ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ಯಾವ್ಯಾವ ದೇಶಗಳ ವಿರುದ್ಧ ಸರಣಿ ಆಡಲಿದೆ ಗೊತ್ತಾ?

|

Updated on: Aug 10, 2024 | 7:46 PM

Team India schedule: ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ತಂಡಕ್ಕೆ ಸಮರ್ಪಕವಾಗಿ ತಯಾರಿ ನಡೆಸಲು ಅವಕಾಶ ಸಿಗಲಿದೆ. ಈಗ ಟೀಂ ಇಂಡಿಯಾದ ಮುಂದಿನ ಸರಣಿಯು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಆ ಬಳಿಕ ತಂಡ ಯಾವ್ಯಾವ ದೇಶಗಳ ವಿರುದ್ಧ ಕಣಕ್ಕಿಳಿಯಲಿದೆ ಎಂಬುದರ ವಿವರ ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ಯಾವ್ಯಾವ ದೇಶಗಳ ವಿರುದ್ಧ ಸರಣಿ ಆಡಲಿದೆ ಗೊತ್ತಾ?
ಟೀಂ ಇಂಡಿಯಾ
Follow us on

ಭಾರತ ತಂಡ ಇತ್ತೀಚೆಗೆ ಶ್ರೀಲಂಕಾದೊಂದಿಗೆ ಟಿ20 ಮತ್ತು ಏಕದಿನ ಸರಣಿಯನ್ನು ಆಡಿತ್ತು. ಇದರಲ್ಲಿ ಟೀಂ ಇಂಡಿಯಾ ಟಿ20 ಸರಣಿಯನ್ನು 3-0 ಅತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯಲ್ಲಿ 0-2 ಅಂತರದಿಂದ ಸೋಲು ಕಂಡಿತ್ತು. ಈ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾ 2025 ರ ಚಾಂಪಿಯನ್ಸ್ ಟ್ರೋಫಿಗೆ ತನ್ನ ತಯಾರಿಯನ್ನು ಪ್ರಾರಂಭಿಸಿತ್ತು. ಆದರೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಕ್ಕೆ ಇನ್ನೂ ಸಾಕಷ್ಟು ಸಮಯ ಉಳಿದಿದೆ. ಹೀಗಾಗಿ ಟೀಂ ಇಂಡಿಯಾ ತನ್ನ ಪ್ರದರ್ಶನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಇನ್ನು ಸಾಕಷ್ಟು ಸಮಯಾವಕ್ಕಾಶವಿದೆ.

ಒಂದು ತಿಂಗಳ ವಿರಾಮ

ಶ್ರೀಲಂಕಾ ಪ್ರವಾಸ ಮುಗಿದ ಬಳಿಕ ಭಾರತ ಕ್ರಿಕೆಟ್ ತಂಡ ಒಂದು ತಿಂಗಳ ಕಾಲ ವಿರಾಮ ಪಡೆಯಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ತಂಡಕ್ಕೆ ಸಮರ್ಪಕವಾಗಿ ತಯಾರಿ ನಡೆಸಲು ಅವಕಾಶ ಸಿಗಲಿದೆ. ಈಗ ಟೀಂ ಇಂಡಿಯಾದ ಮುಂದಿನ ಸರಣಿಯು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಆ ಬಳಿಕ ತಂಡ ಯಾವ್ಯಾವ ದೇಶಗಳ ವಿರುದ್ಧ ಕಣಕ್ಕಿಳಿಯಲಿದೆ ಎಂಬುದರ ವಿವರ ಇಲ್ಲಿದೆ.

ಇದೀಗ ಒಂದು ತಿಂಗಳು ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಆ ಬಳಿಕ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ 3 ಟಿ20 ಪಂದ್ಯಗಳೂ ನಡೆಯಲಿವೆ.

ಟೆಸ್ಟ್ ಸರಣಿ ವೇಳಾಪಟ್ಟಿ

  • ಮೊದಲ ಟೆಸ್ಟ್- ಚೆನ್ನೈ (19 ರಿಂದ 23 ಸೆಪ್ಟೆಂಬರ್)
  • ಎರಡನೇ ಟೆಸ್ಟ್- ಕಾನ್ಪುರ (27 ಸೆಪ್ಟೆಂಬರ್ ನಿಂದ 1 ಅಕ್ಟೋಬರ್)
  • ಮೊದಲನೇ ಟಿ20- ಧರ್ಮಶಾಲಾ (6 ಅಕ್ಟೋಬರ್)
  • ಎರಡನೇ ಟಿ20- ದೆಹಲಿ (9 ಅಕ್ಟೋಬರ್)
  • ಮೂರನೇ ಟಿ20- ಹೈದರಾಬಾದ್ (ಅಕ್ಟೋಬರ್ 12)

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿ

ಬಾಂಗ್ಲಾದೇಶದ ಬಳಿಕ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ಉಭಯ ತಂಡಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ನ್ಯೂಜಿಲೆಂಡ್‌ನ ಭಾರತ ಪ್ರವಾಸವು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಟೆಸ್ಟ್ ಪಂದ್ಯ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ.

