Team India: 3 ಆಟಗಾರರನ್ನು ಲಂಕಾದಲ್ಲೇ ಬಿಟ್ಟು ತವರಿಗೆ ಹಿಂತಿರುಗಿದ ಟೀಮ್ ಇಂಡಿಯಾ

| Updated By: Vinay Bhat

Updated on: Jul 31, 2021 | 7:49 AM

ಶುಕ್ರವಾರ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ಚಹಲ್ ಹಾಗೂ ಗೌತಮ್​ಗೆ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ನಿಯಮದ ಪ್ರಕಾರ ಇವರು ಏಳು ದಿನಗಳ ಕಾಲ ಅಲ್ಲೆ ಉಳಿದುಕೊಳ್ಳಬೇಕಿದೆ.

Team India: 3 ಆಟಗಾರರನ್ನು ಲಂಕಾದಲ್ಲೇ ಬಿಟ್ಟು ತವರಿಗೆ ಹಿಂತಿರುಗಿದ ಟೀಮ್ ಇಂಡಿಯಾ
ಟೀಂ ಇಂಡಿಯಾ
Follow us on

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ಸೀಮಿತ ಓವರ್​ಗಳ ಸರಣಿ ಅಂತ್ಯಕಂಡಿದೆ. ಏಕದಿನ ಸರಣಿಯನ್ನ ಶಿಖರ್ ಧವನ್ (Shikhar Dhawan) ಪಡೆ ವಶಪಡಿಸಿಕೊಂಡರೆ, ಟಿ-20 ಸರಣಿಯನ್ನುಸಿಂಹಳೀಯರು ತಮ್ಮದಾಗಿಸಿದರು. ಇತ್ತ ಟೀಮ್ ಇಂಡಿಯಾ ಸರಣಿ ಮುಕ್ತಾಯವಾದ ಬೆನ್ನಲ್ಲೆ ಮೂವರು ಆಟಗಾರರನ್ನು ಲಂಕಾದಲ್ಲೇ ಬಿಟ್ಟು ತವರಿಗೆ ಮರಳಿದೆ.

ಭಾರತ ತಂಡದಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿರುವ ಕ್ರುನಾಲ್ ಪಾಂಡ್ಯ, ಯುಜ್ವೇಂದ್ರ ಚಹಲ್ ಮತ್ತು ಕೃಷ್ಣಪ್ಪ ಗೌತಮ್ ಶ್ರೀಲಂಕಾದಲ್ಲೇ ಉಳಿದುಕೊಂಡಿದ್ದಾರೆ. ಕ್ರುನಾಲ್​ಗೆ ಜುಲೈ 27 ರಂದು ಕೊರೋನಾ ಇರುವುದು ದೃಢಪಟ್ಟಿತ್ತು. ಶುಕ್ರವಾರ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ಚಹಲ್ ಹಾಗೂ ಗೌತಮ್​ಗೆ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ನಿಯಮದ ಪ್ರಕಾರ ಇವರು ಏಳು ದಿನಗಳ ಕಾಲ ಅಲ್ಲೆ ಉಳಿದುಕೊಳ್ಳಬೇಕಿದೆ.

‘ವಾರದ ನಂತರ, ಆಟಗಾರರ ಆರ್‌ಟಿ-ಪಿಸಿಆರ್ ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ವಾಪಸ್ ತೆರಳಲು ಅನುಮತಿಸಲಾಗುತ್ತದೆ. ಪ್ರಸ್ತುತ, ಅವರು ತಮ್ಮ ಕ್ವಾರಂಟೈನ್‌ ಕೇಂದ್ರದಲ್ಲಿರಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇವರನ್ನು ಬಿಟ್ಟು ಭಾರತದ ಇತರ ಆಟಗಾರರು ಶುಕ್ರವಾರ ಸಂಜೆ ಬೆಂಗಳೂರಿಗೆ ತಲುಪಿದ್ದಾರೆ. ಇಲ್ಲಿಂದ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. ಐಸೋಲೇಷನ್​ನಲ್ಲಿದ್ದ ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಮತ್ತು ದೀಪಕ್ ಚಹಾರ್ ಕೂಡ ಭಾರತಕ್ಕೆ ಮರಳಿದ್ದಾರೆ.

ಇಂಗ್ಲೆಂಡ್​ ಶಾ-ಸೂರ್ಯಕುಮಾರ್:

ಇನ್ನೂ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಭಾರತ ಟೆಸ್ಟ್ ತಂಡ ಸೇರಿಕೊಳ್ಳಲು ಇಂಗ್ಲೆಂಡ್ ಫ್ಲೈಟ್ ಏರಲಿದ್ದಾರೆ. ಅವೇಶ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್​ ಇಂಜುರಿಯಾಗಿ ಸರಣಿಯಿಂದ ಹೊರಬಿದ್ದ ಕಾರಣ ಶಾ ಹಾಗೂ ಸೂರ್ಯಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ.

ಜುಲೈ 20ರಿಂದ 23ರವರೆಗೆ ಡುರ್ಹ್ಯಾಮ್‌ನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ನಡೆದ ಕೌಂಟಿ ಸೆಲೆಕ್ಟ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ ಮತ್ತು ಅವೇಶ್ ಖಾನ್‌ ಇಬ್ಬರೂ ಕೈ ಬೆರಳಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ನಡುವೆ ಆಲ್‌ರೌಂಡರ್‌ ಜಯಂತ್‌ ಯಾದವ್‌ ಹೆಸರು ಕೂಡ ಬದಲಿ ಆಟಗಾರರ ಪಟ್ಟಿಯಲ್ಲಿ ಇತ್ತಾದರೂ, ಅಂತಿಮವಾಗಿ ಇಬ್ಬರನ್ನು ಮಾತ್ರ ಬಿಸಿಸಿಐ ತೆಗೆದುಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:

ರೋಹಿತ್‌ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಶಾರ್ದುಲ್‌ ಠಾಕೂರ್‌, ಉಮೇಶ್‌ ಯಾದವ್, ಕೆಎಲ್‌ ರಾಹುಲ್, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್.

ಇಂಗ್ಲೆಂಡ್​ಗೆ ಆಘಾತ, ಭಾರತ ವಿರುದ್ಧ ನಡೆಯುವ ಸರಣಿಯಿಂದ ಹಿಂದೆ ಸರಿದ ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್!

ಕೊವಿಡ್ ಪ್ರೋಟೋಕಾಲ್ ಉಲ್ಲಂಘನೆ; ಲಂಕಾ ತಂಡದ 3 ಆಟಗಾರರಿಗೆ 1 ವರ್ಷ ಕ್ರಿಕೆಟ್​ನಿಂದ ನಿಷೇಧ, 1 ಕೋಟಿ ರೂ. ದಂಡ!

(Indian Cricket Team Team India white-ball squad reaches Bengaluru Krunal Gowtham and Chahal stay back)