INDW vs AUSW: ತಂಡದ ಸೋಲಿಗೆ ಕನ್ನಡತಿಯನ್ನು ದೂರಿದ ಟೀಂ ಇಂಡಿಯಾ ನಾಯಕಿ! ನೆಟ್ಟಿಗರ ಆಕ್ರೋಶ
INDW vs AUSW: ಪಂದ್ಯದ ನಂತರ ಮಾತನಾಡಿದ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಸೋಲಿಗೆ ಯುವ ಬೌಲರ್ ಶ್ರೇಯಾಂಕಾ ಪಾಟೀಲ್ ಕಾರಣ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಸಿದರು. ಆದರೆ ಹರ್ಮನ್‌ಪ್ರೀತ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಭಾನುವಾರ ನಡೆದ ಭಾರತ ಮಹಿಳಾ ಪಡೆ ಹಾಗೂ ಆಸ್ಟ್ರೇಲಿಯಾ ಮಹಿಳಾ (India Women vs Australia Women) ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ ತಂಡ 6 ವಿಕೆಟ್ಗಳಿಂದ ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿದ್ದ ಹರ್ಮನ್ ಪಡೆ, ಎರಡನೇ ಟಿ20 ಪಂದ್ಯದಲ್ಲಿ ಕೊನೆಯವರೆಗೂ ಹೋರಾಡಿ ಕೊನೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಸೋಲಿನ ಭಾರವನ್ನು ಹೊರಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಭಾರತ, ಆಸ್ಟ್ರೇಲಿಯಾಕ್ಕೆ 131 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಕೊನೆಯವರೆಗೂ ವಿಜಯಲಕ್ಷ್ಮಿ ಗಗನ ಕುಸುಮವಾಗಿದ್ದಳು. ಆದರೆ 19ನೇ ಓವರ್‌ನಲ್ಲಿ ನಾಯಕಿ ತೆಗೆದುಕೊಂಡ ತೀರ್ಮಾನ ತಂಡದ ಸೋಲಿಗೆ ಕಾರಣವಾಯಿತು. ಆದರೆ ಪಂದ್ಯದ ನಂತರ ಮಾತನಾಡಿದ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಈ ಸೋಲಿಗೆ ಯುವ ಬೌಲರ್ ಶ್ರೇಯಾಂಕಾ ಪಾಟೀಲ್ (Shreyanka Patil) ಕಾರಣ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಸಿದರು. ಆದರೆ ಹರ್ಮನ್‌ಪ್ರೀತ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ವಾಸ್ತವವಾಗಿ ಆಸ್ಟ್ರೇಲಿಯಾ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 15 ರನ್‌ಗಳ ಅಗತ್ಯವಿತ್ತು. ಈ ವೇಳೆ ನಾಯಕಿ ಹರ್ಮನ್, ಯುವ ಆಟಗಾರ್ತಿ ಶ್ರೇಯಾಂಕ ಪಾಟೀಲ್ಗೆ ಹರ್ಮನ್ 19ನೇ ಓವರ್ ಬೌಲ್ ಮಾಡುವ ಜವಬ್ದಾರಿ ನೀಡಿದರು. ಆದರೆ ಈ ಓವರ್‌ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಿಟ್ಟುಕೊಟ್ಟ ಶ್ರೇಯಾಂಕ ದುಬಾರಿಯಾಗಿದಲ್ಲದೆ ತಂಡವನ್ನು ಸೋಲಿನ ದವಡೆಗೆ ತಳ್ಳಿದರು. ವಾಸ್ತವವಾಗಿ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಟಿಟಾಸ್ ಸಾದು ಅವರ ಇನ್ನೊಂದು ಓವರ್ ಬಾಕಿ ಇರುವಂತೆಯೇ ಹರ್ಮನ್, ಯುವ ಸ್ಪಿನ್ನರ್ಗೆ ಬೌಲಿಂಗ್ ಮಾಡುವ ಜವಬ್ದಾರಿ ನೀಡಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಪಂದ್ಯದ ಬಳಿಕ ಮಾತನಾಡಿದ ಹರ್ಮನ್ ಬೇರೆಯದ್ದೇ ಕಥೆ ಹೇಳಿದರು.
INDW vs AUSW: 100 ವಿಕೆಟ್, 1000 ರನ್! ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ
ಶ್ರೇಯಾಂಕ ರನ್ಗಳಿಗೆ ಕಡಿವಾಣ ಹಾಕಬೇಕಿತ್ತು- ಹರ್ಮನ್
ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್ನಲ್ಲಿ ಮಾತನಾಡಿದ ಹರ್ಮನ್, ನಾವು ಮೊದಲು ಬ್ಯಾಟ್ ಮಾಡಿ ಸ್ಕೋರ್ ಬೋರ್ಡ್ನಲ್ಲಿ ಕಡಿಮೆ ಸ್ಕೋರ್ ದಾಖಲಿಸಿದೇವು. ಆದರೂ ಪಂದ್ಯವನ್ನು ನಾವು 19ನೇ ಓವರ್ವರೆಗೂ ತಂದೆವು. ಆದರೆ 19ನೇ ಓವರ್‌ನಲ್ಲಿ ಶ್ರೇಯಾಂಕ್ ಪಾಟೀಲ್ ಬಿಗ್ ಶಾಟ್ ನೀಡದೆ, ರನ್ಗಳಿಗೆ ಕಡಿವಾಣ ಹಾಕಿದರೆ, ಭಾರತ ತಂಡ ಗೆಲ್ಲಬಹುದಿತ್ತು ಎಂದರು. ಹರ್ಮನ್ ಅವರ ಈ ಹೇಳಿಕೆ ನೆಟ್ಟಿಗರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.
ಹರ್ಮನ್‌ಪ್ರೀತ್ ಹೇಳಿಕೆಯ ನಂತರ, ಅವರ ಹೇಳಿಕೆಗ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, 21ರ ಹರೆಯದ ಯುವ ಬೌಲರ್‌ಗೆ ಸೋಲಿನ ಹೊಣೆ ಹೊರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ನಾಯಕಿಯಾಗಿರುವ ಹರ್ಮನ್‌ಪ್ರೀತ್ ಕೌರ್ ಅವರೇ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿರುವಾಗ ಅವರು ಯುವ ಆಟಗಾರ್ತಿಯನ್ನು ಹೇಗೆ ದೂಷಿಸುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಹರ್ಮನ್‌ಪ್ರೀತ್ 12 ಎಸೆತಗಳನ್ನು ಎದುರಿಸಿ ಆರು ರನ್‌ಗಳ ಬದಲು ಹೆಚ್ಚು ರನ್ ಗಳಿಸಿದ್ದರೆ, ಅದು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತಿತ್ತು ಎಂದು ಇನ್ನೊಬ್ಬ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
Wow.. what an inspirational leader calling out a 21 year old who has taken a wicket every game in her FIVE – yes just five – T20internationals. Someone in the Indian team management really needs to give Harmanpreet some media training and integrity. https://t.co/8kM60yeVOD
— Erika Morris (@ErikaMorris79) January 7, 2024
If you had scored better than 6 off 12, it would have made a huge difference to your team too, Harmanpreet.#INDvAUS https://t.co/WRdlBTV8UB
— CricBlog ✍ (@cric_blog) January 7, 2024
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ತಂಡದ ಯಾವುದೇ ಬ್ಯಾಟರ್ಗಳಿಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಅತ್ಯುತ್ತಮ ಸ್ಕೋರರ್ ಎನಿಸಿಕೊಂಡ ದೀಪ್ತಿ ಶರ್ಮಾ 27 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿದರು. ರಿಚಾ ಘೋಷ್ 19 ಎಸೆತಗಳಲ್ಲಿ 23 ರನ್ ಬಾರಿಸಿದರೆ, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 26 ಎಸೆತಗಳಲ್ಲಿ 23 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಅಲಿಸ್ಸಾ ಪೆರ್ರಿ ಅಜೇಯ 34 ಮತ್ತು ಫೋಬೆ ಲಿಚ್‌ಫೀಲ್ಡ್ ಅಜೇಯ 18 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರನ್ನು ಹೊರತುಪಡಿಸಿ, ಅಲಿಸ್ಸಾ ಹಿಲ್ಲಿ 26 ರನ್ ಮತ್ತು ಬೆತ್ ಮೂನಿ 20 ರನ್‌ಗಳ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