ಸರಣಿ ವೇಳಾಪಟ್ಟಿ

  • ಮೊದಲ ಟೆಸ್ಟ್- ಬೆಂಗಳೂರು (16 ರಿಂದ 20 ಅಕ್ಟೋಬರ್)
  • ಎರಡನೇ ಟೆಸ್ಟ್- ಪುಣೆ (24 ರಿಂದ 28 ಅಕ್ಟೋಬರ್)
  • ಮೂರನೇ ಟೆಸ್ಟ್- ಮುಂಬೈ (1 ರಿಂದ 5 ನವೆಂಬರ್)

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿ

ಈ ಎರಡು ತಂಡಗಳಿಗೆ ಆತಿಥ್ಯ ವಹಿಸಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ 4 ಟಿ20 ಪಂದ್ಯಗಳು ನಡೆಯಲ್ಲಿವೆ. ಈ ಸರಣಿಯು ನವೆಂಬರ್ 8 ರಿಂದ ಆರಂಭವಾಗಲಿದ್ದು, ಕೊನೆಯ ಪಂದ್ಯ ನವೆಂಬರ್ 15 ರಂದು ನಡೆಯಲಿದೆ.

ಸರಣಿ ವೇಳಾಪಟ್ಟಿ

  • ಮೊದಲನೇ ಟಿ20- ಡರ್ಬನ್ (ನವೆಂಬರ್ 8)
  • ಎರಡನೇ ಟಿ20- ಗಕ್ಬರ್ಹಾ (ನವೆಂಬರ್ 10)
  • ಮೂರನೇ ಟಿ20- ಸೆಂಚುರಿಯನ್ (ನವೆಂಬರ್ 13)
  • ನಾಲ್ಕನೇ ಟಿ20- ಜೋಹಾನ್ಸ್‌ಬರ್ಗ್ (ನವೆಂಬರ್ 15)

ಆಸ್ಟ್ರೇಲಿಯಾ ಪ್ರವಾಸದತ್ತ ಎಲ್ಲರ ಕಣ್ಣು

ವರ್ಷಾಂತ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಎರಡು ತಂಡಗಳ ನಡುವೆ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ನಡೆಯಲಿದ್ದು, ಇದರಲ್ಲಿ ಡೇ ನೈಟ್ ಟೆಸ್ಟ್ ಜೊತೆಗೆ ಒಟ್ಟು 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಸರಣಿಯು ನವೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಆರಂಭದವರೆಗೆ ನಡೆಯಲಿದೆ.

ಸರಣಿ ವೇಳಾಪಟ್ಟಿ

  • ಮೊದಲ ಟೆಸ್ಟ್- ಪರ್ತ್ (ನವೆಂಬರ್ 22 ರಿಂದ ನವೆಂಬರ್ 26)
  • ಎರಡನೇ ಟೆಸ್ಟ್- ಅಡಿಲೇಡ್ (ಡಿಸೆಂಬರ್ 6 ರಿಂದ ಡಿಸೆಂಬರ್ 10)
  • ಮೂರನೇ ಟೆಸ್ಟ್- ಬ್ರಿಸ್ಬೇನ್ (ಡಿಸೆಂಬರ್ 14 ರಿಂದ ಡಿಸೆಂಬರ್ 18)
  • ನಾಲ್ಕನೇ ಟೆಸ್ಟ್- ಮೆಲ್ಬೋರ್ನ್ (ಡಿಸೆಂಬರ್ 26 ರಿಂದ ಡಿಸೆಂಬರ್ 30)
  • ಐದನೇ ಟೆಸ್ಟ್- ಸಿಡ್ನಿ (ಜನವರಿ 3 ರಿಂದ ಜನವರಿ 7)

ಇಂಗ್ಲೆಂಡ್ ಸರಣಿಯೊಂದಿಗೆ ಹೊಸ ವರ್ಷ ಪ್ರಾರಂಭ

ಭಾರತ ತಂಡ ಮುಂದಿನ ವರ್ಷ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಸರಣಿ ಆಡಲಿದೆ. ಉಭಯ ತಂಡಗಳ ನಡುವೆ 5 ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ನಂತರ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿದೆ.

ಸರಣಿಯ ವೇಳಾಪಟ್ಟಿ

  • ಮೊದಲನೇ ಟಿ20- ಚೆನ್ನೈ (22 ಜನವರಿ)
  • ಎರಡನೇ ಟಿ20- ಕೋಲ್ಕತ್ತಾ (ಜನವರಿ 25)
  • ಮೂರನೇ ಟಿ20- ರಾಜ್‌ಕೋಟ್ (ಜನವರಿ 28)
  • ನಾಲ್ಕನೇ ಟಿ20- ಪುಣೆ (ಜನವರಿ 31)
  • ಐದನೇ ಟಿ20- ಮುಂಬೈ (2 ಫೆಬ್ರವರಿ)
  • ಮೊದಲನೇ ಏಕದಿನ- ನಾಗ್ಪುರ (6 ಫೆಬ್ರವರಿ)
  • ಎರಡನೇ ಏಕದಿನ- ಕಟಕ್ (9 ಫೆಬ್ರವರಿ)
  • ಮೂರನೇ ಏಕದಿನ- ಅಹಮದಾಬಾದ್ (12 ಫೆಬ್ರವರಿ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Sat, 10 August 24