ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು: ಪ್ರವೀಣ್ ಕುಮಾರ್ ಗಂಭೀರ ಆರೋಪ

Praveen Kumar RCB: 2008 ರಿಂದ 2010 ರವರೆಗೆ ಆರ್​ಸಿಬಿ ಪರ 3 ಸೀಸನ್​ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 47 ಪಂದ್ಯಗಳನ್ನಾಡಿದ್ದರು. ಈ ವೇಳೆ 41 ವಿಕೆಟ್​ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 2010 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: Jan 09, 2024 | 12:20 PM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಾನು ಯಾವತ್ತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಲು ಬಯಸಿರಲಿಲ್ಲ. ಆದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿ ನನ್ನನ್ನು ಆರ್​ಸಿಬಿ ಪರ ಆಡಿಸಿದ್ರು...ಇಂತಹದೊಂದು ಗಂಭೀರ ಆರೋಪ ಮಾಡಿರುವುದು ಮಾತ್ಯಾರೂ ಅಲ್ಲ, ಟೀಮ್ ಇಂಡಿಯಾದ ಮಾಜಿ ವೇಗಿ ಪ್ರವೀಣ್ ಕುಮಾರ್ (Praveen Kumar).

1 / 7
2008 ರ ಚೊಚ್ಚಲ ಐಪಿಎಲ್​ನಲ್ಲಿ ಪ್ರವೀಣ್ ಕುಮಾರ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಂದು ತಾನು ಬೆಂಗಳೂರು ತಂಡದ ಪರ ಕಣಕ್ಕಿಳಿಯಲು ಬಯಸಿರಲಿಲ್ಲ. ನನ್ನ ಮೊದಲ ಆಯ್ಕೆ ಡೆಲ್ಲಿ ಡೇರ್​ ಡೆವಿಲ್ಸ್​ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡವಾಗಿತ್ತು. ಆದರೆ ನನಗೆ ಬೆದರಿಕೆಯೊಡ್ಡಿ ಆರ್​ಸಿಬಿ ಪರ ಕಣಕ್ಕಿಳಿಯುವಂತೆ ಮಾಡಿದ್ದರು ಎಂದು ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.

2 / 7
ಹೀಗೆ ಬೆದರಿಕೆಯೊಡ್ಡಿ ಆರ್​ಸಿಬಿ ಪರ ಆಡಿಸಿದ್ದು ಮತ್ಯಾರೂ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್​ನ ಅಂದಿನ ಅಧ್ಯಕ್ಷ ಲಲಿತ್ ಮೋದಿ ಎಂಬುದನ್ನು ಪ್ರವೀಣ್ ಕುಮಾರ್ ಬಹಿರಂಗಪಡಿಸಿದ್ದಾರೆ. ನಾನು ಆರ್​ಸಿಬಿ ಪರ ಆಡದಿದ್ದರೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಅಂದು ಲಲಿತ್ ಮೋದಿ ಬೆದರಿಸಿದ್ದರು. ಹೀಗಾಗಿ ನಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಬೇಕಾಯಿತು ಎಂದು ತಿಳಿಸಿದ್ದಾರೆ.

3 / 7
ನಾನು ಆರ್​ಸಿಬಿ ಪರ ಆಡಲು ಇಚ್ಛಿಸದಿರಲು ಮುಖ್ಯ ಕಾರಣ ಬೆಂಗಳೂರು ನನ್ನ ಸ್ಥಳದಿಂದ ಸಾಕಷ್ಟು ದೂರಲ್ಲಿತ್ತು. ಅಲ್ಲಿನ ಆಹಾರ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಇದೇ ವೇಳೆ ದೆಹಲಿ ನನ್ನ ಊರಾದ ಮೀರತ್​ಗೆ ತುಂಬಾ ಹತ್ತಿರದಲ್ಲಿತ್ತು. ಇದರಿಂದ ನನಗೆ ಮನೆಗೆ ಹೋಗಲು ಅನುಕೂಲವಾಗುತ್ತಿತ್ತು. ಹೀಗಾಗಿ ನಾನು ಆರ್​ಸಿಬಿ ಪರ ಆಡುವುದಿಲ್ಲ ಎಂದು ತಿಳಿಸಿದ್ದೆ.

4 / 7
ಆದರೆ ವ್ಯಕ್ತಿಯೊಬ್ಬರು ಅವರು ನನ್ನಿಂದ ಪೇಪರ್​ ಒಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಇದು ಆರ್​​ಸಿಬಿ ಜೊತೆಗಿನ ಒಪ್ಪಂದ ಪತ್ರವೆಂದು ಸಹಿ ಹಾಕಿದ ಬಳಿಕವಷ್ಟೇ ನನಗೆ ತಿಳಿಯುತು. ಏಕೆಂದರೆ ನನಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ. ಇದಾಗ್ಯೂ ನಾನು ಡೆಲ್ಲಿ ತಂಡದ ಪರ ಆಡುತ್ತೇನೆ ಎಂದು ತಿಳಿಸಿದ್ದೆ.

5 / 7
ಈ ವೇಳೆ ನನಗೆ ಕರೆ ಮಾಡಿದ್ದ ಐಪಿಎಲ್​ನ ಅಂದಿನ ಅಧ್ಯಕ್ಷ ಲಲಿತ್ ಮೋದಿ, ಆರ್​ಸಿಬಿ ಪರ ಆಡದಿದ್ದರೆ ನಿನ್ನ ವೃತ್ತಿಜೀವನನ್ನೇ ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಆರ್​ಸಿಬಿ ಪರ ಆಡಲೇಬೇಕಾಯಿತು ಎಂದು ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

6 / 7
2008 ರಿಂದ 2010 ರವರೆಗೆ ಆರ್​ಸಿಬಿ ಪರ 3 ಸೀಸನ್​ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ 47 ಪಂದ್ಯಗಳನ್ನಾಡಿದ್ದರು. ಈ ವೇಳೆ 41 ವಿಕೆಟ್​ಗಳನ್ನು ಕಬಳಿಸಿದ್ದರು. ಅಷ್ಟೇ ಅಲ್ಲದೆ 2010 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಇದೀಗ ಐಪಿಎಲ್​ ಒಪ್ಪಂದ ಹಿಂದಿರುವ ಕರಾಳತೆಯನ್ನು ಬಿಚ್ಚಿಡುವ ಮೂಲಕ ಪ್ರವೀಣ್ ಕುಮಾರ್ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

7 / 7
Follow us