Dinesh Karthik Retirement: ಜನ್ಮ ದಿನದಂದೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ದಿನೇಶ್ ಕಾರ್ತಿಕ್ ವಿದಾಯ..!
Dinesh Karthik Retirement: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಐಪಿಎಲ್ಗೆ ಗುಡ್ ಬೈ ಹೇಳಿದ್ದ ದಿನೇಶ್ ಕಾರ್ತಿಕ್ ತಮ್ಮ ಹುಟ್ಟು ಹಬ್ಬದಂತೆ ವೃತ್ತಿ ಬದುಕಿಗೆ ಅಂತ್ಯ ಹಾಡಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (Dinesh Karthik) ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಐಪಿಎಲ್ಗೆ (IPL) ಗುಡ್ ಬೈ ಹೇಳಿದ್ದ ದಿನೇಶ್ ಕಾರ್ತಿಕ್ ತಮ್ಮ ಹುಟ್ಟು ಹಬ್ಬದಂತೆ ವೃತ್ತಿ ಬದುಕಿಗೆ ಅಂತ್ಯ ಹಾಡಿದ್ದಾರೆ. 2004 ರಲ್ಲಿ ಟೀಂ ಇಂಡಿಯಾ (Team India) ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟಿದ ದಿನೇಶ್ ಕಾರ್ತಿಕ್ ಅವರ ಸುಮಾರು 20 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣಕ್ಕೆ ಇಂದು ಫುಲ್ ಸ್ಟಾಪ್ ಬಿದ್ದಿದೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ದಿನೇಶ್ ಕಾರ್ತಿಕ್ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಬಾಲ್ಯದಿಂದ ವೃತ್ತಿಜೀವನದ ಅಂತ್ಯದವರೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಕಾರ್ತಿಕ್, ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಭಾವುಕ ವಿದಾಯ ಹೇಳಿದ ಡಿಕೆ
ತುಂಬಾ ಭಾವುಕರಾಗಿ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿರುವ ದಿನೇಶ್ ಕಾರ್ತಿಕ್, ‘ಕಳೆದ ಕೆಲವು ದಿನಗಳಿಂದ ನಿಮ್ಮೆಲ್ಲರಿಂದ ನನಗೆ ಸಿಕ್ಕಿರುವ ಪ್ರೀತಿಯಿಂದ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಇದಕ್ಕಾಗಿ ನಾನು ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹೆಚ್ಚು ಯೋಚಿಸಿದ ನಂತರ, ನಾನು ಈಗ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಮತ್ತು ಜೀವನದಲ್ಲಿ ಇತರ ವಿಷಯಗಳನ್ನು ಮುಂದುವರಿಸಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ನನ್ನ ಎಲ್ಲಾ ಕೋಚ್‌ಗಳು, ನಾಯಕ, ತಂಡದ ಸಹ ಆಟಗಾರರು, ಆಯ್ಕೆದಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
IPL: ಐಪಿಎಲ್ನಿಂದ ದಿನೇಶ್ ಕಾರ್ತಿಕ್ ಸಂಪಾದಿಸಿದ್ದು ಎಷ್ಟು ಕೋಟಿ ಗೊತ್ತಾ?
ನಮ್ಮ ದೇಶದಲ್ಲಿ ಬಹಳಷ್ಟು ಜನರು ಕ್ರಿಕೆಟ್ ಆಡುತ್ತಾರೆ, ಹಾಗಾಗಿ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನನ್ನ ತಂದೆ-ತಾಯಿ ಸದಾ ತನಗೆ ಶಕ್ತಿ ನೀಡುತ್ತಿದ್ದರು, ಅವರಿಲ್ಲದಿದ್ದರೆ ತಾನು ಈ ಹಂತಕ್ಕೆ ಬರುತ್ತಿರಲಿಲ್ಲ. ನನ್ನ ವೃತ್ತಿಜೀವನಕ್ಕೆ ಬೆನ್ನೇಲುಬಾಗಿ ನಿಲ್ಲಲು ತನ್ನ ವೃತ್ತಿಜೀವನವನ್ನು ಸ್ಥಗಿತಗೊಳಿಸಿದ ಪತ್ನಿ ದೀಪಿಕಾ ಪಳ್ಳಿಕಲ್ ಅವರಿಗೂ ದಿನೇಶ್ ಕಾರ್ತಿಕ್ ಧನ್ಯವಾದ ಅರ್ಪಿಸಿದ್ದಾರೆ.
It’s official 💖
Thanks DK 🙏🏽 pic.twitter.com/NGVnxAJMQ3
— DK (@DineshKarthik) June 1, 2024
ಹೀಗಿತ್ತು ಡಿಕೆ ವೃತ್ತಿಜೀವನ
ದಿನೇಶ್ ಕಾರ್ತಿಕ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ, ಅವರು 167 ಪ್ರಥಮ ದರ್ಜೆ ಪಂದ್ಯಗಳನ್ನು, 260 ಲಿಸ್ಟ್ ಎ ಮತ್ತು 401 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಾರ್ತಿಕ್ ಟೆಸ್ಟ್ ನಲ್ಲಿ 1025 ರನ್, ಏಕದಿನದಲ್ಲಿ 1752 ರನ್, ಟಿ20ಯಲ್ಲಿ 686 ರನ್ ಕಲೆಹಾಕಿದ್ದಾರೆ. ಹಾಗೆಯೇ ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 28 ಶತಕ ಮತ್ತು ಲಿಸ್ಟ್ ಎ ಮಾದರಿಯಲ್ಲಿ 12 ಶತಕಗಳನ್ನು ಬಾರಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಸಿಡಿಸಿದ್ದಾರೆ.
ಬಹಳ ಮುಖ್ಯವಾಗಿ 2007 ರಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದಾಗ ಕಾರ್ತಿಕ್ ಕೂಡ ಆ ತಂಡದ ಪ್ರಮುಖ ಭಾಗವಾಗಿದ್ದರು ಎಂಬುದು ಕಾರ್ತಿಕ್ ಅವರ ಸಾಧನೆಗಳಲ್ಲಿ ಪ್ರಮುಖವಾದುದ್ದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Sat, 1 June 24