IPL 2024: ಮೂವರು ಆಟಗಾರರ ಮೇಲಿನ ನಿರ್ಬಂಧ ತೆರವು: ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ
IPL 2024: ನಿರ್ಬಂಧ ತೆರವಿನಿಂದಾಗಿ ಅಫ್ಘಾನಿಸ್ತಾನದ ಮೂವರು ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಅದರಂತೆ ನವೀನ್ ಉಲ್ ಹಕ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ, ಫಝಲ್ಹಕ್ ಫಾರೂಖಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ.

ಅಫ್ಘಾನಿಸ್ತಾನ್ ಆಟಗಾರರಾದ ನವೀನ್ ಉಲ್ ಹಕ್ (Naveen-ul Haq) ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್ಹಕ್ ಫಾರೂಖಿ ಮೇಲೆ ಹೇರಿದ್ದ ನಿರ್ಬಂಧಗಳನ್ನು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತೆರವುಗೊಳಿಸಿದೆ. ಇದರಿಂದಾಗಿ ಈ ಮೂವರು ಆಟಗಾರರು ಐಪಿಎಲ್ ಸೇರಿದಂತೆ ವಿಶ್ವದ ಪ್ರಮುಖ ಲೀಗ್ ಭಾಗವಹಿಸಬಹುದು. ಇದಕ್ಕೂ ಮುನ್ನ ನವೀನ್ ಉಲ್ ಹಕ್, ಮುಜೀಬ್ ಉರ್ ರೆಹಮಾನ್ ಹಾಗೂ ಫಝಲ್ಹಕ್ ಫಾರೂಖಿಗೆ ಫ್ರಾಂಚೈಸಿ ಲೀಗ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಎಸಿಬಿ ನಿರಾಕರಿಸಿತ್ತು.
ಈ ಮೂವರು ಆಟಗಾರರು ಅಫ್ಘಾನ್ ತಂಡದ ಕೇಂದ್ರೀಯ ಒಪ್ಪಂದದಿಂದ ಬಿಡುಗಡೆಯಾಗಲು ಬಯಸಿದ್ದರು. ಅಲ್ಲದೆ ಫ್ರಾಂಚೈಸಿ ಲೀಗ್ನಲ್ಲಿ ಭಾಗವಹಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಲೀಗ್ ಕ್ರಿಕೆಟ್ ಆಡಲು ಎನ್ಒಸಿ ನೀಡದಿರಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿತ್ತು.
ಅದರಂತೆ ನವೀನ್ ಉಲ್ ಹಕ್, ಫಝಲ್ಹಕ್ ಫಾರೂಖಿ ಹಾಗೂ ಮುಜೀಬ್ ಉರ್ ರೆಹಮಾನ್ಗೆ ಮುಂದಿನ 2 ವರ್ಷಗಳ ಕಾಲ ಐಪಿಎಲ್ ಸೇರಿದಂತೆ ಫ್ರಾಂಚೈಸಿ ಲೀಗ್ ಆಡಲು ಅನುಮತಿ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿತ್ತು.
ಇದೀಗ ಮೂವರು ಆಟಗಾರರಿಂದ ಸ್ಪಷ್ಟನೆ ಪಡೆದಿರುವ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಸಂಪೂರ್ಣ ಮಾರ್ಪಡಿಸಿದೆ. ಮಾರ್ಪಡಿಸಿದ ನಿರ್ಬಂಧಗಳಿಂದಾಗಿ ಈ ಆಟಗಾರರು ಕೇಂದ್ರೀಯ ಒಪ್ಪಂದಗಳನ್ನು ಸ್ವೀಕರಿಸಲು ಮತ್ತು ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಿದೆ.
ಐಪಿಎಲ್ನಲ್ಲಿ ಕಣಕ್ಕಿಳಿಯುವುದು ಖಚಿತ:
ನಿರ್ಬಂಧ ತೆರವಿನಿಂದಾಗಿ ಅಫ್ಘಾನಿಸ್ತಾನದ ಮೂವರು ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಅದರಂತೆ ನವೀನ್ ಉಲ್ ಹಕ್ ಲಕ್ನೋ ಸೂಪರ್ ಜೈಂಟ್ಸ್ ಪರ, ಫಝಲ್ಹಕ್ ಫಾರೂಖಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ಹಾಗೆಯೇ ಮುಜೀಬ್ ಉರ್ ರೆಹಮಾನ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!
IPL 2024 ರಲ್ಲಿರುವ ಅಫ್ಘಾನಿಸ್ತಾನ್ ಆಟಗಾರರು:
- ರಶೀದ್ ಖಾನ್ (ಗುಜರಾತ್ ಟೈಟಾನ್ಸ್)
- ಮೊಹಮ್ಮದ್ ನಬಿ (ಮುಂಬೈ ಇಂಡಿಯನ್ಸ್)
- ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್)
- ರಹಮಾನುಲ್ಲಾ ಗುರ್ಬಾಝ್ (ಕೊಲ್ಕತ್ತಾ ನೈಟ್ ರೈಡರ್ಸ್)
- ನವೀನ್ ಉಲ್ ಹಕ್ (ಲಕ್ನೋ ಸೂಪರ್ ಜೈಂಟ್ಸ್)
- ಫಝಲ್ಹಕ್ ಫಾರೂಖಿ (ಸನ್ರೈಸರ್ಸ್ ಹೈದರಾಬಾದ್)
- ಅಝ್ಮತುಲ್ಲಾ ಒಮರ್ಝಾಹಿ (ಗುಜರಾತ್ ಟೈಟಾನ್ಸ್)
- ಮುಜೀಬ್ ಉರ್ ರೆಹಮಾನ್ (ಕೊಲ್ಕತ್ತಾ ನೈಟ್ ರೈಡರ್ಸ್)
