Team India: ಒಂದು ಪಂದ್ಯ, ಹಲವು ಕೆಟ್ಟ ದಾಖಲೆಗಳು..!

ಭಾರತದ ವಿರುದ್ದದ ಟಿ20 ಸರಣಿಯನ್ನು (India vs Sri Lanka ) ಶ್ರೀಲಂಕಾ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿ ಸೋಲಿನೊಂದಿಗೆ ಟೀಮ್ ಇಂಡಿಯಾ ಹಲವು ಹೀನಾಯ ದಾಖಲೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 81 ರನ್​ಗಳಿಸಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಲಂಕಾ 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಹಲವು ಕೆಟ್ಟ ದಾಖಲೆಗಳನ್ನು ಭಾರತ […]

Team India: ಒಂದು ಪಂದ್ಯ, ಹಲವು ಕೆಟ್ಟ ದಾಖಲೆಗಳು..!
ಮಧ್ಯಮ ಕ್ರಮಾಂಕ: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 30, 2021 | 8:01 PM

ಭಾರತದ ವಿರುದ್ದದ ಟಿ20 ಸರಣಿಯನ್ನು (India vs Sri Lanka ) ಶ್ರೀಲಂಕಾ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿ ಸೋಲಿನೊಂದಿಗೆ ಟೀಮ್ ಇಂಡಿಯಾ ಹಲವು ಹೀನಾಯ ದಾಖಲೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 81 ರನ್​ಗಳಿಸಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಲಂಕಾ 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಹಲವು ಕೆಟ್ಟ ದಾಖಲೆಗಳನ್ನು ಭಾರತ ತನ್ನದಾಗಿಸಿಕೊಂಡಿತು. ಅವು ಯಾವುದೆಂದರೆ…

ಅತೀ ಕಡಿಮೆ ಸ್ಕೋರ್: ಈ ಪಂದ್ಯದಲ್ಲಿ ಕೇವಲ 81 ರನ್​ಗಳಿಸುವ ಟೀಮ್ ಇಂಡಿಯಾ ಹೀನಾಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಹೌದು, ಶ್ರೀಲಂಕಾ ವಿರುದ್ಧದ ಟಿ 20 ಪಂದ್ಯಗಳಲ್ಲಿ ಇದು ಭಾರತದ ಅತ್ಯಂತ ಕಡಿಮೆ ಸ್ಕೋರ್. ಹಾಗೆಯೇ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಮೂರನೇ ಅತಿ ಕಡಿಮೆ ಸ್ಕೋರ್ ಆಗಿದೆ. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 74 ರನ್​ಗಳಿಸಿದ್ದು ಅತ್ಯಂತ ಹೀನಾಯ ದಾಖಲೆಯಾಗಿದೆ. ಇದಾಗ್ಯೂ ಭಾರತ ಶ್ರೀಲಂಕಾ ವಿರುದ್ದ ಟಿ20 ಕ್ರಿಕೆಟ್​ನಲ್ಲಿ 100 ಕ್ಕಿಂತ ಕಡಿಮೆ ಮೊತ್ತ ದಾಖಲಿಸಿರಲಿಲ್ಲ. ಇದೀಗ 81 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ ಕಳಪೆ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಅತೀ ಕಡಿಮೆ ಬೌಂಡರಿ: ಈ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳು ಬಾರಿಸಿದ್ದು ಕೇವಲ 4 ಬೌಂಡರಿಗಳೆಂದರೆ ನಂಬಲೇಬೇಕು. ಇದರಲ್ಲಿ ರುತುರಾಜ್ ಗಾಯಕ್ವಾಡ್ 2 ಫೋರ್ ಬಾರಿಸಿದರೆ, ಚಹರ್ ಹಾಗೂ ಪಡಿಕ್ಕಲ್ ಒಂದೊಂದು ಫೋರ್ ಬಾರಿಸಿದ್ದರು. ಇದು ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಅತ್ಯಂತ ಕಡಿಮೆ ಬೌಂಡರಿ ಕೌಂಟ್ ಆಗಿದೆ. ಈ ಹಿಂದೆ ಶ್ರೀಲಂಕಾ ವಿರುದ್ದವೇ 2ನೇ ಟಿ20 ಪಂದ್ಯದಲ್ಲಿ 8 ಬೌಂಡರಿ (7 ಫೋರ್, 1 ಸಿಕ್ಸ್​) ಬಾರಿಸಿದ್ದು ಅತ್ಯಂತ ಕಳಪೆ ಪ್ರದರ್ಶನವಾಗಿತ್ತು.

ಒಂದೇ ಒಂದು ಸಿಕ್ಸ್ ಇಲ್ಲ: ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ 20 ಓವರ್​ ಬ್ಯಾಟಿಂಗ್ ಮಾಡಿ ಒಂದೇ ಒಂದು ಸಿಕ್ಸ್​ ಬಾರಿಸದೆ ಪಂದ್ಯವನ್ನು ಮುಗಿಸಿದೆ. 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಬಾರಿಸಿದ ನಾಲ್ಕು ಬೌಂಡರಿಗಳು ಫೋರ್​​ ರೂಪದಲ್ಲಿ ಬಂದಿದ್ದವು.

ಸಿಕ್ಸ್ ಇಲ್ಲದ ಪಂದ್ಯ: ಈ ಪಂದ್ಯದಲ್ಲಿ ಭಾರತದ ಮಾತ್ರವಲ್ಲ, ಶ್ರೀಲಂಕಾ ಬ್ಯಾಟ್ಸ್​ಮನ್​ಗಳು ಕೂಡ ಒಂದೇ ಒಂದು ಸಿಕ್ಸ್ ಬಾರಿಸಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ ಟಿ20 ಕ್ರಿಕೆಟ್​ನಲ್ಲಿ ಸಿಕ್ಸ್​ಗಳ ಸುರಿಮಳೆಯಾದರೆ ಈ ಪಂದ್ಯದಲ್ಲಿ ಸಿಕ್ಸ್ ಮೂಡಿಬರದಿರುವುದು ಅಚ್ಚರಿ.

13 ವರ್ಷಗಳ ಬಳಿಕ ಸರಣಿ ಸೋಲು: ಈ ಪಂದ್ಯದ ಮೂಲಕ 13 ವರ್ಷಗಳ ಭಾರತದ ಸರಣಿ ಗೆಲುವಿನ ನಾಗಾಲೋಟವನ್ನು ತಡೆಯುವಲ್ಲಿ ಶ್ರೀಲಂಕಾ ತರುಣರು ಯಶಸ್ವಿಯಾದರು. ಕಳೆದ ಒಂದು ದಶಕದಿಂದ ಲಂಕಾ ವಿರುದ್ಧ ಭಾರತ ಮೇಲುಗೈ ಸಾಧಿಸುತ್ತಾ ಬಂದಿದೆ. ಇಲ್ಲಿ ವಿಶೇಷ ಎಂದರೆ ಶ್ರೀಲಂಕಾ ತಂಡವು ಭಾರತದ ವಿರುದ್ದ 2008ರ ಬಳಿಕ ಮೂರು ಮಾದರಿಯ ಕ್ರಿಕೆಟ್​​ನಲ್ಲೂ ಯಾವುದೇ ಸರಣಿ ಗೆದ್ದಿರಲಿಲ್ಲ.

ಅಂದರೆ 2008 ರಲ್ಲಿ ಭಾರತದ ವಿರುದ್ದ ಶ್ರೀಲಂಕಾ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಆ ಬಳಿಕ ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್​ನಲ್ಲಿ ಶ್ರೀಲಂಕಾ ತಂಡವು ಭಾರತದ ವಿರುದ್ದ ಸರಣಿ ಗೆದ್ದಿಲ್ಲ. ಇದೀಗ ಹದಿಮೂರು ವರ್ಷಗಳ ಭಾರತವನ್ನು ದ್ವಿಪಕ್ಷೀಯ ಸರಣಿಯಲ್ಲಿ ಸೋಲಿಸುವಲ್ಲಿ ಶ್ರೀಲಂಕಾ ತಂಡ ಯಶಸ್ವಿಯಾಗಿದೆ.

ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(Team india’s worst records against sri lanka t20 series)