಯರೂ ಬಾಲ್ ಟ್ಯಾಂಪರಿಂಗ್ ಮಾಡ್ತಾರೆ: ಪ್ರವೀಣ್ ಕುಮಾರ್ ಶಾಕಿಂಗ್ ಹೇಳಿಕೆ

Praveen Kumar: 2008 ಮತ್ತು 2010 ರಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರವೀಣ್ ಕುಮಾರ್ 2011 ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರಿಗೆ ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ.

Praveen Kumar: ಭಾರತೀಯರೂ ಬಾಲ್ ಟ್ಯಾಂಪರಿಂಗ್ ಮಾಡ್ತಾರೆ: ಪ್ರವೀಣ್ ಕುಮಾರ್ ಶಾಕಿಂಗ್ ಹೇಳಿಕೆ
Praveen Kumar
Edited By:

Updated on: Jan 09, 2024 | 11:29 AM

ಬಾಲ್ ಟ್ಯಾಂಪರಿಂಗ್ ಕುರಿತು ಟೀಮ್ ಇಂಡಿಯಾ (Team India) ಮಾಜಿ ವೇಗಿ ಪ್ರವೀಣ್ ಕುಮಾರ್ (Praveen Kumar) ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಭಾರತ ಸೇರಿದಂತೆ ಎಲ್ಲಾ ತಂಡಗಳ ಬೌಲರ್​ಗಳು ಚೆಂಡನ್ನು ವಿರೂಪಗೊಳಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ  ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ 2018 ರ ಸೌತ್​ ಆಫ್ರಿಕಾ ಪ್ರವಾಸದ ಸಮಯದಲ್ಲಿ ಚೆಂಡು ವಿರೂಪಗೊಳಿಸಿದ್ದರು. ಈ ಮೋಸದಾಟದ ಬೆಳಕಿಗೆ ಬರುತ್ತಿದ್ದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಇಬ್ಬರನ್ನು 12 ತಿಂಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿದ್ದರು.

ಇದೀಗ ಕ್ರಿಕೆಟ್ ಅಂಗಳದಲ್ಲಿ ಬಾಲ್ ಟ್ಯಾಂಪರಿಂಗ್ ಸಾಮಾನ್ಯ ವಿಷಯ ಎಂದು ಪ್ರವೀಣ್ ಕುಮಾರ್ ಹೇಳಿದ್ದಾರೆ. ಭಾರತೀಯ ಬೌಲರ್​ಗಳು ಸೇರಿದಂತೆ ಎಲ್ಲರೂ ಚೆಂಡನ್ನು ವಿರೂಪಗೊಳಿಸಿ ಸ್ವಿಂಗ್ ತಂತ್ರಗಳನ್ನು ಪ್ರಯೋಗಿಸುತ್ತಾರೆ ಎಂದಿದ್ದಾರೆ.

ಖಾಸಗಿ ಚಾನೆಲ್​ವೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರವೀಣ್ ಕುಮಾರ್, ಬಾಲ್ ಟ್ಯಾಂಪರಿಂಗ್ ಎಲ್ಲಾ ತಂಡಗಳು ಸ್ಪಲ್ಪ ಮಟ್ಟಿಗೆ ಮಾಡುತ್ತಾರೆ. ಇದನ್ನು ಪಾಕಿಸ್ತಾನ್ ಬೌಲರ್​ಗಳು ಹೆಚ್ಚು ಮಾಡುತ್ತಿದ್ದರು. ಬಾಲ್ ಟ್ಯಾಂಪರಿಂಗ್ ಮಾಡಿದರೂ, ಆ ಕೌಶಲ್ಯವನ್ನು ಹೇಗೆ ಬಳಸಬೇಕೆಂದು ತಿಳಿದಿರಬೇಕು. ನಾನು ಚೆಂಡನ್ನು ಸ್ಕ್ರಾಚ್ ಮಾಡಿ ಯಾರಿಗಾದರೂ ಕೊಟ್ಟರೆ, ಅದನ್ನು ರಿವರ್ಸ್-ಸ್ವಿಂಗ್ ಮಾಡುವ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಇದೀಗ ಬಾಲ್ ಟ್ಯಾಂಪರಿಂಗ್ ಕುರಿತಾಗಿ ಪ್ರವೀಣ್ ಕುಮಾರ್ ನೀಡಿರುವ ಹೇಳಿಕೆಯು ಚರ್ಚೆಗೆ ಕಾರಣವಾಗಿದ್ದು, ಮತ್ತೊಮ್ಮೆ ಚೆಂಡು ವಿರೂಪದ ವಿಷಯಗಳು ಮುನ್ನಲೆಗೆ ಬಂದಿದೆ. ಹೀಗಾಗಿ ಈ ವಿಚಾರವನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.

ಪ್ರವೀಣ್ ಕುಮಾರ್ ವೃತ್ತಿಜೀವನ:

ಟೀಮ್ ಇಂಡಿಯಾ ಪರ 2007 ರಲ್ಲಿ ಪಾದಾರ್ಪಣೆ ಮಾಡಿದ್ದ ಪ್ರವೀಣ್ ಕುಮಾರ್ 68 ಏಕದಿನ, 10 ಟಿ20 ಮತ್ತು 6 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕ್ರಮವಾಗಿ 77, 8 ಮತ್ತು 27 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

ಇದನ್ನೂ ಓದಿ: Team India: ಪ್ರತಿಷ್ಠಿತ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಶಾಕ್..!

2008 ಮತ್ತು 2010 ರಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದ ಪ್ರವೀಣ್ ಕುಮಾರ್ 2011 ರ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಅವರಿಗೆ ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ 2012 ರಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 2018 ರಲ್ಲಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.