IPL 2021: ಶ್ರೀಲಂಕಾ ಸ್ಪಿನ್ನರ್ ಖರೀದಿಗೆ RCB ಬಿಗ್​ ಪ್ಲ್ಯಾನ್​

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಆಟಗಾರರಾದ ಆ್ಯಡಂ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಐಪಿಎಲ್​ನ ಮೊದಲಾರ್ಧದ ವೇಳೆ ಅರ್ಧದಲ್ಲೇ ಟೂರ್ನಿ ತೊರೆದಿದ್ದರು.

IPL 2021: ಶ್ರೀಲಂಕಾ ಸ್ಪಿನ್ನರ್ ಖರೀದಿಗೆ RCB ಬಿಗ್​ ಪ್ಲ್ಯಾನ್​
ಕಳೆದ ಬಾರಿಯ ಪ್ರದರ್ಶನ ಹಾಗೂ ಈ ಸಲದ ಪ್ರದರ್ಶನಗಳ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರಸ್ತುತ ಟಾಪ್ 4 ನಲ್ಲಿರುವ ಮೂರು ತಂಡಗಳೇ ಗೆಲ್ಲುವ ಹಾಟ್ ಫೇವರೇಟ್ ಎನಿಸಿಕೊಂಡಿದೆ. ಅದರಂತೆ ಯುಎಇನಲ್ಲಿ ಮುಂಬೈ ಇಂಡಿಯನ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಆರ್​ಸಿಬಿ ಬಲಿಷ್ಠ ಎನ್ನಬಹುದು.
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 30, 2021 | 9:54 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳ ಫ್ರಾಂಚೈಸಿಗಳು ಟೂರ್ನಿಯ ಉಳಿದ ಪಂದ್ಯಗಳಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಅದರ ಜೊತೆಗೆ ಟೂರ್ನಿಯ ಉಳಿದ ಪಂದ್ಯಗಳಿಗೆ ಯಾರು ಅಲಭ್ಯರಾಗಲಿದ್ದಾರೆ ಎಂಬ ಲೆಕ್ಕಚಾರದಲ್ಲೂ ತೊಡಗಿಸಿಕೊಂಡಿವೆ. ಇತ್ತ ಆರ್​ಸಿಬಿ ತಂಡದಿಂದ ಟೂರ್ನಿಯ ಮೊದಲಾರ್ಧದಲ್ಲಿ ಹೊರ ನಡೆದಿದ್ದ ಆ್ಯಡಂ ಝಂಪಾ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಝಂಪಾ ಅವರ ಒಪ್ಪಂದವನ್ನು ರದ್ದು ಮಾಡಲು ಆರ್​ಸಿಬಿ (RCB) ಫ್ರಾಂಚೈಸಿ ಚಿಂತಿಸಿದೆ.

ಅವರ ಸ್ಥಾನದಲ್ಲಿ ಶ್ರೀಲಂಕಾ ಸ್ಪಿನ್ ಆಲ್​ರೌಂಡರ್ ವನಿಂದು ಹಸರಂಗ ಅವರನ್ನು ಕರೆತರುವ ಪ್ಲ್ಯಾನ್ ರೂಪಿಸಿದೆ. ಟೀಮ್ ಇಂಡಿಯಾ ವಿರುದ್ದ ನಡೆದ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಹಸರಂಗ ಅವರು ಐಪಿಎಲ್​ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇತ್ತೀಚೆಗಷ್ಟೇ ಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಝಂಪಾ ಸ್ಥಾನದಲ್ಲಿ ಹಸರಂಗಗೆ ಚಾನ್ಸ್ ನೀಡುವ ಬಗ್ಗೆ ಆರ್​ಸಿಬಿ ತಂಡ ಒಲವು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

24 ವರ್ಷದ ಆಲ್‌ರೌಂಡರ್‌ ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಪರಿಣಾಮಕಾರಿ ಆಲ್​ರೌಂಡರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ ಬೌಲಿಂಗ್​​ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅತ್ತ ಯುಎಇ ಪಿಚ್​ ಕೂಡ ಸ್ಪಿನ್ನರ್​ಗಳಿಗೆ ಸಹಕಾರಿ ಆಗಿರುವುದರಿಂದ ಬದಲಿ ಆಟಗಾರನಾಗಿ ಹಸರಂಗ ಅತ್ಯುತ್ತಮ ಆಯ್ಕೆ. ಹೀಗಾಗಿಯೇ ಆರ್​ಸಿಬಿ ಕೂಡ ಲಂಕಾ ಸ್ಪಿನ್ನರ್​ನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಇನ್ನು ಐಪಿಎಲ್​ನ ಉಳಿದ ತಂಡಗಳು ಕೂಡ ಹಸರಂಗ ಮೇಲೆ ಕಣ್ಣಿಟ್ಟಿದ್ದು, ಹೀಗಾಗಿ ಐಪಿಎಲ್​ನ ಉಳಿದ 31 ಪಂದ್ಯಗಳಲ್ಲಿ ಯಾವುದಾದರೂ ತಂಡದ ಪರ ಲಂಕಾ ಸ್ಪಿನ್ನರ್ ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ವಿರುದ್ದದ ಭರ್ಜರಿ ಬೌಲಿಂಗ್ ಪ್ರದರ್ಶನಿಂದ ವನಿಂದು ಹಸರಂಗ ಐಪಿಎಲ್​ನಲ್ಲಿ ಅವಕಾಶಗಿಟ್ಟಿಸಿಕೊಳ್ಳುವುದಂತು ಕನ್ಫರ್ಮ್​. ಆದರೆ ಅದು ಆರ್​ಸಿಬಿ ಪರನಾ ಅಥವಾ ಇನ್ನಿತರ ತಂಡದ ಮೂಲಕ ಕಣಕ್ಕಿಳಿಯಲಿದ್ದಾರಾ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.

ಝಂಪಾ-ರಿಚರ್ಡ್ಸನ್​ ಔಟ್..? ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಆಟಗಾರರಾದ ಆ್ಯಡಂ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್​ನ ಮೊದಲಾರ್ಧದ ವೇಳೆ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಈ ವೇಳೆ ರಿಚರ್ಡ್ಸನ್ ಬದಲಿಯಾಗಿ ಸ್ಕಾಟ್ ಕುಗ್ಗೆಲಿನ್ ಅವರನ್ನು ಆರ್​ಸಿಬಿ ತಂಡ ಆಯ್ಕೆ ಮಾಡಿಕೊಂಡಿತು. ಇದಾಗ್ಯೂ ಝಂಪಾ ಸ್ಥಾನದಲ್ಲಿ ಯಾರನ್ನೂ ಕೂಡ ಆಯ್ಕೆ ಮಾಡಿರಲಿಲ್ಲ. ಇದೀಗ ಟೀಮ್ ಇಂಡಿಯಾ ವಿರುದ್ದ 7 ವಿಕೆಟ್ ಉರುಳಿಸಿ ಮಿಂಚಿರುವ ಹಸರಂಗ ಅವರನ್ನು ಝಂಪಾ ಸ್ಥಾನದಲ್ಲಿ ಆಯ್ಕೆ ಮಾಡಲು ಆರ್​ಸಿಬಿ ಬಯಸಿದ್ದು, ಅದು ಯಶಸ್ವಿಯಾಗಲಿದೆಯಾ ಕಾದು ನೋಡಬೇಕಿದೆ.

ಸೆಪ್ಟೆಂಬರ್​ನಲ್ಲಿ ಕ್ರಿಕೆಟ್ ಕದನ: ಕೊರೋನಾ ಕಾರಣದಿಂದ ಮೊಟಕುಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದಲ್ಲಿ 29 ಪಂದ್ಯಗಳನ್ನು ಆಡಲಾಗಿತ್ತು. ಇದೀಗ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಅದರಂತೆ ಉಳಿದಿರುವ 31 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ನಡೆಯಲಿದೆ.

ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(IPL 2021: Sri Lankan Spinner Wanindu Hasaranga Set To Replace Adam Zampa In RCB?)