AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ: ಕಾದು ಕುಳಿತಿರುವ ಅಭಿಮಾನಿಗಳು

ಕಳೆದ ಮೇನಲ್ಲಿ ಐಪಿಎಲ್ 2021 ಟೂರ್ನಿಯ ಬಯೋಬಬಲ್‌ನಲ್ಲೇ ಕೊರೊನಾ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಾಗ 29 ಲೀಗ್ ಪಂದ್ಯ ಪೂರ್ಣಗೊಂಡಿದ್ದರೆ, ಯುಎಇಯಲ್ಲಿ ಈಗ ಬಾಕಿ ಉಳಿದ 31 ಪಂದ್ಯಗಳು ನಡೆಯಲಿವೆ.

IPL 2021: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ: ಕಾದು ಕುಳಿತಿರುವ ಅಭಿಮಾನಿಗಳು
IPL 2021
TV9 Web
| Updated By: Vinay Bhat|

Updated on: Sep 19, 2021 | 7:17 AM

Share

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಆವೃತ್ತಿಯ  ಎರಡನೇ ಚರಣಕ್ಕೆ ಇಂದು ಚಾಲನೆ ಸಿಗಲಿದೆ. ಈ ವರ್ಷ ಏಪ್ರಿಲ್‌ನಲ್ಲಿ ಐಪಿಎಲ್ 2021 ಭಾರತದಲ್ಲಿ ಆರಂಭವಾಯಿತು. ಆದರೆ, ಕೆಲವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಕೊರೊನಾ (Corona) ಸೋಂಕಿಗೆ ಒಳಗಾದ ಕಾರಣ ಟೂರ್ನಿಯನ್ನು ಮುಂದೂಡಲಾಯಿತು. ಅದರಂತೆ ಐಪಿಎಲ್ 2021ರ ದ್ವಿತೀಯಾರ್ಧ ಭಾನುವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (UAE) ಶುರುವಾಗಲಿದೆ. ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (MIvsCSK) ನಡುವೆ ಕಾದಾಟ ನಡೆಯಲಿದ್ದು, ದುಬೈನಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳುತ್ತದೆ. ಐಪಿಎಲ್ ಟೂರ್ನಿಯ ಎರಡು ಅತ್ಯಂತ ಯಶಸ್ವಿ ತಂಡಗಳೆನಿಸಿರುವ ಇವೆರೆಡರ ಹಣಾಹಣಿಯನ್ನು ವೀಕ್ಷಿಸಲು ಐಪಿಎಲ್ ಪ್ರಿಯರು ಕಾದುಕುಳಿತಿದ್ದಾರೆ.

ಕಳೆದ ಮೇನಲ್ಲಿ ಟೂರ್ನಿಯ ಬಯೋಬಬಲ್‌ನಲ್ಲೇ ಕೊರೊನಾ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಾಗ 29 ಲೀಗ್ ಪಂದ್ಯ ಪೂರ್ಣಗೊಂಡಿದ್ದರೆ, ಯುಎಇಯಲ್ಲಿ ಈಗ ಬಾಕಿ ಉಳಿದ 31 ಪಂದ್ಯಗಳು ನಡೆಯಲಿವೆ. ಐಪಿಎಲ್ ಮುಗಿದ ಎರಡೇ ದಿನಗಳಲ್ಲಿ ಇಲ್ಲೇ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಕೂಡ ಎಲ್ಲ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಟೂರ್ನಿಯ ಮೊದಲ ಭಾಗ ಹಲವಾರು ರೋಚಕ ಪಂದ್ಯಗಳಿಂದ ಕೂಡಿದ್ದರೆ, ಪ್ಲೇಆಫ್​ ಲೆಕ್ಕಾಚಾರಗಳಿಂದಾಗಿ 2ನೇ ಭಾಗ ಇನ್ನಷ್ಟು ರೋಚಕತೆ ಮೂಡಿಸಿದೆ. ಕೆಲ ವಿದೇಶಿ ಆಟಗಾರರು ಹಿಂದೆ ಸರಿದಿರುವುದು ಮತ್ತು ಕೆಲ ಹೊಸ ಆಟಗಾರರ ಸೇರ್ಪಡೆ ಟೂರ್ನಿಯ 2ನೇ ಭಾಗಕ್ಕೆ ತಂಡಗಳ ಬಲಾಬಲ ಬದಲಾಯಿಸಿದೆ. ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರೂ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲಿದ್ದು, ಎಲ್ಲವೂ ಹೂವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ.

14ನೇ ಆವೃತ್ತಿ ಆರಂಭಕ್ಕೂ ಮೊದಲೇ ಪಡಿಕಲ್, ಅಕ್ಷರ್ ಪಟೇಲ್ ಸಹಿತ ಕೆಲ ಆಟಗಾರರು ಪಾಸಿಟಿವ್ ಆಗಿದ್ದರೂ, ಬಯೋಬಬಲ್‌ನಲ್ಲಿ ಸುರಕ್ಷಿತ ಟೂರ್ನಿ ನಡೆಯುವ ನಿರೀಕ್ಷೆ ಇತ್ತು. ಮುಂಬೈ-ಚೆನ್ನೈನ ಮೊದಲ ಚರಣ ನಿರ್ವಿಘ್ನವಾಗಿ ಸಾಗಿತ್ತು ಕೂಡ.

ಆದರೆ ದೆಹಲಿ-ಅಹಮದಾಬಾದ್‌ನ 2ನೇ ಚರಣದ ವೇಳೆಗೆ ಬಯೋಬಬಲ್‌ನಲ್ಲೇ ಕರೊನಾ ಕಾಣಿಸಿಕೊಂಡಿತ್ತು. ಮೊದಲಿಗೆ ಕೆಕೆಆರ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಸೋಂಕಿತರಾದಾಗ ಮೇ 3ರಂದು ನಡೆಯಬೇಕಾಗಿದ್ದ ಕೆಕೆಆರ್-ಆರ್‌ಸಿಬಿ ಪಂದ್ಯವನ್ನು ಮುಂದೂಡಲಾಗಿತ್ತು. ಬಳಿಕ ಮೇ 4ರಂದು ಡೆಲ್ಲಿ ತಂಡದ ಅಮಿತ್ ಮಿಶ್ರಾ, ಸನ್‌ರೈಸರ್ಸ್‌ ತಂಡದ ವೃದ್ಧಿಮಾನ್ ಸಾಹಗೂ ವೈರಸ್ ಹರಡಿದಾಗ ಎಚ್ಚೆತ್ತ ಬಿಸಿಸಿಐ, ಟೂರ್ನಿ ಸ್ಥಗಿತಕ್ಕೆ ನಿರ್ಧರಿಸಲಾಯಿತು.

ಐಪಿಎಲ್ 2021 ಸೆಕೆಂಡ್ ಇನ್ನಿಂಗ್ಸ್​ನ ವೇಳಾಪಟ್ಟಿ:

ಸೆಪ್ಟೆಂಬರ್ 19 – ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್: 07:30 PM

ಸೆಪ್ಟೆಂಬರ್ 20 – ಕೋಲ್ಕತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: 07:30 PM

ಸೆಪ್ಟೆಂಬರ್ 21 – ಪಂಜಾಬ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್: 07:30 PM

ಸೆಪ್ಟೆಂಬರ್ 22 – ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್: 07:30 PM

ಸೆಪ್ಟೆಂಬರ್ 23 – ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್: 07:30 PM

ಸೆಪ್ಟೆಂಬರ್ 24 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್: ಸಂಜೆ 07:30 ಕ್ಕೆ

ಸೆಪ್ಟೆಂಬರ್ 25 – ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್: 03:30 PM

2ನೇ ಪಂದ್ಯ – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್: ಸಂಜೆ 07:30 ಕ್ಕೆ

26 ಸೆಪ್ಟೆಂಬರ್ – ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್ 03:30 PM

2 ನೇ ಪಂದ್ಯ – ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 07:30 PM

ಸೆಪ್ಟೆಂಬರ್ 27 – ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್: 07:30 PM

ಸೆಪ್ಟೆಂಬರ್ 28 – ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್: ಮಧ್ಯಾಹ್ನ 03:30 ಕ್ಕೆ

2ನೇ ಪಂದ್ಯ – ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್: 07:30 PM

29 ಸೆಪ್ಟೆಂಬರ್ – ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು: 07:30 PM

30 ಸೆಪ್ಟೆಂಬರ್ – ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್: 07:30 PM

01 ಅಕ್ಟೋಬರ್ – ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್: 07:30 PM

02 ಅಕ್ಟೋಬರ್ – ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್: 03:30 PM

2ನೇ ಪಂದ್ಯ- ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್: ಸಂಜೆ 07:30 ಕ್ಕೆ

03 ಅಕ್ಟೋಬರ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್: ಮಧ್ಯಾಹ್ನ 03:30 ಕ್ಕೆ

2ನೇ ಪಂದ್ಯ- ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್: 07:30 PM

04 ಅಕ್ಟೋಬರ್ – ದೆಹಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್: 07:30 PM

05 ಅಕ್ಟೋಬರ್ – ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್: 07:30 PM

06 ಅಕ್ಟೋಬರ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್: 07:30 PM

07 ಅಕ್ಟೋಬರ್ – ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್: ಮಧ್ಯಾಹ್ನ 03:30 ಕ್ಕೆ

2ನೇ ಪಂದ್ಯ – ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್: 07:30 PM

08 ಅಕ್ಟೋಬರ್ – ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್: 03:30 PM

2ನೇ ಪಂದ್ಯ – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್: ಮಧ್ಯಾಹ್ನ 03:30 ಕ್ಕೆ

ಅಕ್ಟೋಬರ್ 10 – ಕ್ವಾಟರ್‌ ಫೈನಲ್

ಅಕ್ಟೋಬರ್ 11 – ಎಲಿಮಿನೇಟರ್

13 ಅಕ್ಟೋಬರ್ – ಸೆಮಿ‌ ಫೈನಲ್

15 ಅಕ್ಟೋಬರ್ – ಫೈನಲ್

ಟೆಸ್ಟ್ ಸರಣಿ ಆರಂಭವಾದ ಕ್ಷಣದಿಂದಲೇ ಟೀಮ್ ಇಂಡಿಯ ಆಟಗಾರರು ಐಪಿಎಲ್ ನಲ್ಲಿ ಆಡಲು ಉತ್ಸುಕರಾಗಿದ್ದರು: ಗಾಫ್

ಸೊಳ್ಳೆ, ನೊಣಗಳೇ ಅತಿಥಿಗಳು.. ಕೆಸರು ಗದ್ದೆಯಲ್ಲಿ ಸ್ಪರ್ಧಿಗಳ ಕಸರತ್ತು! ಅವ್ಯವಸ್ಥೆಯ ಆಗರವಾದ ಕುಸ್ತಿ ಚಾಂಪಿಯನ್‌ಶಿಪ್‌

(Indian Premier League IPL 2021 Phase 2 is starting from today)