ಗುಜರಾತ್ ವಿಧಾನಸಭೆ ಚುನಾವಣೆಗೆ (Ravindra Jadeja) ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಜಾಮ್‌ನಗರ ಉತ್ತರ ಅಭ್ಯರ್ಥಿಯಾಗಿ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ಆಯ್ಕೆಯಾಗಿದ್ದಾರೆ. ರಿವಾಬಾ ಜಡೇಜಾ 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಕ್ರಿಕೆಟ್‌ನಿಂದ ದೂರವಿರುವ ರವೀಂದ್ರ ಜಡೇಜಾ ಈಗ ಮಡದಿ ರಿವಾಬಾ ಸಿಂಗ್ ಪರ ಪ್ರಚಾರಕ್ಕಿಳಿದಿದ್ದಾರೆ. ಜಡೇಜಾ ಅವರ ಪತ್ನಿ ಜಾಮ್‌ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರ ಪರ ಜಡೇಜಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಪತ್ನಿಗಾಗಿ ಪ್ರಚಾರ ನಡೆಸುತ್ತಿರುವ ಜಡೇಜಾ ಪತ್ನಿಗಾಗಿ ಹೊಸ ಟ್ವಿಟರ್ ಅಕೌಂಟ್ ತೆರೆದಿದ್ದಾರೆ.
ಹೊಸ ಟ್ವಿಟರ್ ಅಕೌಂಟ್
ಮಡದಿಯ ಹೊಸ ಟ್ವಿಟರ್ ಅಕೌಂಟ್ ಬಗ್ಗೆ ಮಾತನಾಡಿರುವ ಜಡೇಜಾ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ನನ್ನ ಪತ್ನಿ ರಿವಾಬಾ ಜಡೇಜಾ ಅವರು ಇಂದು ಹೊಸದಾಗಿ ಟ್ವಿಟರ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದ್ದಾರೆ.
Official account @Rivaba4BJP pic.twitter.com/L261kB67ly
— Ravindrasinh jadeja (@imjadeja) November 16, 2022
ಜನರಿಗಾಗಿ ಕೆಲಸ ಮಾಡಲು ತಮ್ಮ ಪತ್ನಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ. ಇದು ರಿವಾಬಾ ಅವರ ಮೊದಲ ಪ್ರಯತ್ನ. ಈ ಪ್ರಯತ್ನದಲ್ಲಿ ಅವರು ಪ್ರಗತಿ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಮಡದಿ ಸಹಾಯ ಮಾಡುವ ಸ್ವಭಾವದವಳು, ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸುತ್ತಾಳೆ. ಆದ್ದರಿಂದ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದಾಳೆ.
ಇದನ್ನೂ ಓದಿ: IPL 2023: ಮಿನಿ ಹರಾಜಿಗೂ ಮುನ್ನ ತಂಡದಿಂದ ಗೇಟ್ಪಾಸ್; ಈ ದಿಗ್ಗಜರ ಐಪಿಎಲ್ ಪಯಣ ಭಾಗಶಃ ಅಂತ್ಯ
ನಾಮಪತ್ರ ಸಲ್ಲಿಸಿದ ರಿವಾಬಾ
ಮಾಜಿ ಮುಖ್ಯಮಂತ್ರಿ ವಿಜಯಭಾಯ್ ರೂಪಾನಿ ಅವರ ವಿಶೇಷ ಉಪಸ್ಥಿತಿಯಲ್ಲಿ ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ರಿವಾಬ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು.
ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ಜಡ್ಡು
ಗಾಯದ ಕಾರಣ ರವೀಂದ್ರ ಜಡೇಜಾ 2022 ರ ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಸದ್ಯ ಕ್ರಿಕೆಟ್ಗೆ ಮರಳಲು ಕಾಯುತ್ತಿದ್ದಾರೆ. ಅದೇ ಸಮಯದಲ್ಲಿ, ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಿಚ್‌ನಲ್ಲಿಯೂ ನಿರತರಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಭವಿಷ್ಯದಲ್ಲಿ ನೀವೂ ರಾಜಕೀಯಕ್ಕೆ ಬರಬಹುದೇ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕ್ರಿಕೆಟಿಗ 5 ವರ್ಷಗಳ ಕಾಲ ಕ್ರಿಕೆಟ್ ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಆ ನಂತರ ಅವಕಾಶ ಸಿಕ್ಕರೆ ಖಂಡಿತಾ ಜನಸೇವೆ ಮಾಡಲು ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ ಎಂದು ಜಡೇಜಾ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Wed, 16 November 22