IPL 2021: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್: ಯಾವ ತಂಡ ಬಲಿಷ್ಠ?, ಪಿಚ್ ವರದಿ, ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

CSK vs MI: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಐಪಿಎಲ್ 2021 ಟೂರ್ನಿಯ 30ನೇ ಪಂದ್ಯವಾಗಿರಲಿದ್ದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

IPL 2021: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್: ಯಾವ ತಂಡ ಬಲಿಷ್ಠ?, ಪಿಚ್ ವರದಿ, ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
ಇದರ ಬೆನ್ನಲ್ಲೇ ಮೊದಲ ಪಂದ್ಯದಿಂದ ಹಿಟ್​ಮ್ಯಾನ್ ಹೊರಗುಳಿಯಲು ಕಾರಣವೇನು ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ಕೀರನ್ ಪೊಲಾರ್ಡ್​​ ರೋಹಿತ್ ಶರ್ಮಾ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ನಾನು ತಂಡವನ್ನು ಮುನ್ನಡೆಸುತ್ತಿದ್ದೇನೆ ಎಂದಷ್ಟೇ ತಿಳಿಸಿದ್ದರು.

ನಾಲ್ಕುವರೆ ತಿಂಗಳ ಬಳಿಕ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (Indian Premier League 2021) ಇಂದು ಮತ್ತೆ ಚಾಲನೆ ಸಿಗುತ್ತಿದೆ. ಅರಬ್ ನಾಡಿನಲ್ಲಿ ಅಬ್ಬರಿಸಲು ಆಟಗಾರರು ತಯಾರಾಗಿದ್ದು, ಅಭಿಮಾನಿಗಳಂತು ಕಾದುಕುಳಿತಿದ್ದಾರೆ. ಐಪಿಎಲ್ (IPL 2021) ಇತಿಹಾಸದ ಸಾಂಪ್ರದಾಯಿಕ ಎದುರಾಳಿ, ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) ನಡುವೆ ಸಂಜೆ 7:30ಕ್ಕೆ ದುಬೈ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಬಲಿಷ್ಠ ಪಿಚ್ ಯಾರಿಗೆ ಹೆಚ್ಚು ಸಹಕರಿಸಲಿದೆ?, ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಸೇರಿದಂತೆ ಪ್ರಮುಖ ಮಾಹಿತಿಯನ್ನ ನೋಡೋಣ.

ಯಾವ ತಂಡ ಬಲಿಷ್ಠ?:

ಚೆನ್ನೈ ಹಾಗೂ ಮುಂಬೈ ಕಾಳಗದಲ್ಲಿ ಯಾರಿಗೆ ವಿಜಯ ಲಕ್ಷ್ಮೀ ಒಲಿಯಲಿದೆ ಎಂಬುದು ಗ್ರಹಿಸಲು ಸಾಧ್ಯವಿಲ್ಲ. ಆದರೆ, ಮೇಲ್ನೋಟಕ್ಕೆ ಧೋನಿ ಪಡೆ ಬಲಿಷ್ಠವಿರುವಂತೆ ಕಾಣುತ್ತದೆ. ಯಾಕಂದ್ರೆ ಚೆನ್ನೈನಲ್ಲಿ ಆಲ್ರೌಂಡರ್​ಗಳ ದಂಡೇ ಇದೆ. ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಎಂಎಸ್ ಧೋನಿ ಬ್ಯಾಟಿಂಗ್ ಶಕ್ತಿ ಒಂದುಕಡೆಯಾದರೆ ಆಲ್‌ರೌಂಡರ್ ಆಟಗಾರರಾಗಿ ಮೊಯಿನ್ ಅಲಿ, ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೊ ಈ ಮೂವರೂ ಕಣಕ್ಕಿಳಿಯುವುದು ಖಚಿತ.

ಇತ್ತ ಮುಂಬೈ ತಂಡದಲ್ಲೂ ಹಾರ್ದಿಕ್ ಪಾಂಡ್ಯ, ಕೀರೊನ್ ಪೊಲಾರ್ಡ್ ಹಾಗೂ ಕ್ರುನಾಲ್ ಪಾಂಡ್ಯ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಪಾಂಡ್ಯ ಬ್ರದರ್ಸ್ ಫಾರ್ಮ್​ನಲ್ಲಿ ಇಲ್ಲದಿರುವ ಕಾರಣ ಬಿಗ್ ಹಿಟ್ ಬರುವುದು ಅನುಮಾನ.

ಪಂದ್ಯದ ವಿವರ:

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಟೂರ್ನಿಯ 30ನೇ ಪಂದ್ಯವಾಗಿರಲಿದ್ದು ದುಬೈ ನಗರದಲ್ಲಿರುವ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಮುಖಾಮುಖಿ:

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 32 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ 19 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಪಿಚ್ ವರದಿ:

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಿರಲಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತುಸು ಹೆಚ್ಚಿನ ಶ್ರಮಪಡಬೇಕಾಗುತ್ತದೆ.

ದುಬೈನಲ್ಲಿ ಟಿ-20 ದಾಖಲೆ:

ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡುವುದು ಉತ್ತಮ ನಿರ್ಧಾರ. ಯಾಕಂದ್ರೆ ಇಲ್ಲಿ ನಡೆದ 93 ಪಂದ್ಯಗಳಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡ 54 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು ಕೇವಲ 38 ಪಂದ್ಯಗಳನ್ನಷ್ಟೆ.

ಮೊದಲ ಇನ್ನಿಂಗ್ಸ್​ನ ಗರಿಷ್ಠ ಸ್ಕೋರ್: 219/2

ಮೊದಲ ಇನ್ನಿಂಗ್ಸ್​ನ ಕನಿಷ್ಠ ಸ್ಕೋರ್: 59 ಆಲೌಟ್

ಅತ್ಯಧಿk ರನ್ ಚೇಸ್: 203/8

ಸಂಭಾವ್ಯ ಪ್ಲೇಯಿಂಗ್ XI:

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್‌), ಮೊಯೀನ್ ಅಲಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹೇಜಲ್‌ವುಡ್.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಮಾರ್ಕೊ ಜಾನ್ಸನ್.

ನೇರಪ್ರಸಾರ:

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಆನ್​ಲೈನ್ ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್.

IPL 2021: ಅರಬ್ ನಾಡಿನಲ್ಲಿ ಐಪಿಎಲ್ ಅಬ್ಬರ ಶುರು: ಇಂದು ಚೆನ್ನೈ-ಮುಂಬೈ ನಡುವೆ ಮೊದಲ ಸೆಣೆಸಾಟ

IPL 2021: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ: ಕಾದು ಕುಳಿತಿರುವ ಅಭಿಮಾನಿಗಳು

(IPL 2021 CSK vs MI Live Forecast Pitch Report Venue Records and Head to Head Record All You Need to Know)

Read Full Article

Click on your DTH Provider to Add TV9 Kannada