IND vs AFG T20I: ಟಿ20ಗೆ ರೋಹಿತ್-ಕೊಹ್ಲಿ ಎಂಟ್ರಿ: ಟೀಮ್ ಇಂಡಿಯಾದಲ್ಲಿ ಅಲ್ಲೋಲ-ಕಲ್ಲೋಲ: ಏನಾಗಿದೆ ನೋಡಿ
Rohit Sharma and Virat Kohli: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕರಾಗಿದ್ದಾರೆ. ಹೀಗಾಗಿ ಅವರು ಪ್ಲೇಯಿಂಗ್-11 ನಲ್ಲಿ ಕಾಣಿಸುವುದು ಖಚಿತ. ಅಂತೆಯೆ ವಿರಾಟ್ ಕೊಹ್ಲಿಯಂತಹ ಆಟಗಾರನನ್ನು ಕೈಬಿಡಲು ಸಾಧ್ಯವಿಲ್ಲ. ಇಬ್ಬರೂ ಆಡುವುದು ಖಚಿತವಾಗಿದೆ.

ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ 14 ತಿಂಗಳ ನಂತರ ಭಾರತಕ್ಕಾಗಿ ಟಿ20 ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ. ಹಿಟ್ಮ್ಯಾನ್ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್-2022 ಟೂರ್ನಿಯನ್ನು ಆಡಿತ್ತು. ಇದಾದ ಬಳಿಕ ಈ ಇಬ್ಬರೂ ಆಟಗಾರರು ಈವರೆಗೆ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ. ಇದೀಗ ಇಬ್ಬರೂ ಕಮ್ಬ್ಯಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಜನವರಿ 11 ರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಕ್ಕಾಗಿ ಆಯ್ಕೆಗಾರರು ಇಬ್ಬರನ್ನೂ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಇವರಿಬ್ಬರ ಆಗಮನದಿಂದ ಟೀಮ್ ಇಂಡಿಯಾದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ.
ಭಾರತ ಕೊನೆಯದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು. ಇದರಲ್ಲಿ ಆಡಿದ ಆಟಗಾರರೇ ಟೀಮ್ ಇಂಡಿಯಾದ ಖಾಯಂ ಟಿ20 ಸದಸ್ಯರು ಎಂದು ನಂಬಲಾಗಿತ್ತು. ಆದರೆ, ಆ ಪಂದ್ಯದಲ್ಲಿ ಆಡಿದ ಆಟಗಾರರ ಪೈಕಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಣಿಸುವುದು ಒಂದಿಬ್ಬರು ಮಾತ್ರ.
INDW vs AUSW: ತಂಡದ ಸೋಲಿಗೆ ಕನ್ನಡತಿಯನ್ನು ದೂರಿದ ಟೀಂ ಇಂಡಿಯಾ ನಾಯಕಿ! ನೆಟ್ಟಿಗರ ಆಕ್ರೋಶ
ಈ ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕರಾಗಿದ್ದಾರೆ. ಹೀಗಾಗಿ ಅವರು ಪ್ಲೇಯಿಂಗ್-11 ನಲ್ಲಿ ಕಾಣಿಸುವುದು ಖಚಿತ. ಅಂತೆಯೆ ವಿರಾಟ್ ಕೊಹ್ಲಿಯಂತಹ ಆಟಗಾರನನ್ನು ಕೈಬಿಡಲು ಸಾಧ್ಯವಿಲ್ಲ. ಇಬ್ಬರೂ ಆಡುವುದು ಖಚಿತವಾಗಿದೆ. ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇಬ್ಬರೂ ಅಫ್ಘಾನಿಸ್ತಾನ ವಿರುದ್ಧದ ಸರಣಿಗೂ ಆಯ್ಕೆಯಾಗಿದ್ದಾರೆ. ಹೀಗಾಗಿ ಜೈಸ್ವಾಲ್ ಅಥವಾ ಗಿಲ್ ಪೈಕಿ ಒಬ್ಬರಿಗೆ ಮಾತ್ರ ಅವಕಾಶ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿದ್ದರು. ಆದರೆ, ಅವರು ಈ ಸರಣಿಯಲ್ಲಿಲ್ಲ. ಅವರ ಬದಲಿಗೆ ಪ್ಲೇಯಿಂಗ್-11ರಲ್ಲಿ ಕೊಹ್ಲಿಯನ್ನು ಸೇರಿಸಿಕೊಳ್ಳಲಿದ್ದಾರೆ. ರಿಂಕು ಸಿಂಗ್ ಅಫ್ಘಾನ್ ವಿರುದ್ಧ ಆಡಬಹುದು. ಆದರೆ, ಟಿ20 ವಿಶ್ವಕಪ್ನಲ್ಲಿ ಇವರಿಗೆ ಸ್ಥಾನವಿಲ್ಲ. ಆ ಹೊತ್ತಿಗೆ ಜಡೇಜಾ-ಹಾರ್ದಿಕ್-ಸೂರ್ಯ ಫಿಟ್ ಆಗಲಿರುವ ಕಾರಣ ಜೊತೆಗೆ ಕೊಹ್ಲಿ-ರೋಹಿತ್ ಸ್ಥಾನ ಪಡೆಯುವ ಕಾರಣ ರಿಂಕು ಪ್ಲೇಯಿಂಗ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಅನುಮಾನ.
ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ಸರಣಿಯಲ್ಲಿದ್ದರು. ಆದರೆ, ಆಫ್ಘಾನ್ ಸರಣಿಯಲ್ಲಿ ಅವರಿಲ್ಲ. ಜಡೇಜಾ ಬದಲಿಗೆ ಆಫ್ ಸ್ಪಿನ್ನರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅಥವಾ ಅಕ್ಷರ್ ಪಟೇಲ್ ಆಡುವ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸಿರಾಜ್ ಬದಲಿಗೆ ಅವೇಶ್ ಖಾನ್ಗೆ ಅವಕಾಶ ಸಿಗಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ




