T20 World Cup 2024: 6,6,6,6.. ಅಜೇಯ ಅರ್ಧಶತಕ! ಬಾಂಗ್ಲಾ ಬೌಲರ್ಗಳ ಬೆವರಿಳಿಸಿದ ಪಂತ್; ವಿಡಿಯೋ ನೋಡಿ
T20 World Cup 2024: ತಮ್ಮ ಇನ್ನಿಂಗ್ಸ್ನಲ್ಲಿ 32 ಎಸೆತಗಳನ್ನು ಎದುರಿಸಿದ ಪಂತ್ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳ ಇನ್ನಿಂಗ್ಸ್ ಆಡಿದರು.ಅದರಲ್ಲೂ ಬಾಂಗ್ಲಾದೇಶ ತಂಡದ ಅನುಭವಿ ಸ್ಪಿನ್ನರ್ ಶಕೀಬ್ ಅಲ್ ಹಸನ್ ಬೌಲ್ ಮಾಡಿದ ಇನ್ನಿಂಗ್ಸ್ನ 6ನೇ ಓವರ್ನಲ್ಲಿ ಅಂದರೆ ಪವರ್ ಪ್ಲೇಯ ಕೊನೆಯ ಓವರ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಪಂತ್ ಒಂದೇ ಓವರ್ನಲ್ಲಿ 3 ಸಿಕ್ಸರ್ ಬಾರಿಸಿದರು.
2024 ರ ಟಿ20 ವಿಶ್ವಕಪ್ (T20 World Cup 2024) ನಾಳೆಯಿಂದ ಆರಂಭವಾಗಲಿದೆ.ಆದರೆ ಅದಕ್ಕೂ ಮುನ್ನ ಪ್ರಸ್ತುತ ಅಭ್ಯಾಸ ಪಂದ್ಯಗಳು ನಡೆಹಯುತ್ತಿವೆ. ಅದರ ಭಾಗವಾಗಿ ಇಂದು ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವೆ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ (Team India) ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಬಾಂಗ್ಲಾದೇಶ ಬೌಲರ್ಗಳ ಬೆವರಿಳಿಸಿ ಅಜೇಯ ಅರ್ಧಶತಕ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
32 ಎಸೆತಗಳಲ್ಲಿ ಅರ್ಧಶತಕ
ತಮ್ಮ ಇನ್ನಿಂಗ್ಸ್ನಲ್ಲಿ 32 ಎಸೆತಗಳನ್ನು ಎದುರಿಸಿದ ಪಂತ್ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 53 ರನ್ಗಳ ಇನ್ನಿಂಗ್ಸ್ ಆಡಿದರು.ಅದರಲ್ಲೂ ಬಾಂಗ್ಲಾದೇಶ ತಂಡದ ಅನುಭವಿ ಸ್ಪಿನ್ನರ್ ಶಕೀಬ್ ಅಲ್ ಹಸನ್ ಬೌಲ್ ಮಾಡಿದ ಇನ್ನಿಂಗ್ಸ್ನ 6ನೇ ಓವರ್ನಲ್ಲಿ ಅಂದರೆ ಪವರ್ ಪ್ಲೇಯ ಕೊನೆಯ ಓವರ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಪಂತ್ ಒಂದೇ ಓವರ್ನಲ್ಲಿ 3 ಸಿಕ್ಸರ್ ಬಾರಿಸಿದರು.
An absolute pleasure to watch him again in 🇮🇳 colours. 🥹💙#PlayBold #TeamIndia #T20WorldCup #INDvBAN @RishabhPant17 pic.twitter.com/UwwHajuB6x
— Royal Challengers Bengaluru (@RCBTweets) June 1, 2024
ಇನ್ನು ಪಂದ್ಯದ ಬಗ್ಗೆ ಹೇಳಬೇಕೆಂದರೆ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದ ಪರ ನಾಯಕ ರೋಹಿತ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಸಂಜು ಸ್ಯಾಮ್ಸನ್ 6 ಎಸೆತಗಳಲ್ಲಿ 1 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದರು.ಆದರೆ ನಾಯಕನ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 23 ರನ್ ಕಲೆಹಾಕಿ ಕ್ಯಾಚಿತ್ತು ನಿರ್ಗಮಿಸಿದರು. ಸುದ್ದಿ ಬರೆಯುವ ಹೊತ್ತಿಗೆ ಟೀಂ ಇಂಡಿಯಾ 15 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದೆ.
The Hitman is up and running! 💙 Massive six!!
Will #RohitSharma guide #TeamIndia to a mammoth total in this warm-up game against Bangladesh? 🤔
📺 #BANvIND | LIVE NOW | #T20WorldCupOnStar (Only available in India) pic.twitter.com/0DcOCYKMez
— Star Sports (@StarSportsIndia) June 1, 2024
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ (ನಾಯಕ), ತಸ್ಕಿನ್ ಅಹ್ಮದ್, ಲಿಟ್ಟನ್ ದಾಸ್, ಸೌಮ್ಯ ಸರ್ಕಾರ್, ತಂಝಿದ್ ಹಸನ್ ತಮೀಮ್, ಶಕೀಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮದ್ ಉಲ್ಲಾ ರಿಯಾದ್, ಜೇಕರ್ ಅಲಿ ಅನಿಕ್, ತನ್ವಿರ್ ಇಸ್ಲಾಂ, ಮಹೇದಿ ಹಸನ್, ರಿಶಾದ್ ಹುಸೇನ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.
ಮೀಸಲು ಆಟಗಾರರು: ಅಫೀಫ್ ಹೊಸೈನ್, ಹಸನ್ ಮಹಮೂದ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Sat, 1 June 24