ಕೊವಿಡ್ ಪ್ರೋಟೋಕಾಲ್ ಉಲ್ಲಂಘನೆ; ಲಂಕಾ ತಂಡದ 3 ಆಟಗಾರರಿಗೆ 1 ವರ್ಷ ಕ್ರಿಕೆಟ್​ನಿಂದ ನಿಷೇಧ, 1 ಕೋಟಿ ರೂ. ದಂಡ!

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಶುಕ್ರವಾರ 30 ಜುಲೈ ಮೂರು ಆಟಗಾರರ ಮೇಲೆ ನಿಷೇಧ ಮತ್ತು ದಂಡವನ್ನು ಘೋಷಿಸಿತು.

ಕೊವಿಡ್ ಪ್ರೋಟೋಕಾಲ್ ಉಲ್ಲಂಘನೆ; ಲಂಕಾ ತಂಡದ 3 ಆಟಗಾರರಿಗೆ 1 ವರ್ಷ ಕ್ರಿಕೆಟ್​ನಿಂದ ನಿಷೇಧ, 1 ಕೋಟಿ ರೂ. ದಂಡ!
ಶ್ರೀಲಂಕಾ ಕ್ರಿಕೆಟ್ ತಂಡ
Follow us
TV9 Web
| Updated By: preethi shettigar

Updated on: Jul 31, 2021 | 7:17 AM

ಭಾರತದ ವಿರುದ್ಧ ಟಿ 20 ಸರಣಿಯಲ್ಲಿ ಗೆಲುವಿನ ಸಂಭ್ರಮದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಅಶಿಸ್ತಿನಿಂದಾಗಿ ತಂಡದ 3 ಆಟಗಾರರ ಮೇಲೆ ಮಂಡಳಿ ಒಂದು ವರ್ಷದ ನಿಷೇಧ ಹೇರಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಕೊವಿಡ್ -19 ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಕುಸಾಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ ಮತ್ತು ಧನುಷ್ಕಾ ಗುಣತಿಲಕ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಒಂದು ವರ್ಷ ಅಮಾನತುಗೊಳಿಸಿತು. ಇದಲ್ಲದೆ ಈ ಮೂವರು ಆಟಗಾರರಿಗೂ ಭಾರಿ ದಂಡ ವಿಧಿಸಲಾಗಿದೆ. ಕ್ರಿಕೆಟ್ ಶ್ರೀಲಂಕಾ ಈ ವಿಷಯವನ್ನು ತನಿಖೆ ಮಾಡುವ ಮತ್ತು ವಿಚಾರಣೆ ನಡೆಸುವ ಶಿಸ್ತಿನ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ನಿಷೇಧವನ್ನು ಘೋಷಿಸಿತು.

ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದಲ್ಲಿ, ಈ ಮೂವರು ಆಟಗಾರರು ಟಿ 20 ಸರಣಿಯ ಸೋಲಿನ ನಂತರ ತಡರಾತ್ರಿ ಡರ್ಹಾಮ್ ಬೀದಿಗಳಲ್ಲಿ ಓಡಾಡುತ್ತಿದ್ದರು. ಈ ಮೂವರು ಆಟಗಾರರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾರೋ ಪೋಸ್ಟ್ ಮಾಡಿದ್ದರು. ನಂತರ ಬಯೋ-ಬಬಲ್ ಮತ್ತು ಕೊವಿಡ್ ಪ್ರೋಟೋಕಾಲ್ ಉಲ್ಲಂಘನೆ ಬಹಿರಂಗವಾಗಿತ್ತು. ಶ್ರೀಲಂಕಾ ಕ್ರಿಕೆಟ್ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮೂವರು ಆಟಗಾರರನ್ನು ಅಮಾನತು ಮಾಡಿ ಅವರನ್ನು ಇಂಗ್ಲೆಂಡಿನಿಂದ ವಾಪಸ್ ಕಳುಹಿಸಿತು. ಈ ಕಾರಣದಿಂದಾಗಿ, ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಇತ್ತೀಚೆಗೆ ಭಾರತ ವಿರುದ್ಧದ ಸ್ವದೇಶಿ ಏಕದಿನ ಮತ್ತು ಟಿ 20 ಸರಣಿಗೆ ಅವರನ್ನು ಆಯ್ಕೆ ಮಾಡಿಲ್ಲ.

1 ವರ್ಷ ಅಮಾನತು, 1 ಕೋಟಿ ರೂ. ದಂಡ ವಿಧಿಸಲಾಗಿದೆ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಶುಕ್ರವಾರ 30 ಜುಲೈ ಮೂರು ಆಟಗಾರರ ಮೇಲೆ ನಿಷೇಧ ಮತ್ತು ದಂಡವನ್ನು ಘೋಷಿಸಿತು. ಆಟಗಾರರನ್ನು ಎಸ್‌ಎಲ್‌ಸಿ ನೇಮಿಸಿದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶಿಸ್ತಿನ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಸಮಿತಿಯು ಡಿಕ್ವೆಲ್ಲಾಗೆ 18 ತಿಂಗಳ ನಿಷೇಧವನ್ನು ಶಿಫಾರಸು ಮಾಡಿತು. ಆದರೆ ಮೆಂಡಿಸ್ ಮತ್ತು ಗುಣತಿಲಕ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಯಿತು.

ಆದರೆ, ಎಸ್‌ಎಲ್‌ಸಿ ನಿರ್ಬಂಧಗಳನ್ನು ಸಡಿಲಿಸಿ ಮೂವರು ಆಟಗಾರರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಒಂದು ವರ್ಷ ನಿಷೇಧಿಸಿತು. ಅವರ ಉಳಿದ ಒಂದು ವರ್ಷದ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ. ಈ ಅಮಾನತುಗೊಂಡ ಶಿಕ್ಷೆಯು ಎರಡು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಸಮಯದಲ್ಲಿ ಈ ಆಟಗಾರರು ಮತ್ತೆ ನಿಯಮಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಬೇಕಾಗುತ್ತದೆ. ಆದರೆ, ಈ ಮೂವರು ಕ್ರಿಕೆಟಿಗರು 6 ತಿಂಗಳ ನಂತರ ದೇಶೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಗುತ್ತದೆ. ಇದಲ್ಲದೆ ಮೂವರು ಆಟಗಾರರಿಗೆ ಒಂದು ಕೋಟಿ ಶ್ರೀಲಂಕಾ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಇದನ್ನೂ ಓದಿ: ರಾಹುಲ್- ಅಥಿಯಾ, ಕೊಹ್ಲಿ- ಅನುಷ್ಕಾ; ಇಂಗ್ಲೆಂಡ್​ ಬೀದಿಗಳಲ್ಲಿ ಮಾಡೆಲ್​ಗಳಂತೆ ಫೋಟೋಗಳಿಗೆ ಪೋಸ್ ನೀಡಿದ ಟೀಂ ಇಂಡಿಯಾ ಕ್ರಿಕೆಟಿಗರು